ಅತ್ಯಾಚಾರಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಸನ್ಮಾನ:ಭಗತ್ ಕ್ರಾಂತಿ ಸೇನೆ ತೀವ್ರ ಆಕ್ಷೇಪ
ಕುಣಿಗಲ್: ಅತ್ಯಾಚಾರಿಗೆ ತಾಲೂಕು ಆಡಳಿತ ಸನ್ಮಾನಿಸಲು ಮುಂದಾದಾಗ, ಭಗತ್ ಕ್ರಾಂತಿ ಸೇನೆಯ ಪದಾಧಿಕಾರಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತಹಸೀಲ್ದಾರ್ ಮತ್ತು ಶಾಸಕರೊಂದಿಗೆ ವಾಗ್ವಾದ ನಡೆಸಿದ ಘಟನೆ ಸ್ವಾತಂತ್ರ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ನಡೆಯಿತು.
ಗುರುವಾರ, ಸ್ವಾತಂತ್ರ್ಯೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಾಲೂಕು ಆಡಳಿತದ ವತಿಯಿಂದ ಸನ್ಮಾನ ನೆರವೇರಿಸಲಾಗುತಿತ್ತು, ಈ ಸಂಧರ್ಭದಲ್ಲಿ ವೇದಿಕೆಯ ಮೇಲಿದ್ದ ನಿವೃತ್ತ ನೌಕರರ ಒತ್ತಾಯದ ಮೇರೆಗೆ ತಾಲೂಕು ಆಡಳಿತ ನಿವೃತ್ತ ಸೈನಿಕ ಕರೀಗೌಡ ಎಂಬಾತನನ್ನು ಸಾಮಾಜಿಕ ಸೇವೆಗೆ ಎಂದು ಗುರುತಿಸಿ ಸನ್ಮಾನಿಸಲು ವೇದಿಕೆ ಆಹ್ವಾನಿಸಿದರು. ಸ್ಥಳದಲ್ಲಿದ್ದ ಭಗತ್ ಕ್ರಾಂತಿ ಸೇನೆಯ ಮಂಜುನಾಥ್, ವೇದಿಕೆ ಏರಿ ಸದರಿ ಸನ್ಮಾನಿತರು, ಈಗಾಗಲೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಸಮಗ್ರ ವಿಚಾರಣೆ ನಡೆದು ಆರೋಪ ಸಾಬೀತಾದ ಕಾರಣ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಇಂತಹವರಿಗೆ ಪೂರ್ವಾಪರ ವಿಚಾರಿಸದೆ ಸನ್ಮಾನಕ್ಕೆ ಪರಿಗಣಿಸಿರುವುದು ಸರಿಯಲ್ಲ, ಅಲ್ಲದೆ ಇದು ಇಡೀ ತಾಲೂಕು ಆಡಳಿತದ ಗೌರವದ ಪ್ರಶ್ನೆ. ತಾಲೂಕು ಆಡಳಿತ ಸನ್ಮಾನದ ಘನತೆ, ಗೌರವ ಕಾಪಾಡುವಂತೆ ಆಗ್ರಹಿಸಿದರು.
ಇದಕ್ಕೆ ತಹಸೀಲ್ದಾರ್ ಜಗದೀಶ್, ವೇದಿಕೆಗೆ ಕರೆಯಲಾಗಿದೆ, ಏನು ಮಾಡಲಾಗದು ಎಂದರು. ಈ ವಿಷಯ ಶಾಸಕ ಡಿ.ನಾಗರಾಜಯ್ಯ ಗಮನಕ್ಕೆ ತಂದ ಹಿನ್ನೆಲೆ ಶಾಸಕರು ಈಗಾಗಲೆ ಸನ್ಮಾನಕ್ಕೆ ಪರಿಗಣಿಸಿದ್ದು, ವೇದಿಕೆಯಲ್ಲಿ ವಿನಾಕಾರಣ ಪ್ರಸ್ತಾಪ ಬೇಡವೆಂದರು. ಈ ಬಗ್ಗೆ ಮಂಜುನಾಥ್, ತಹಸೀಲ್ದಾರ್, ಶಾಸಕರ ನಡುವೆ ವಾಗ್ವಾದ ನಡೆದು ಶಾಸಕರು, ಮಂಜುನಾಥ್ರನ್ನು ಹೊರಹೋಗುವಂತೆ ಸೂಚಿಸಿ, ಕರೀಗೌಡರನ್ನು ಸನ್ಮಾಸಿದರು. ತಹಸೀಲ್ದಾರ್ ಮಂಜುನಾಥ್ ಅವರನ್ನು ಸಮಾಧಾನಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

