ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಬಂಜೆಯಾಗುತ್ತಿರುವ ಭೂಮಿ: ದೇಸಾಯಿ
ತುರುವೇಕೆರೆ: ಅತಿಯಾದ ಬೆಳೆಯನ್ನು ಬೆಳೆಯಬೇಕು ಎಂಬ ದುರಾಸೆಗೆ ಬಿದ್ದು ರಾಸಾಯನಿಕ ಗೊಬ್ಬರಗಳನ್ನು ಮನಸೋ ಇಚ್ಛೆ ಭೂಮಿಗೆ ಬಳಕೆ ಮಾಡಿರುವುದರ ಪ್ರತಿಫಲವಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ಸತ್ವಹೀನವಾಗುತ್ತಿದೆ ಎಂದು ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ನಾಗಪ್ಪ ದೇಸಾಯಿ ವಿಷಾದಿಸಿದರು. ತಾಲೂಕಿನ ಮುತ್ತಗದಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆಯ ವತಿಯಿಂದ ನಡೆದ ಮಣ್ಣು ಪರೀಕ್ಷಾ ಹಾಗೂ ನೀರು ಬಳಕೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.
ಅತಿಯಾದ ರಾಸಾಯನಿಕವನ್ನು ಭೂಮಿಗೆ ಹಾಕಿರುವ ಕಾರಣಕ್ಕೆ ಭೂಮಿ ತನ್ನ ಸತ್ವ ಕಳೆದುಕೊಂಡಿದೆ. ಇದನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ಮಣ್ಣು ಪರೀಕ್ಷೆ ನಡೆಸಿ ಅದಕ್ಕೆ ಅಗತ್ಯವಿರುವ ಸತ್ವಯುತ ನೈಸರ್ಗಿಕ ಗೊಬ್ಬರವನ್ನು ಕೊಟ್ಟು ಭೂಮಿಯನ್ನು ಫಲವತ್ತಾಗಿ ಮಾಡಬೇಕು ಎಂದು ಕರೆ ನೀಡಿದರು.
ಅಂತರ್ಜಲವನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದರು. ದುಬಾರಿ ವೆಚ್ಚದ ರಾಸಾಯನಿಕ ಗೊಬ್ಬರಗಳಿಗೆ ಗುಡ್ ಬೈ ಹೇಳಿ ಸಾರಯುಕ್ತವಾದ ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಜೈವಿಕ ಹಾಗೂ ಹಸಿರೆಲೆಯ ಗೊಬ್ಬರಗಳನ್ನು ಭೂಮಿಗೆ ಒದಗಿಸುವ ಮೂಲಕ ಭೂಮಿಯನ್ನು ಸತ್ವಗೊಳಿಸಬೇಕು ಎಂದು ಡಾ.ಮಮತ ಹೇಳಿದರು.
ರಾಸಾಯನಿಕ ಗೊಬ್ಬರವನ್ನು ನಿಯಂತ್ರಿಸುವುದರಿಂದ ಕಡಿಮೆ ಖರ್ಚು ತಗುಲುತ್ತದೆ. ಅಲ್ಲದೇ ಉತ್ತಮ ಗುಣಮಟ್ಟದ ಆಹಾರ ಪದಾರ್ಥವನ್ನು ಬೆಳೆದ ಸಂತೃಪ್ತಿ ದೊರೆಯುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು. ಕೃಷಿ ಮೇಲ್ವಿಚಾರಕ ಸುರೇಶ್ ಹಾಲವರ್, ಗ್ರಾಮ ಒಕ್ಕೂಟದ ಸದಸ್ಯರುಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

