ತುಮಕೂರು

ಛಲವಾದಿ-ಮಾದಿಗ ಒಕ್ಕೂಟ ಕಾಂಗ್ರೆಸ್ ಬೆಂಬಲಿಸಲು ಸಾಹಿತಿ ಸಿದ್ದಯ್ಯ ಮನವಿ

Published On :

ಕ.ಪ್ರ.ವಾರ್ತೆ   ಮಧುಗಿರಿ   ಏ.29
ಮಧುಗಿರಿ ವಿಧಾನಸಭಾ ಕ್ಷೇತ್ರದ ಎಲ್ಲ ಛಲವಾದಿ-ಮಾದಿಗ ಒಕ್ಕೂಟ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರನ್ನು ಬೆಂಬಲಿಸುವಂತೆ ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ತಾಲೂಕಿನ ಮಾದಿಗ ಹಾಗೂ ಛಲವಾದಿ ಜನಾಂಗಕ್ಕೆ ಕರೆ ನೀಡಿದ್ದಾರೆ.
 ಇಲ್ಲಿನ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಶ್ರೀಸಾಮಾನ್ಯರ ನೋವು-ನಲಿವಿಗೆ ಸ್ಪಂದಿಸಿ ಕೆಲಸ ಮಾಡುತ್ತಾರೆ. ಅಲ್ಲದೆ ರಾಜಣ್ಣ ಎರಡು ಸಲ ಸೋತರು ಕೂಡ ದೃತಿಗೆಡದೆ ಕ್ಷೇತ್ರದಲ್ಲಿ ನಿಂತು ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ಆದ ಕಾರಣ ಇಂತಹ ವ್ಯಕ್ತಿಯನ್ನು ಮಾದಿಗ-ಛಲವಾದಿಗಳು ಒಗ್ಗೂಡಿ ರಾಜಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕ್ಷೇತ್ರದಲ್ಲಿ ಬಿಎಸ್ಪಿ,  ಜೆಡಿಎಸ್ ಏಜಂಟರಂತೆ ವರ್ತಿಸಿಸುತ್ತಿದ್ದು ಬಿಎಸ್ಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಟೆಂಟ್ ರಾಜಕಾರಣ ಮಾಡುತ್ತಿದ್ದಾರೆಯೇ   ಹೊರೆತು   ಪ್ರಜಾಪ್ರಭುತ್ವದಲ್ಲಿ ಎಸ್ಸಿ - ಎಸ್ಟಿ ಜನರಲ್ಲಿರುವ ಐಕ್ಯತೆ ಮನೋಭಾವ ಹೊಡೆಯಲು ಯತ್ನಿಸುತ್ತಿದೆ. ಇದು ನಡೆಯುವುದಿಲ್ಲ ಎಂದು ಕಿಡಿಕಾರಿದ ಸಿದ್ದಯ್ಯ ರಾಜ್ಯದ್ಯಂತ ಕಾಂಗ್ರೆಸ್‌ಅನ್ನು ಛಲವಾದಿ-ಮಾದಿಗ ಒಕ್ಕೂಟಗಳು ಒಗ್ಗಟ್ಟಾಗಿ ಬೆಂಬಲಿಸಬೇಕು ಎಂದು ಕರೆಯಿತ್ತರು.
ಜೆಡಿಎಸ್ ಅಭ್ಯರ್ಥಿ  ಎಂ.ವೀರಭದ್ರಯ್ಯ   ಮತ್ತು ಬಿಎಸ್ಪಿ ಅಭ್ಯರ್ಥಿ  ಕೋರಮಂಗಲ ಮುನಿಯಪ್ಪ  ಇಬ್ಬರ ಭೂ ಕಬಳಿಕೆಯ ದಾಖಲಾತಿಗಳನ್ನು  ಅತಿ ಶೀಘ್ರದಲ್ಲೇ    ಜನರ ಮುಂದಿಡುವುದಾಗಿ ತಿಳಿಸಿದ ಅವರು, ಇಬ್ಬರು  ಸಮಾನ ಮನಸ್ಕರಾಗಿದ್ದು ಈ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಛಲವಾದಿ-ಮಾದಿಗ ಮುಖಂಡರಾದ  ಆರ್. ಧ್ರುವಕುಮಾರ್,  ಎಸ್.ಡಿ.ಕೃಷ್ಣಪ್ಪ, ರಾಜಗೋಪಾಲ್, ಬಸವನರಾಜು, ನರಸಿಂಹಮೂರ್ತಿ, ಬಸ್ತಪ್ಪ, ಕೆಂಚರಾಜು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.