ವಿದ್ಯೆ, ವೃತ್ತಿಪರ ಕಲಿಕೆ ಕೆಲವರ ಸ್ವತ್ತಲ್ಲ
ಕ.ಪ್ರ. ವಾರ್ತೆ , ತುಮಕೂರು , ಆ.23
ಬುದ್ದಿಮತ್ತೆಯನ್ನು ಹೊಂದಿರುವ ಕೆಲ ವರ್ಗದ ಜನರಿಗೆ ಮಾತ್ರವೇ ವಿದ್ಯೆ ಮತ್ತು ವೃತ್ತಿಪರ ಕಲಿಕೆ ಸಾಧ್ಯವೆಂಬ ಭ್ರಮೆಯನ್ನು ಕೆಲವರು ಮೂಡಿಸಿಕೊಂಡು ಉನ್ನತ ಶಿಕ್ಷಣದ ಅವಕಾಶಗಳನ್ನು ಕೀಳರಿಮೆಯಿಂದ ಬಿಟ್ಟುಕೊಡುತ್ತಿದ್ದಾರೆಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿವೃತ್ತ ಡೀನ್ ಡಾ. ಡಿ.ಕೆ. ಸುಬ್ರಮಣಿಯನ್ ನುಡಿದರು.
ಅವರು ಇಲ್ಲಿನ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಇ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎಲ್ಲ ವರ್ಗ, ಜಾತಿ ಮತ್ತು ಧರ್ಮಗಳ ಪ್ರತಿ ವಿದ್ಯಾರ್ಥಿಯಲ್ಲೂ ಬುದ್ಧಿವಂತಿಕೆಯಿದ್ದು ಕೆಲವರು ಸತತ ಶ್ರಮ, ನಿರಂತರ ಅಭ್ಯಾಸ ಮತ್ತು ವ್ಯಾಸಂಗದಿಂದ ಕ್ಲಿಷ್ಟಕರ ವಿಷಯಗಳನ್ನು ಅರಿತುಕೊಂಡು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆಂದು ವಿಶ್ಲೇಷಿಸಿದರು.
ಸಮಾರಂಭ ಉದ್ಘಾಟಿಸಿದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಹಲವು ಶೈಕ್ಷಣಿಕ ಸಂಸ್ಥೆಗಳ ಉತ್ತಮ ಕಾರ್ಯದಿಂದ ತುಮಕೂರು ನಗರದಲ್ಲಿ ಉನ್ನತ ಶಿಕ್ಷಣದ ಕಾಲೇಜುಗಳು ಸ್ಥಾಪಿತವಾಗಿದ್ದು ನಗರವು ಶೈಕ್ಷಣಿಕ ಕೇಂದ್ರಗಳ ಗೊಂಚಲಾಗಿ ಖ್ಯಾತಿ ಹೊಂದುತ್ತಿದೆ ಎಂದರು.
ಈ ನಿಟ್ಟಿನಲ್ಲಿ ಸಿದ್ಧಗಂಗಾ ಮಠ, ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಶ್ರೀದೇವಿ ಶಿಕ್ಷಣ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳು ಮುಂಚೂಣಿಯಲ್ಲಿವೆ ಎಂದರು.
ಕಳಬೇಡ ಎಂಬ ಬಸವಣ್ಣ ನವರ ವಚನವನ್ನು ಉಲ್ಲೇಖಿಸಿ ಸಮಾನತೆ ಕಾಯಕದ ಶ್ರೇಷ್ಟತೆಯಿಂದ ಜೀವನದ ಸಾರ್ಥಕತೆಯುಂಟಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಗಂಗಾಧರ ಕೊಡ್ಲಿಯವರು ಮುಂದಿನ ಉತ್ತಮ ಭವಿಷ್ಯಕ್ಕಾಗಿ ಏಕಾಗ್ರತೆಯಿಂದ ವ್ಯಾಸಂಗ ಮಾಡುವುದೊಂದೇ ಯಶಸ್ಸಿಗೆ ದಾರಿಯೆಂದು ನುಡಿದು ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಪ್ರಾಂಶುಪಾಲ ಡಾ. ಕೆ. ಸುಕುಮಾರನ್ ವರದಿ ವಾಚಿಸಿದರು. ಸಾರಿಕಾ ಪ್ರಾರ್ಥಿಸಿದರು. ಡಾ. ಎನ್. ಚಂದ್ರಶೇಖರ್ ಸ್ವಾಗತಿಸಿ ಪ್ರೊ. ಸಿ. ನಾಗರಾಜ್ ನಿರೂಪಿಸಿದರು. ಪ್ರೊ. ಬಿ.ಹೆಚ್. ವಾಸುದೇವಮೂರ್ತಿ ವಂದಿಸಿದರು. ಉಪಪ್ರಾಂಶುಪಾಲ ಪ್ರೊ. ಸಿ.ಎಂ. ಚಂದ್ರಶೇಖರಯ್ಯ ಐಟಿ ಮತ್ತು ಹೆಚ್.ಆರ್. ನಿರ್ದೇಶಕ ಮಲ್ಲನಗೌಡ ಎಸ್. ಪಾಟೀಲ್ ಹಾಜರಿದ್ದರು. ವಿಟಿಯು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿ ಮತ್ತು ಉಪನ್ಯಾಸಕ ವರ್ಗದವರಿಗೆ ಪುರಸ್ಕಾರ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

