ಶ್ರೀರಂಗನಾಥ ಪ.ಪೂ. ಕಾಲೇಜಿನಲ್ಲಿ
ಶಿರಾ: ಪಟ್ಟಣದ ಕೆ.ಮಲ್ಲಣ್ಣ ಸ್ಮಾರಕ ಶ್ರೀರಂಗನಾಥ ಪ.ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಹೆಚ್.ಜಿ.ರಂಗಯ್ಯ ದ್ವಜಾರೋಹಣ ನೆರವೇರಿಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಗುಳಿಗೇನಹಳ್ಳಿ ನಾಗರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ನಿರ್ದೆಶಕರುಗಳಾದ ಡಿ.ಸಿ.ಅಶೋಕ್, ಬಾಂಬೆರಾಜಣ್ಣ, ಸತ್ಯನಾರಾಯಣ, ಶ್ರೀನಿವಾಸ್, ಈರಣ್ಣ, ಪ್ರಾಚಾರ್ಯ ಕೆ.ಸೋಮಶೇಖರಪ್ಪ, ಹಿರಿಯ ಉಪನ್ಯಾಸಕರಾದ ಎಂ.ಲೋಕನಾಥ್, ಶಂಕರಪ್ಪ, ವೆಂಕಟಾಚಲ್, ಬಿ.ರಾಮಚಂದ್ರಪ್ಪ, ಸೇರಿದಂತೆ ಹಲವರು ಹಾಜರಿದ್ದರು. ಪ್ರಾಚಾರ್ಯ ಕೆ.ಸೋಮಶೇಖರಪ್ಪ ಸ್ವಾಗತಿಸಿ, ಬಿ.ರಾಮಚಂದ್ರಪ್ಪ ನಿರೂಪಿಸಿದರು. ಶ್ರೀರಂಗನಾಥ ಪ್ರ.ದ. ಕಾಲೇಜಿನ ಪ್ರಾಚಾರ್ಯ ಎಸ್.ಜೆ.ನಾಗರಾಜು ವಂದಿಸಿದರು.
ಈ ದೇಶ ನಮ್ಮದು, ದೇಶಕ್ಕಾಗಿ ನಾವೆಲ್ಲಾ ಎಂದು ಬಾಳಿ
ಹುಳಿಯಾರು: ಇಂದಿನ ಸ್ವಾತಂತ್ರ್ಯ ಅನೇಕ ಮಹಾನ್ ವ್ಯಕ್ತಿಗಳ ಬಲಿದಾನವಾಗಿದ್ದು, ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನದ ಆಚರಣೆ ನಡೆದುಕೊಂಡು ಬಂದಿರುವುದಾಗಿ ಉಪ ತಹಸೀಲ್ದಾರ್ ಎಚ್.ಬಿ.ಬಸವರಾಜು ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ಗ್ರಾ.ಪಂ ಹಾಗೂ ವಿವಿಧ ಸಂಘ ಸಂಸ್ಥೆ, ನಾನಾ ಶಾಲೆಗಳ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಉದ್ಯಮಿ ಎಲ್.ಆರ್.ಚಂದ್ರಶೇಖರ್ ಮಾತನಾಡಿ ಭಾರತ ದೇಶದಲ್ಲಿ ಜನಿಸಿರುವ ನಾವೆಲ್ಲ ಪುಣ್ಯವಂತರು ಎಂದರು. ಪಟ್ಟಣದ ನಾನಾ ಶಾಲೆಯ ಮಕ್ಕಳಿಂದ ವಿವಿಧ ದೇಶಭಕ್ತಿ ಗೀತೆಗಳ ಗಾಯನ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

