ತುಮಕೂರು

ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನ

Published On :

ತಿಪಟೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲ ವತಿಯಿಂದ ನವೆಂಬರ್ 2ನೇ ವಾರದಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ಡಾ.ಎಂ.ಹೆಚ್.  ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಯನ್ನು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿಯನ್ನು ಜಂಟಿ ನಿರ್ದೇಶಕರ ಕಚೇರಿ ಕೃಷಿ ಇಲಾಖೆ ತುಮಕೂರು, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ ತುಮಕೂರು, ಅಧ್ಯಕ್ಷರು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೃಷಿಕ ಸಮಾಜ ತುಮಕೂರು ಇಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ತಿಪಟೂರು ಕೃಷಿ ವಿಜ್ಞಾನ ಕೇಂದ್ರ 08134-294771ಅಥವಾ 9449866956 ಇಲ್ಲಿಗೆ ಸಂಪರ್ಕಿಸಬಹುದು.

ಹಾಲು ಕರೆಯುವ ಯಂತ್ರ ಪ್ರಾತ್ಯಕ್ಷಿಕೆ ಜತೆಗೆ ಮಾಹಿತಿ
ತಿಪಟೂರು: ತಾಲೂಕಿನ ಬಜಗೂರು ವಲಯದ ಸಣ್ಣೇನಹಳ್ಳಿ ಕಾರ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೈತರಿಗೆ ಹಾಲು ಕರೆಯುವ ಯಂತ್ರದ ಪ್ರಾತ್ಯಕ್ಷಿಕೆ ತರಬೇತಿ ನೀಡಲಾಯಿತು. ತಾಲೂಕಿನ ಯೋಜನಾಧಿಕಾರಿ ಪಿ. ಶ್ರೀನಿವಾಸ್ ತರಬೇತಿಯನ್ನು ಉದ್ಘಾಟಿಸಿ ಹೈನುಗಾರಿಕಾ ಕ್ಷೇತ್ರದಲ್ಲಿ ಆಧುನೀಕರಣದ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ಹೈನುಗಾರಿಕಾ ಮೇಲ್ವಿಚಾರಕರಾದ ಶಶಿಕಿರಣ್ ಹಾಲು ಕರೆಯುವ ಯಂತ್ರದ ಬಳಕೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಒಕ್ಕೂಟದ ಅಧ್ಯಕ್ಷರು, ವಲಯ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

ವೇಶ್ಯಾವಾಟಿಕೆ: ಇಬ್ಬರು ಮಹಿಳೆಯರು
ಸೇರಿದಂತೆ ಆರು ಮಂದಿ ಬಂಧನ
ತುಮಕೂರು: ಕ್ಯಾತಸಂದ್ರ ಗೋಕುಲ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರು, ನಾಲ್ವರು ಪುರುಷರನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಓಮ್ನಿ ಕಾರು, 2 ಪಲ್ಸರ್ ಬೈಕ್, 7500 ನಗದು ಹಾಗೂ 5 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಕುಮಾರಗೌಡ, ಮಹೇಶ್, ರವಿಕುಮಾರ್ ಹಾಗೂ ಚೇತನ್‌ರನ್ನು ಬಂಧಿಸಲಾಗಿದೆ. ಮುಂಗಡವಾಗಿ ಬ್ಯಾಂಕ್ ಅಕೌಂಟ್‌ಗೆ ಹಣ ಸಂದಾಯವಾದ ನಂತರ ಹುಡುಗಿಯರನ್ನು ಪೂರೈಸಲಾಗುತ್ತಿತ್ತು. ಎಸ್‌ಐ ಚನ್ನಯ್ಯ ಹಿರೇಮಠ್ ತಂಡವು ಈ ದಾಳಿ ನಡೆಸಿತ್ತು.

