ಯುವ ಜನಾಂಗ ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಬಿಡಲಿ: ಅನಿತಾ
ಮಧುಗಿರಿ: ಸ್ವಾತಂತ್ರ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಯುವ ಜನಾಂಗ ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಬಿಟ್ಟು ದೇಶದ ಅಭ್ಯುದಯಕ್ಕೆ ಆತ್ಮಸಾಕ್ಷಿಯಾಗಿ ತಮ್ಮ ಕರ್ತವ್ಯವನ್ನು ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಸಿ.ಅನಿತಾ ಕರೆ ನೀಡಿದರು.
ಗುರುವಾರ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾ. ಆಡಳಿತ, ತಾ.ಪಂ. ಹಾಗೂ ಪುರಸಭೆ ಅಯೋಜಿಸಿದ್ದ 67ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ಹೋರಾಟ ಮತ್ತು ಅಸಂಖ್ಯಾತ ಮಂದಿ ತ್ಯಾಗ, ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರಕ್ಕೆ ಬಳಸುತ್ತಿರುವ ಇಂದಿನ ಯುವ ಜನಾಂಗ, ತಮ್ಮ ಮನೋಭಾವ ಬದಲಿಸಿಕೊಂಡು ಸ್ವಾತಂತ್ರ್ಯ ಭಾರತದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂಬುದನ್ನು ಅರಿತು ಪ್ರಮಾಣಿಕತೆ, ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ನಮ್ಮೆಲ್ಲರ ಹೊಣೆ: ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿರುವ ತಮ್ಮ ಉತ್ಸಾಹ ಮತ್ತು ಕ್ರಿಯಾಶೀಲತೆ ಕಂಡು ಸಂತಸ ತಂದಿದೆ. ದೇಶವನ್ನು ರಕ್ಷಿಸುವುದು ಮತ್ತು ಪ್ರಗತಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರೆ ಹೊಣೆ ಎಂದರು.
ವಿದ್ಯಾರ್ಥಿ ಹೇಮಾವತಿ, ಮೇಘನಾ, ಗೀತಾಂಜಲಿ, ನಿವೇದಿತ ಗತ ವೈಭವವನ್ನು ನೆನಪು ಮಾಡಿಕೊಟ್ಟರು.ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಸಿದ್ಧಾಗಂಗಾಂಬಿಕೆ, ಜಿ.ಪಂ.ಸದಸ್ಯೆ ಶಾಂತಲ ರಾಜಣ್ಣ, ಸುಮನ, ಎಚ್.ಕೆಂಚಮಾರಯ್ಯ, ಡಿಡಿಪಿಐ ಆಂಜನಪ್ಪ, ಅಬಕಾರಿ ಡಿವೈಎಸ್ಪಿ ಜಯರಾಮೇಗೌಡ, ನೌಕರರ ಸಂಘದ ಅಧ್ಯಕ್ಷ ಎನ್. ಮಹಾಲಿಂಗೇಶ್, ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ,ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್, ಡಿಎಸ್ಎಸ್ ಮುಖಂಡ ತಿಮ್ಮಯ್ಯ, ಪುರಸಭೆ ಸದಸ್ಯ ಗೋಪಿ, ಶ್ರೀನಿವಾಸ್, ಗಂಗಣ್ಣ, ಜುಬೇದ, ತಹಸೀಲ್ದಾರ್ ಕೆ.ರಮೇಶ್, ತಾ.ಪಂ.ಇಓ ಮಹಲಿಂಗಯ್ಯ, ಗುಟ್ಟೆ ಚಿಕ್ಕರಂಗಪ್ಪ, ಅನೇಖರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

