ಪಾವಗಡ: ರಂಗೇರಿದ ಚುನಾವಣೆ ಕಾವು
ಕ.ಪ್ರ.ವಾರ್ತೆ ಪಾವಗಡ ಏ.29
ಚುನಾವಣೆಯ ಕಾವು ತಾಲೂಕಿನಲ್ಲಿ ರಂಗೇರಿದ್ದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬಿಎಸ್ಆರ್, ಕೆಜೆಪಿ, ಜೆಡಿಯು ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳಲ್ಲಿ ಪ್ರಚಾರದ ಅಬ್ಬರ ಬಿರುಸಾಗಿದೆ.
ಮೇಲ್ನೋಟಕ್ಕೆ ತಾಲೂಕಿನ ಯಾವುದೇ ಗ್ರಾಮಕ್ಕೆ ಹೋದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.
ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ತಮ್ಮ ಮುಖಂಡರೊಂದಿಗೆ ತಾಲೂಕಿನಾದ್ಯಂತ ಪ್ರಚಾರ ಹಮ್ಮಿಕೊಂಡು ಅನೇಕ ಭರವಸೆಗಳೊಂದಿಗೆ ಮನೆಮನೆಗೆ ತೆರಳಿ ಮತದಾರರನ್ನು ಮನವೊಲಿಸುತ್ತಿದ್ದಾರೆ. ಅಲ್ಲದೆ ತಂದೆ, ಶಾಸಕ ವೆಂಕಟರಮಣಪ್ಪ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿ ಮತಯಾಚನೆಯಲ್ಲಿ ನಿರತರಾಗಿದ್ದಾರೆ. ಬಹು ಸಂಖ್ಯಾತ ನಾಯಕ, ಗೊಲ್ಲ, ಕುರುಬ, ಬೋವಿ, ಅಲ್ಪಸಂಖ್ಯಾತ ದಲಿತರು ಸೇರಿದಂತೆ ಎಲ್ಲಾ ವರ್ಗದ ಮತಗಳ ಮೇಲೆ ಕಣ್ಣಿಟ್ಟು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ನಿಮ್ಮ ಸಮಸ್ಯೆಗಳಿಗೆ ಬದ್ಧರಾಗಿ ಕೆಲಸ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ವೈ.ಎನ್ ಹೊಸಕೋಟೆ, ತಿರುಮಣಿ, ಕಸಬಾ, ನಿಡಗಲ್ ಹೋಬಳಿ ವ್ಯಾಪ್ತಿಗಳಲ್ಲಿ ಕಾಂಗ್ರೆಸ್ ಅಲೆ ವ್ಯಾಪಕವಾಗಿದೆ.
ಜೆಡಿಎಸ್ ಅಭ್ಯರ್ಥಿ ಬಿರುಸಿನ ಪ್ರಚಾರ: ಮೇಲ್ವರ್ಗದ ಮತದ ಮೇಲೆ ಕಣ್ಣಿಟ್ಟು ಮತಯಾಚಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಶತಯ ಗತಾಯ ಚುನಾವಣೆಯಲ್ಲಿ ಗೆದ್ದೇ ತೀರಬೇಕೆಂಬ ನಿರೀಕ್ಷೆಯಲ್ಲಿ ಪ್ರವಾಸ ಕೈಗೊಂಡು ಶ್ರಮಿಸುತ್ತಿದ್ದಾರೆ. ಇವರಿಗೆ ನಿಡಗಲ್, ಕಸಬಾ, ತಿರುಮಣಿ, ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಗಳು ಸೇರಿದಂತೆ ನಾಗಲಮಡಿಕೆ, ಲಿಂಗದಹಳ್ಳಿ, ರಂಗಸಮುದ್ರ ಹುಸೇನ್ಪುರ ಗುಜ್ಜನಡು, ಮಂಗಳವಾಡ ಮುಂತಾದ ಭಾಗಗಳಲ್ಲಿ ಬೆಂಬಲ ಕಂಡುಬರುತ್ತಿದೆ.
ಬಿಜೆಪಿ ಅಭ್ಯರ್ಥಿ ವಿಜಯರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಶಿವಪ್ರಸಾದ್ ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಪ್ರಚಾರ ಹಮ್ಮಿಕೊಂಡು ಮತಯಾಚನೆಯಲ್ಲಿ ನಿರತರಾಗಿದ್ದಾರೆ. ತಮ್ಮ ಮಾತಿನ ಮೋಡಿಯಲ್ಲಿ ಮತದಾರರ ಮನ ಸೆಳೆಯುತ್ತಿದ್ದು ಗೆದ್ದರೆ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವ ಭರವಸೆ ನೀಡಿದ್ದಾರೆ.
ಕೆಜೆಪಿಯ ಪಾವಗಡ ಶ್ರೀರಾಮ್, ಬಿಎಸ್ಆರ್ ಕಾಂಗ್ರೆಸ್ನ ಉಗ್ರನರಸಿಂಹಪ್ಪ, ಬಿಎಸ್ಪಿ ನಾಗರತ್ನಮ್ಮ, ಜೆಡಿಯು ಗೋಪಾಲನಾಯಕ್ ಮುಂತಾದವರು ಪ್ರಚಾರ ಹಮ್ಮಿಕೊಂಡಿದ್ದು ತಮ್ಮ ಬೆಂಬಲಿಗ ರೊಂದಿಗೆ ಮನೆಮನೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

