ತುಮಕೂರು

ಅಡುಗೆ ಅನಿಲ ಸೋರಿಕೆಯಿಂದ ಮಹಿಳೆಗೆ ಗಾಯ, ಮನೆಯ ಛಾವಣಿ ಛಿದ್ರ

Published On :

ಕುಣಿಗಲ್: ಅಡುಗೆ ಅನಿಲ ಸೋರಿಕೆಯಿಂದಾಗಿ, ಬೆಂಕಿ ಹೊತ್ತಿಕೊಂಡು ಮಹಿಳೆಯೊಬ್ಬರು ಗಾಯಗೊಂಡರೆ, ಮನೆಯ ಛಾವಣಿ ಛಿದ್ರಗೊಂಡಿರುವ ಘಟನೆ ಹುಲಿಯೂರು ದುರ್ಗ ದಲ್ಲಿ ಸೋಮವಾರ ಬೆಳಗಿನ ಜಾವ  ಸಂಭವಿಸಿದೆ.
 ಹುಲಿಯೂರುದುರ್ಗದಲ್ಲಿನ ಭಾರತ್ ಗ್ಯಾಸ್ ಎಜೆನ್ಸಿಯಲ್ಲಿ ಅಡುಗೆ ಅನಿಲ ಸಿಲೆಂಡರ್ಗಳ ಪೂರೈಕೆ ಮಾಡುವ ಆಟೋಚಾಲಕ ಶಂಕರ್ ಎಂಬಾತನ ಮನೆಯಲ್ಲಿ, ಸೋಮವಾರ ಬೆಳಗ್ಗೆ ಆತನ ಪತ್ನಿ ಶಿವರತ್ನ (23) ಹಾಲುಕಾಯಿಸಲು, ಬೆಂಕಿ ಹೊತ್ತಿಸಿದಾಗ ಕ್ಷಣಮಾತ್ರದಲ್ಲಿ ಬೆಂಕಿ ಅವರಿಸಿ, ಆಕೆಯ ಮುಖ ದೇಹದ ಮೇಲ್ಭಾಗ ಸುಟ್ಟಗಾಯಗಳಾದರೆ,  ಶಂಕರ್ (26), ಎರಡು ವರ್ಷದ ಮಗನಾದ ಜಯಂತ್ಗೂ ಸಣ್ಣಪುಟ್ಟ  ಸುಟ್ಟಗಾಯಗಳಾಗಿದ್ದು, ನೆರೆಹೊರೆಯವರು ಬಂದು ಬೆಂಕಿ ನಂದಿಸಿದರು.
ಅನಿಲ ಸೋರಿಕೆಯ ರಭಸಕ್ಕೆ ಮನೆಯ ಮೇಲ್ಛಾವಣಿಯ ಶೀಟುಗಳು ಹಾಳಾಗಿದ್ದು, ಘಟನೆಯ ಬಹುಹೊತ್ತಿನ ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ರೆಗ್ಯೂಲೇಟರ್ನಲ್ಲಿ ಸೋರಿಕೆಯೆ ಘಟನೆಗೆ ಕಾರಣವೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿ ಉಮಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಳೆ ಸಿದ್ದಗಂಗಾ ಮಠದಲ್ಲಿ ಕಾರ್ಯಕ್ರಮ
ತುಮಕೂರು: ಆ. 7 ರಂದು ಸಿದ್ದಗಂಗಾ ಮಠದ ಸಂಯುಕ್ತ ವಿದ್ಯಾರ್ಥಿ ಸಂಘದ ವತಿಯಿಂದ ಮಠದ ಆವರಣದಲ್ಲಿ  ಉದ್ಘಾಟನಾ ಸಮಾರಂಭ ಏರ್ಪಾಟಾಗಿದೆ. ಸಮಾರಂಭವನ್ನು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ವಹಿಸಲಿದ್ದಾರೆ. ಸಾನಿಧ್ಯವನ್ನು ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ವಹಿಸಲಿದ್ದಾರೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮಿಗಳು ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.