ತುಮಕೂರು

ಸಮಾಜಶಾಸ್ತ್ರವೂ ಮುಖ್ಯ: ಚಿನಶಂ

Published On :

ತುರುವೇಕೆರೆ: ವಿದ್ಯಾರ್ಥಿಗಳಲ್ಲಿ ಕೇವಲ ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಶಾಸ್ತ್ರಗಳೇ ಪ್ರಮುಖ ಎಂಬ ಆಲೋಚನೆ ಬೆಳೆಯುತ್ತಿದೆ. ಆದರೆ ವಾಣಿಜ್ಯ, ಕಲೆ ಹಾಗೂ ಸಮಾಜ ಶಾಸ್ತ್ರಗಳೂ ಸಹ ಸಮಾಜದಲ್ಲಿ ಪ್ರಮುಖವಾದ ಶಾಸ್ತ್ರಗಳು ಎಂಬ ಭಾವನೆ ಬಿತ್ತ ಬೇಕಿದೆ ಎಂದು ಖ್ಯಾತ ಸಮಾಜ ಶಾಸ್ತ್ರಜ್ಞ ಚಿ.ನ. ಶಂಕರ್‌ರಾವ್ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕೆ. ಭೈರಪ್ಪ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ನಡೆದ ಲೇಖಕ ಕೆ.ಭೈರಪ್ಪನವರ ವಿವಿಧ ಗ್ರಂಥಗಳನ್ನು ಲೋಕಾರ್ಪಣೆ ಮಾಡಿದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾಷೆ ಹಾಗೂ ಸಾಮಾಜಿಕ ಚಿಂತನೆಗಳಿಗೆ ವಿದ್ಯಾರ್ಥಿಗಳು ಗಮನ ನೀಡುತ್ತಿಲ್ಲ. ಖ್ಯಾತ ಸಮಾಜ ಸುಧಾಕರ ಬರ್ನಾಡ್ ಶಾ ಅವರಿಂದ ಪ್ರೇರೇಪಿತರಾಗಿ ಇಂದಿನವರೆಗೂ ಸಾಮಾಜಿಕ ಶಾಸ್ತ್ರದಲ್ಲಿ ಸೇವೆ ಸಲ್ಲಿಸಿರುವ ಅನುಭವಗಳ ಬಗ್ಗೆ ಮಹಾನ್ ಕೃತಿಗಳು ಬಂದಿವೆ. ಆದರೆ ಅವುಗಳ ಅಧ್ಯಯನವನ್ನು ಮಾಡಿದಲ್ಲಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಪರೀಕ್ಷೆಗಳನ್ನು ಎದುರಿಸುವುದು ಸುಲಭವಾಗಲಿದೆ ಎಂದು ಚಿ.ನ.ಶಂಕರ್ ರಾವ್ ಅಭಿಪ್ರಾಯಪಟ್ಟರು.
ಕೆ.ಭೈರಪ್ಪನವರ ಪರಿಸರ ಸಂರಕ್ಷಣೆ ಪುಸ್ತಕ ಬಿಡುಗಡೆ ಮಾಡಿದ ವಿಶ್ರಾಂತ ಉಪನ್ಯಾಸಕ ವೆಂಕಟಾಚಾರ್ ಮಾತನಾಡಿದರು.
 ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್, ಬಾಣಸಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರಸಿಂಹಮೂರ್ತಿ, ತಾಲೂಕು ಕಸಾಪ ಅಧ್ಯಕ್ಷ ದೇವರಾಜು ಅವರು ಸಾಹಿತಿ ಕೆ.ಭೈರಪ್ಪನವರು ರಚಿಸಿರುವ ಸಮಗ್ರ ಸಾಮಾಜಿಕ ಚಿಂತನೆ, ನೆಮ್ಮದಿಯ ಜೀವನ ಹಾಗೂ ಜನಪ್ರಿಯ ನಾಯಕನಾಗುವುದು ಹೇಗೆ ಎಂಬ ಕೃತಿಗಳನ್ನು ಬಿಡುಗಡೆ ಮಾಡಿದರು. ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಲೇಖಕ ಕೆ.ಭೈರಪ್ಪ ಮಾತನಾಡಿ ತಾವು ರಚಿಸಿರುವ ಸಾಮಾಜಿಕ ಕಳಕಳಿಯುಳ್ಳ ಪುಸ್ತಕಗಳು ವಿದ್ಯಾರ್ಥಿಗಳ ಬಾಳು ಬೆಳೆಗಿಸಿದಲ್ಲಿ ತಾವು ಪಡುತ್ತಿರುವ ಶ್ರಮ ಸಾರ್ಥಕವಾದಂತೆ ಎಂದರು. ಪಿಯುಸಿ ಹಾಗೂ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಹಲವಾರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ ಮಂಜೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಣ್ಣ, ಪ್ರಕಾಶ್, ವಿಜಯಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.