ತುಮಕೂರು

'ದುಶ್ಚಟ ಉಳ್ಳವರನ್ನು ಸಜ್ಜನರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ'

Published On :

ತಿಪಟೂರು: ನಾವು ಅನ್ನುವುದಕ್ಕಿಂತ ನಾನು ದುಡಿಯುತ್ತೀನಿ, ನಾನು ದುಶ್ಚಟಗಳನ್ನು ತ್ಯಜಿಸುತ್ತೀನಿ ಎನ್ನುವ ಭಾವನೆಯೊಂದಿಗೆ ಈ ಸಮಾಜಕ್ಕಾಗಿ ದುಡಿಯುತ್ತೀನಿ, ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತೀನಿ ಎನ್ನುವ ಭಾವನೆ ಇದ್ದಾಗ ಮಾತ್ರ ಆರ್ಥಿಕ ಸ್ವಾವಲಂನೆಯೊಂದಿಗೆ ಒಳ್ಳೆಯ ನಡತೆ, ಸಂಸ್ಕೃತಿ  ಸಾಧ್ಯ ಎಂದು ಅಣಪನಹಳ್ಳಿ ಶ್ರೀ ಶನೇಶ್ವರ ದೇವಸ್ಥಾನದ ಶ್ರೀ ನರಸಿಂಹಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ತಾಲೂಕಿನ ನೊಣವಿನಕೆರೆ ಉಡಿಸಲ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ 615ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಮದ್ಯಪಾನಕ್ಕೆ ಬಲಿಯಾದವರನ್ನು ಸಜ್ಜನರನ್ನಾಗಿ ಮಾಡಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಮದ್ಯವರ್ಜನ ಶಿಬಿರವು ಅದ್ಭುತ ಕಾರ್ಯ ಎಂದು ಬಣ್ಣಿಸಿದರು.
 ಯೋಜನೆಯ ಜಿಲ್ಲಾ ನಿರ್ದೇಶಕ ಪಿ.ಗಂಗಾಧರ ರೈ ಮಾತನಾಡಿ ಯೋಜನೆಯ ವಿಸ್ತಾರದ ಬಗ್ಗೆ, ಆರೋಗ್ಯ, ಶಿಕ್ಷಣ, ಹೈನುಗಾರಿಕೆ, ಕೃಷಿ, ಸ್ವ-ಉದ್ಯೋಗ, ಆರ್ಥಿಕ ಸ್ವಾವಲಂಬನೆಯ ಬಗ್ಗೆ ತಿಳಿಸಿ, ಕೇವಲ ಮನಪರಿವರ್ತನೆ, ಯೋಗ, ಧ್ಯಾನಗಳ ಮೂಲಕ ಮದ್ಯಪಾನವನ್ನು ತ್ಯಜಿಸುವ ಕಾರ್ಯವನ್ನು ಮದ್ಯವರ್ಜನ ಶಿಬಿರದ ಮೂಲಕ ಯೋಜನೆಯು ಮಾಡುತ್ತಿದೆ.
ಇಂತಹ ಶಿಬಿರದ ಮೂಲಕ ಶೇ.70ರಷ್ಟು ಮಂದಿ ಅಂದರೆ ಸುಮಾರು 40000 ಮಂದಿ ಕುಡಿತವನ್ನು ಬಿಟ್ಟು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ.
ಪರೋಕ್ಷವಾಗಿ ಸುಮಾರು 20000 ಮಂದಿ ಕುಡಿತವನ್ನು ತ್ಯಜಿಸಿರುವುದು ಸಂತಸದ ವಿಷಯ ಎಂದರು.
ಅಧ್ಯಕ್ಷತೆಯನ್ನು ಮದ್ಯವರ್ಜನ ಶಿಬಿರ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಬಸವರಾಜ್ ವಹಿಸಿದ್ದರು. ಟಿ.ಕೆ. ರಮೇಶ್, ಉಪ ತಹಸೀಲ್ದಾರರು ಸೇರಿದಂತೆ ಯೋನಾಧಿಕಾರಿ ಪಿ.ಶ್ರೀನಿವಾಸ್, ವಲಯ ಮೇಲ್ವಿಚಾರಕರಾದ ಸಚಿನ್, ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.