ಡೆಂಘೀ ಜಾಗೃತಿ ಕಾರ್ಯಕ್ರಮ
ಕೊರಟಗೆರೆ: ಇಲ್ಲಿನ ಧಾನ್ ಸಂಸ್ಥೆಯ ಕಟ್ಟೆಗಣಪತಿ ಮಹಿಳಾ ಕಳಂಜಿಯಂ ಒಕ್ಕೂಟ ಮತ್ತು ಆರೋಗ್ಯ ಇಲಾಖೆಯ ಸಹಯೋದದೊಂದಿಗೆ ಬುಧವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಮುಂಭಾಗದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಡೆಂಘೀ ಜಾಗೃತಿ ಜಾಥಾ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡೆಂಗಿ ಜಾಗೃತ ಜಾಥಾ ಕಾರ್ಯಕ್ರಮದಲ್ಲಿ ಘೋಷಣೆ ಕೂಗುತ್ತಾ ಭಿತ್ತಿ ಪತ್ರಗಳು ಕರಪತ್ರಗಳ ಮೂಲಕ ಕೊರಟಗೆರೆಯ ಸಾರ್ವಜನಿಕರಿಗೆ ಡೆಂಗಿ ಬಗ್ಗೆ ಅರಿವನ್ನು ಮೂಡಿಸಲಾಯಿತು. ಈ ಡೆಂಘೀ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗುರುಸಿದ್ದಯ್ಯ ಮತ್ತು ಧಾನ್ ಸಂಸ್ಥೆಯ ಪ್ರಾದೇಶಿಕ ಸಂಯೋಜಕ ಹೆಚ್.ಸಿ ಗೌಡ ಹಾಗೂ ಧಾನ್ ಸಂಸ್ಥಯ ಕೊರಟಗೆರೆ ಯೋಜನಾ ಸಂಯೋಜಕ ಹೆಚ್.ಎನ್. ನಾಗೇಶ್ ಮತ್ತಿತರರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರು, ಉಪಾಧ್ಯಕ್ಷರು ಲೆಕ್ಕಿಗರಾದ ಉಮೇಶ್, ಪವಿತ್ರ ಮತ್ತು ಸಂಸ್ಥೆ ಸಿಬ್ಬಂದಿ ವರ್ಗಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಅರ್ಟಿಸಾನ್ ಹಬ್: ಜನ ಜಾಗೃತಿ
ಆಂದೋಲನ ರೂಪಿಸಲು ನಿರ್ಧಾರ
ತುಮಕೂರು:  ಉದ್ದೇಶಿತ ದೇಸಿ ಆರ್ಟಿಸಾನ್ ಹಬ್ ಸ್ಥಾಪನೆ ಸಂಬಂಧ ತುಮಕೂರು ಜಿಲ್ಲೆಯಾದ್ಯಂತ ಜನ ಜಾಗೃತಿ ಆಂದೋಲನ ರೂಪಿಸಲು ನಿರ್ಧರಿಸಲಾಗಿದೆ.
ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ, ಹಳ್ಳಿ, ತಾಂಡ ಮತ್ತು ಕಾಲೋನಿಗಳಲ್ಲಿ  ಸಮೀಕ್ಷೆ ನಡೆಸಿ ರೈತರ ಬೆಳೆಗಳಿಗೆ  ಮೌಲ್ಯವರ್ಧಿತ ಬೆಲೆ, ಕುಲ ಕಸುಬುದಾರರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಿಸಲು ಈ ಸಮೀಕ್ಷೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ದೊರೆಯುವ ಸಂಪನ್ಮೂಲಗಳಿಗೆ ಮೌಲ್ಯವರ್ಧಿತ  ಬೆಲೆ ದೊರಕಿಸಲು ಅಗತ್ಯ ತರಬೇತಿ ಮತ್ತು ಸೌಲಭ್ಯ ಕಲ್ಪಿಸಲು ಹಾಲಿ ಹಾಗೂ ಉದ್ದೇಶಿತ  ಉದ್ದಿಮೆದಾರರು, ವಾಣಿಜ್ಯೋದ್ಯಮಿಗಳು, ರಫ್ತುದಾರರು, ಸಂಶೋಧಕರು, ಪರಿಣಿತ ತಜ್‌ಞರು, ನಿವೃತ್ತ ಅಧಿಕಾರಿಗಳು, ನೌಕರರು, ಹೂಡಿಕೆದಾರರು, ಕಚ್ಛಾವಸ್ತು ಸರಬರಾಜುದಾರರು, ಉದ್ಯೋಗ ಆಕಾಂಕ್ಷಿಗಳು, ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು  ಆಸಕ್ತರ ಪಟ್ಟಿ ತಯಾರಿಸಿ ಹಾಲಿ ಇರುವ ಯೋಜನೆಗಳ ಮೂಲಕ ಸೌಲಭ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ  ವಿಶೇಷ ಪ್ಯಾಕೇಜ್ ಪ್ರಸ್ತಾವನೆ ಸಲ್ಲಿಸಲು ಆಸಕ್ತರೆಲ್ಲರೂ ಸೇರಿ ವಿವಿಧ ಯೋಜನೆಗಳ ರೂಪು ರೇಷೆಗಳನ್ನು ನಿರ್ಧರಿಸಿ, ಯೋಜನೆಗೆ ಸಹಕರಿಸಲು ಒಂದು ಸಂಸ್ಥೆ ರಚಿಸಿ ಶ್ರಮಿಸಲು ಉದ್ದೇಶಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.