ತುಮಕೂರು

ಜನರ ಓಲೈಕೆಗೆ ಮುಂದಾದ ಜನನಾಯಕರು...

Published On :

ತುರುವೇಕೆರೆ: ಭೇದ ಭಾವವಿಲ್ಲದೆ ಸುತ್ತುತ್ತಾ ಮತದಾರನ ಮುಂದೆ ಕೈ ಚಾಚಿ ಬೇಡುತ್ತ ಬಿರುಸಿನ ಪ್ರಚಾರಕ್ಕಿಳಿದಿದ್ದಾರೆ ಇಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ದಂಡಿನಶಿವರ ಗ್ರಾಮದಲ್ಲಿ ನಡೆದ ಸಂತೆಯಂದು ಬಿಜೆಪಿಯ ಬಿ.ಕೆ.ಸೋಮಣ್ಣ, ಪಕ್ಷೇತರ ಅಭ್ಯರ್ಥಿ ಎಚ್.ಮಹೇಶ್, ಬಿಎಸ್‌ಆರ್‌ನ ಹೆಲಿಕಾಫ್ಟ್ರರ್ ರಾಜಶೇಖರ್, ಪಕ್ಷೇತರ ಅಭ್ಯರ್ಥಿಯಾಗಿರುವ ಎನ್.ಸಿ.ಪ್ರಕಾಶ್, ಕೆಜೆಪಿಯ ಅಭ್ಯರ್ಥಿ ಮಸಾಲಾ ಜಯರಾಂ....... ಹೀಗೆ ಒಂದಲ್ಲಾ ಒಂದು ಪಕ್ಷದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾರ ಪ್ರಭುವಿನ ಮನ ಗೆಲ್ಲಲು ಬಿಸಿಲಿನ ಝಳವನ್ನೂ ಲೆಕ್ಕಿಸದೇ ಕೈ ಮುಗಿದು ಸಾಗುತ್ತಿದ್ದುದು ಗಮನ ಸೆಳೆಯಿತು.
ಮೆಡಿಕಲ್ ಕಾಲೇಜು ಸ್ಥಾಪನೆಗೆ ಆದ್ಯತೆ: ತಮ್ಮನ್ನು ಕ್ಷೇತ್ರದ ಮತದಾರ ಪ್ರಭುಗಳು ಗೆಲ್ಲಿಸಿದಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಭರವಸೆಯನ್ನು ಬಿಜೆಪಿ ಅಭ್ಯರ್ಥಿ ಬಿ.ಕೆ.ಸೋಮಣ್ಣ ನೀಡಿದ್ದಾರೆ. ಸದ್ಯ ತಾಲೂಕನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವುದು, ಗೂಂಡಾ ಸಂಸ್ಕೃತಿಯಿಂದ ದೂರ ಮಾಡುವುದು, ಗುಡಿಸಿನಲ್ಲಿರುವವರಿಗೆ ಸೂರು ನೀಡುವುದೂ ಸಹ ತಮ್ಮ ಉದ್ದೇಶವೆನ್ನುತ್ತಾರೆ ಸೋಮಣ್ಣ.
ನೋವು ನಿವಾರಣೆ : ಬಡಜನರ ಹಾಗೂ ಹಿಂದುಳಿದ ಜನರ ನೋವು ನಲಿವುಗಳನ್ನು ಕೇಳುವವರೇ ಇಲ್ಲ. ಯಾವುದೇ ಸರ್ಕಾರಿ ಕೆಲಸವಾಗಬೇಕೆಂದರೂ ಸಹ ಮುಂದುವರೆದ ವರ್ಗದ ಜನರ ಸಹಾಯದಿಂದಲೇ ಪಡೆಯಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದುರಾಡಳಿತಕ್ಕೆ ಬ್ರೇಕ್ ಹಾಕಿ ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವುದೇ ನನ್ನ ಉದ್ದೇಶ ಎಂದು ಬಿಎಸ್‌ಆರ್‌ನಿಂದ ಸ್ಪರ್ಧೆಗೆ ನಿಂತಿರುವ ಹೆಲಿಕಾಫ್ಟರ್ ರಾಜಶೇಖರ್. ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿದ್ದಾರೆ. ಅವರಿಗೆ ಧನಿಯಾಗಿ ಅವರ ಅಭಿವೃಧ್ಧಿಗೆ ದಾರಿಯಾಗುತ್ತೇನೆ ಎಂಬ ಭರವಸೆಯನ್ನೂ ಸಹ ರಾಜಶೇಖರ್ ನೀಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.