ತುಮಕೂರು

11 ನ್ಯಾಯಬೆಲೆ ಅಂಗಡಿಪರವಾನಗಿ ಅಮಾನತು

Published On :

ತುಮಕೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿ ಮತ್ತು ಗೋಧಿಯನ್ನು ಪಡಿತರ  ಚೀಟಿದಾರರಿಗೆ ನಿಗದಿಪಡಿಸಿದ ಪ್ರಮಾಣ ಮತ್ತು  ನಿಗದಿಪಡಿಸಿದ ದರದಲ್ಲಿ ವಿತರಿಸುವಲ್ಲಿ ನ್ಯೂನತೆ ಎಸಗಿದ ಜಿಲ್ಲೆಯ ಈ ಕೆಳಕಾಣಿಸಿದ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅಮಾನತುಗೊಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯಾದ ತುರುವೇಕೆರೆ ತಾಲೂಕು ಮೀನು ಸಾಗಾಣಿಕೆ ಹಾಗೂ ಉತ್ಪಾದಕರ  ಸಹಕಾರ ಸಂಘ, ಮಲ್ಲಾಘಟ್ಟ ಗ್ರಾಮ., ಶಿರಾ ತಾಲೂಕಿನ ಕೆ.ವಿಶ್ವನಾಥ, ರಂಗನಾಥಪುರ, ಶಿರಾ ಪಟ್ಟಣ. ಬಾಲಾಜಿಸಿಂಗ್, ವಡ್ಡನಹಳ್ಳಿ ಗ್ರಾಮ. ಪಿ.ಬಿ.ಕೃಷ್ಣೇಗೌಡ, ಮಾನಂಗಿ ಗ್ರಾಮ. ಮಂಜುನಾಥಪ್ಪ, ಶಿರಾ ಪಟ್ಟಣ. ಕುಣಿಗಲ್ ತಾಲೂಕಿನ ರತ್ನಮ್ಮ, ಹಳೇಪೇಟೆ, ಹುಲಿಯೂರುದುರ್ಗ, ಸುಮಿತ್ರಮ್ಮ, ಹೊನ್ನೇನಹಳ್ಳಿ  ಗ್ರಾಮ. ಶ್ರೀ ಲಕ್ಷ್ಮೀದೇವಿ ಮಹಿಳಾ  ಸಮಾಜ, ಸೊಂದಲಗೇರಿ ಗ್ರಾಮ.
ಕೊರಟಗೆರೆ ತಾಲೂಕಿನ ವಿ.ಎಸ್.ಎಸ್.ಎನ್. ಸಿಂಗ್ರಿಹಳ್ಳಿ ಗ್ರಾಮ. ಇನಾಯತ್  ಉಲ್ಲಾ ಖಾನ್, ಮಾದವಾರ ಗ್ರಾಮ. ಪಾವಗಡ ತಾಲೂಕಿನ ಡಿ.ಹೆಚ್. ನಾಗರಾಜು, ದಳವಾಯಿಹಳ್ಳಿ ಗ್ರಾಮ. ಚಿಲ್ಲರೆ ಸೀಮೆಎಣ್ಣೆ ಪರವಾನಗಿದಾರರಾದ ಪಿ.ಎಸ್. ಸುಬ್ರಹ್ಮಣ್ಯ, ಚನ್ನಕೇಶವಪುರ ಗ್ರಾಮ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.