ಕೆಜೆಪಿಯಿಂದ ಬೃಹತ್ ರೋಡ್ ಶೋ
ಗುಬ್ಬಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆಜೆಪಿಯಿಂದ ಮಂಗಳವಾರ ಏರ್ಪಡಿಸಿದ್ದ ರೊಡ್ ಶೋನಲ್ಲಿ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ ಅವರೊಂದಿಗೆ ಕಾರ್ಯಕರ್ತರು ಪಟ್ಟಣದ ಸಿಡಿಲು ಬಸವಣ್ಣನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಪಾರ ಬೆಂಬಲಿಗರೊಂದಿಗೆ ಏತ್ತಿನಗಾಡಿಯನ್ನೇರಿ ವಿವಿಧ ಕಲಾತಂಡಗಳ ಜೊತೆಗೆ ಕಾರ್ಯಕರ್ತರು ಘೋಷಣೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮತಯಾಚಿಸಿದರು. ಈ ರೋಡ್ ಶೋನಲ್ಲಿ ಜಿ.ಪಂ.ಸದಸ್ಯ ಚಂದ್ರಶೇಖರ ಬಾಬು, ಪ.ಪಂ.ಸದಸ್ಯರಾದ ಜಿ.ಸಿ.ಲೋಕೇಶ್ ಬಾಬು, ಕೃಷ್ಣಮೂರ್ತಿ, ವಿರೂಪಾಕ್ಷ, ಪ.ಪಂ.ಮಾಜಿ ಸದಸ್ಯರಾದ ಶಾರದಕೃಷ್ಣಪ್ಪ, ಹರೀವೆಸಂದ್ರ ಸಿದ್ದಲಿಂಗಪ್ಪ ಹಾಗೂ ದಯಾನಂದ ಇದ್ದರು.
ತಪಾಸಣೆ ನಡೆಸಿ ಹಣ ವಶ
ಗುಬ್ಬಿ: ತಾಲೂಕಿನ ಹೊಸಕೆರೆ ಗ್ರಾಮದ ಹಾಲಿನ ಡೈರಿಯ ಕಾರ್ಯದರ್ಶಿ ಎಚ್.ಡಿ. ನಾರಾಯಣಮೂರ್ತಿ ಸೋಮವಾರ ರಾತ್ರಿ 37 ಸಾವಿರ ರು. ಗಳನ್ನು ತೆಗೆದುಕೊಂಡು ಹೋಗುವಾಗ ಚುನಾವಣಾ ಜಾಗೃತದಳದವರು ತಪಾಸಣೆ ನಡೆಸಿ ಹಣವನ್ನು ವಶಪಡಿಸಿಕೊಂಡರು. ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್ನ ಬೈಕ್ ಶೋ ಪ್ರಚಾರದಲ್ಲಿ ಅನುಮತಿ ಇಲ್ಲದೆ ಪ್ರಚಾರದಲ್ಲಿ ತೊಡಗಿದ್ದ ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಕಾರ್ಮಿಕ
ದಿನಾಚರಣೆ
ತುಮಕೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಮೇ 1 ರಂದು ನಗರದ ರವೀಂದ್ರ ಕಲಾನಿಕೇತನದಲ್ಲಿ ಬೆಳಗ್ಗೆ 11 ಗಂಟೆಗೆ ಮೇ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಎಸ್. ನಿರಂಜನಾರಾಧ್ಯ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಕೆ.ದೊರೈರಾಜ, ಕೆ.ಎಲ್. ಮಧುಸೂದನ್, ನಾಗರಾಜು, ಬಿ. ಉಮೇಶ್, ಗುಲ್ಜಾರ್ಬಾನು, ರಾಮಚಂದ್ರಶರ್ಮ, ಎನ್.ಕೆ. ಸುಬ್ರಹ್ಮಣ್ಯ, ಸೈಯಜ್ ಮುಜೀಬ್ ಮುಂತಾದವರು ಭಾಗವಹಿಸುವರು. ಅಂದು ಬೆಳಗ್ಗೆ 11 ಗಂಟೆಗೆ ಟೌನ್ಹಾಲ್ ವೃತ್ತದಲ್ಲಿ ಕಾರ್ಮಿಕರು ಸಮಾವೇಶಗೊಂಡ ನಂತರ ಬಿ.ಎಚ್. ರಸ್ತೆ ಮೂಲಕ ರವೀಂದ್ರ ಕಲಾನಿಕೇತನಕ್ಕೆ ತೆರಳಿ ಸಭೆ ನಡೆಸುವರು ಎಂದು ತಾ. ಅಧ್ಯಕ್ಷ ಪುಟ್ಟೇಗೌಡ, ಕಾರ್ಯದರ್ಶಿ ಷಣ್ಮುಖಪ್ಪ, ಉಪಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

