ಕೆರೆಗೋಡಿ- ರಂಗಾಪುರ ಮಠಕ್ಕೆ ನೀರು ಶುದ್ಧೀಕರಣ ಯಂತ್ರ
ತಿಪಟೂರು: ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರತಿನಿತ್ಯ ಮಠಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಇಲ್ಲಿ ಶುದ್ಧೀಕರಣ ಯಂತ್ರವನ್ನು ಸ್ಥಾಪಿಸಿರುವ ಡಾ.ಶ್ರೀಧರ್ ಅವರ ಕೆಲಸ ಶ್ಲಾಘನೀಯ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. ತಾಲೂಕಿನ ಕೆರೆಗೋಡಿ-ರಂಗಾಪುರ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ದಾಸೋಹದಲ್ಲಿ ಸುಮಾರು 4-5ಲಕ್ಷ ರು. ವೆಚ್ಚದಲ್ಲಿ ಡಾ.ಶ್ರೀಧರ್ ಅವರ ತಂದೆ ಡಾ.ಸತ್ಯ ಕುಮಾರ್ ಅವರ ನೆನಪಿನಲ್ಲಿ ಪ್ರತಿಷ್ಠಾಪಿಸಿರುವ ನೀರು ಶುದ್ಧೀಕರಣ ಯಂತ್ರವನ್ನು ಚಾಲನೆ ಮಾಡಿದ ನಂತರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು ಸರ್ವೇ ಜನೋ ಸುಖಿನೋಭವಂತು ಎಂಬಂತೆ ಸರ್ವರಿಗೂ ಆರೋಗ್ಯ ಭಾಗ್ಯ ನೀಡುವ ಇಂತಹ ಪುಣ್ಯದ ಕೆಲಸವನ್ನು ಡಾ.ಶ್ರೀಧರ್ ಮಾಡುತ್ತಿದ್ದು, ಕಳೆದ ತಿಂಗಳು ಗಾಂಧಿನಗರ ಬಡಾವಣೆಯಲ್ಲಿ ಬಡವರಿಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ತೆಗೆಸಿದ್ದನ್ನು ಸ್ಮರಿಸಿದರು. ತಮ್ಮ ಆಸ್ಪತ್ರೆಯಲ್ಲೂ ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಇಂತಹ ವೈದ್ಯರು ಅಪರೂಪ ಎಂದು ಶ್ರೀಗಳು ತಿಪಟೂರಿಗೆ ಇವರ ಆಸ್ಪತ್ರೆಯೇ ಸಾರ್ವಜನಿಕ ಆಸ್ಪತ್ರೆಯಾಗಿದೆ ಎಂದರು. ವೈದ್ಯ ಡಾ.ಶ್ರೀಧರ್ ಮಾತನಾಡಿ ತಮ್ಮ ಕುಟುಂಬದ ಬಾಂಧವ್ಯ ಮಠದೊಂದಿಗೆ ತಮ್ಮ ತಂದೆ ಕಾಲದಿಂದಲೂ ಇದ್ದುದನ್ನು ಸ್ಮರಿಸಿ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ಅನುಕೂಲವಾಗಲು ಗಂಟೆಗೆ 500 ಲೀಟರ್ ಸಾಮರ್ಥ್ಯವುಳ್ಳ ಶುದ್ಧ ಕುಡಿಯುವ ನೀರು ಘಟಕವನ್ನು ಸ್ಥಾಪಿಸಿ ತಮ್ಮ ಅಳಿಲು ಸೇವೆಗೆ ಅವಕಾಶ ಮಾಡಿಕೊಟ್ಟ ಸ್ವಾಮೀಜಿಯವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ವೈದ್ಯರ ತಾಯಿ ಲಕ್ಷ್ಮಿ ಮತ್ತು ಪತ್ನಿ ಡಾ.ಮೀರಾ ಉಪಸ್ಥಿತರಿದ್ದರು.
ಕರ್ನಾಟಕ ಪ್ರಜಾ ಸೇನೆಗೆ ಆಯ್ಕೆ
ತುಮಕೂರು: ಕರ್ನಾಟಕ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷರಾಗಿ ಸಿದ್ದೇಶ್ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ಪ್ರಜಾಸೇನೆ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮಸ್ವಾಮಿ ಹಾಗೂ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ತಿಳಿಸಿದ್ದಾರೆ.
ಕಾಂಗ್ರೆಸ್ಗೆ ನೇಮಕ
ತುಮಕೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಸಂಚಾಲಕ ಮಸೂದ್ ಫೌಜುದಾರ್ ಅವರ ಆದೇಶದ ಮೇರೆಗೆ ತುಮಕೂರಿನ ಜೆ. ಪಿಶೋನ್ ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಕೆ. ನಯಾಜ್ ಅಹಮದ್ ತಿಳಿಸಿದ್ದಾರೆ.
ಬೆಟ್ಟಸ್ವಾಮಿಗೌಡ ನೇಮಕ
ತುಮಕೂರು: ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಬೆಟ್ಟಸ್ವಾಮಿಗೌಡ ಅವರನ್ನು ನೇಮಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

