ಪಡಿತರ ಕಾರ್ಡ್ ಗೊಂದಲ ನಿವಾರಣೆ ಮಾಡುವಲ್ಲಿ ಬಿಜೆಪಿ ವಿಫಲ: ಹರೀಶ್
ಕ.ಪ್ರ.ವಾರ್ತೆ ಕುಣಿಗಲ್ ಏ. 28
ಪಡಿತರ ಕಾರ್ಡ್ ಗೊಂದಲ ನಿವಾರಣೆ ಮಾಡುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ತಪ್ಪುಗಳನ್ನು ಒಪ್ಪಿಕೊಳ್ಳದ ಜೆಡಿಎಸ್ ಪುರಸಭೆ ಸದಸ್ಯರ ಮೇಲೆ ಗೂಬೆ ಕೂರಿಸುತ್ತಿರುವುದು ಖಂಡನೀಯ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್ ತಿಳಿಸಿದರು.
ಭಾನುವಾರು, ಕಾಂಗ್ರೆಸ್, ಬಿಜೆಪಿ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರು ಮತಯಾಚನೆ ಮಾಡುವ ಸಂದರ್ಭದಲ್ಲಿ, ಮತದಾರರು, ನಾಗರಿಕರು ಪಡಿತರ ಕಾರ್ಡ್ ವಿತರಣೆ ವಿಷಯದಲ್ಲಿ, ಬಿಜೆಪಿ ಸರ್ಕಾರದ ತೊಘಲಕ್ ಕ್ರಮಗಳನ್ನು ಖಂಡಿಸಿ, ಮಂಗಳಾರತಿ ಮಾಡುತ್ತಿದ್ದರೆ,ಇದಕ್ಕೆ ಸರಿಯಾದ ಉತ್ತರ ನೀಡಲಾಗದ ಬಿಜೆಪಿ ಮುಖಂಡರು ಪರದಾಟುತ್ತಿದ್ದಾರೆ ಎಂದರು.
ತಕ್ಕ ಪಾಠ ಕಲಿಸಿ: ಪಡಿತರ ಕಾರ್ಡ್ ನಿಮ್ಮ ವಾರ್ಡ್ನ ಪುರಸಭೆ ಸದಸ್ಯರು ಮಾಡಿಸಿಕೊಡಬೇಕಿತ್ತು. ಅದು ಅವರ ಕೆಲಸ ಎಂಬ ಸಬೂಬು ಹೇಳುತ್ತಾ, ನಮಗೆ ಬೆಂಬಲಿಸಿದರೆ, ಪಡಿತರ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಈಗ ಮತಯಾಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಹುತೇಕ ಐದು ವರ್ಷ ಪೂರ್ಣಗೊಳಿಸುತ್ತಿದ್ದರೂ ಪಡಿತರ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳದೆ ಜನತೆಯನ್ನು ಶೋಷಣೆ ಮಾಡಿದ್ದು, ಈಗ ಮತದಾರರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ, ಪಟ್ಟಣದಲ್ಲಿ ಬಹುಮತ ಹೊಂದಿರುವ ಜೆಡಿಎಸ್ ಪುರಸಭೆ ಸದಸ್ಯರ ಮೇಲೆ ಗೂಬೆಕೂರಿಸುವ ಯತ್ನ ಮಾಡುತ್ತಿದೆ. ಪ್ರಜ್ಞಾವಂತ ಮತದಾರರು ಈ ಬಗ್ಗೆ ಎಚ್ಚೆತ್ತು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದರು.
ಪಟ್ಟಣದ ಪ್ರಮುಖ ಕಾಂಗ್ರೆಸ್ ಮುಖಂಡ, ಜಿಲ್ಲಾ ಅಂಬರೀಶ್ ಸಂಘದ ಅಧ್ಯಕ್ಷ ಕೋಟೆನಾಗೇಶ್, ತಾಲೂಕು ಸಂಘದ ಅಧ್ಯಕ್ಷ ವೆಂಕಟೇಶ, ಪ್ರಮುಖರಾದ ಪೈಲ್ವಾನ್ ಕಂಠಯ್ಯ, ಕೋಟೆ ಶ್ರೀನಿವಾಸ, ಬೆಟ್ಟೇಗೌಡ, ಹೇಮಂತ, ಸುರೇಶ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಹಾಗೂ ಬಿಜೆಪಿ ಮುಖಂಡ ರಾಜೇಶ, ಅವಿನಾಶ್, ಲೋಕೇಶ್ ಅವರು ಯುವ ಜನತಾದಳದ ರಾಜ್ಯ ಪ್ರದಾನ ಕಾರ್ಯದರ್ಶಿ ಜಗದೀಶ್ ಸಮ್ಮುಖದಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

