'ಕನಕದಾಸ ಮಾನವ ಕುಲದ ಉನ್ನತಿಗೆ ಶ್ರಮಿಸಿದ ಸಂತ'
ಶಿರಾ: ಕನಕದಾಸರು ಮಾನವ ಕುಲದ ಉನ್ನತಿಗಾಗಿ ಶ್ರಮಿಸಿದ ವೀರ ಸಂತ ಎಂದು ರಾಜ್ಯ ಗಡಿನಾಡ ಜಾನಪದ ಕೇಂದ್ರದ ಸಂಚಾಲಕ, ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯೆಣ್ಣೆಕಟ್ಟೆ ಅಭಿಪ್ರಾಯಪಟ್ಟಿದ್ದಾರೆ. ಅವರು ನಗರದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಸರ್ಕಾರ, ಸಂತ ಕವಿ ಕನಕದಾಸ ರಾಷ್ಟ್ರೀಯ ಅದ್ಯಯನ ಕೇಂದ್ರ ಹಾಗೂ ಕಾಲೇಜಿನ ಪರಂಪರೆ ಕೂಟ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನಕದಾಸ ರಸಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರು ಒಬ್ಬ ಸಂತರಾಗಿ ದಾಸ ಜಾತಿ ವಿನಾಶದಂತಹ ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದ ಬಂಡಾಯ ಕವಿ ಎಂದು ಕನಕದಾಸರ ಸಾಹಿತ್ಯ ನೆಲೆಗಳನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪಿ.ಹೆಚ್.ಮಹೇಂದ್ರಪ್ಪ ಮಾತನಾಡಿ, ಕನಕದಾಸರು ಸಂತರಾದರೂ ಅವರಿಗಿರುವ ಸಾಮಾಜಿಕ ಎಚ್ಚರಿಕೆಯನ್ನು ಕೀರ್ತನೆ ಹಾಗೂ ಕಾವ್ಯಗಳಲ್ಲಿ ಅಭಿವ್ಯಕ್ತಿಪಡಿಸಿ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದವರು ಎಂದರು. ಕಾರ್ಯಕ್ರಮದಲ್ಲಿ ಪ.ನಾ.ಹಳ್ಳಿ ಕಾಲೇಜಿನ ಪ್ರಾಚಾರ್ಯ ಬಿ.ಪಿ.ಪಾಂಡುರಂಗಪ್ಪ, ಡಾ.ಕೃಷ್ಣಮೂರ್ತಿ, ಪರಂಪರ ಕೂಟದ ಸಂಚಾಲಕ ಹೆಚ್.ಗೋವಿಂದಯ್ಯ, ಮತ್ತಿತತರು ಹಾಜರಿದ್ದರು. ದೂರದರ್ಶನ ಕಲಾವಿದೆ ಹೇಮಾಶಂಕರ್ ಹಾಗೂ ತಂಡದವರು ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನೆಡೆಸಿಕೊಟ್ಟರು. ಉಪನ್ಯಾಸಕ ನರಸಿಂಹಚಾರ್ ಸ್ವಾಗತಿಸಿ, ಸಿ.ಮಹಂತೇಶ್ವರಯ್ಯ ವಂದಿಸಿ, ಲಕ್ಷ್ಮಣಪ್ಪ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

