ಮಹಿಳೆಯರು ಗುಡಿ ಕೈಗಾರಿಕೆಯತ್ತ್ತ ಗಮನ ಹರಿಸಲಿ
ಕ.ಪ್ರ.ವಾರ್ತೆ , ಕುಣಿಗಲ್ , ಆ. 30
ಗ್ರಾಮಾಂತರ ಪ್ರದೇಶದ ಮಹಿಳೆಯರು ಕೃಷಿ ಚಟುವಟಿಕೆಯ ಜೊತೆಯಲ್ಲಿ ಉಪ ಕಸುಬುಗಳಾದ ಹೈನುಗಾರಿಕೆ, ಗುಡಿ ಕೈಗಾರಿಗೆ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ದೊರೆಯುವ ಗ್ರಾಮೀಣ ಕಚ್ಚಾವಸ್ತುಗಳನ್ನು ಬಳಸಿ ಅಲಂಕಾರಿಕ ವಸ್ತುಗಳ ನಿರ್ಮಾಣದ ಬಗ್ಗೆ ಸೂಕ್ತ ತರಬೇತಿ ಪಡೆದು, ಆರ್ಥಿಕ ಸ್ವಾವಲಂಬಿಗಳಾಗುವಂತೆ ಹುಲಿಯೂರುದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ಗುರುವಾರ, ಹುಲಿಯೂರುದುರ್ಗದ ಸ್ತ್ರೀಶಕ್ತಿ ಭವನದಲ್ಲಿ ಸುಜೀವನ ಒಕ್ಕೂಟ ಮತ್ತು ಜಿಲ್ಲಾ ಜಲಾನಯನ ಇಲಾಖೆ ಸಂಯುಕ್ತಾಶ್ರಯದಲ್ಲಿ ಗ್ರಾಮಾಂತರ ಪ್ರದೇಶದ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಉದ್ಯಮ ಶೀಲತಾ ಜಾಗೃತಿ ಶಿಬಿರದ ಅಂಗವಾಗಿ ಹೈನುಗಾರಿಕೆ, ಗುಡಿಕೈಗಾರಿಕೆ ಸೇರಿದಂತೆ ಅಲಂಕಾರಿಕ ವಸ್ತುಗಳ ತಯಾರಿಕೆಯ ಬಗ್ಗೆ ಹಮ್ಮಿಕೊಳ್ಳಲಾದ ಐವತು ್ತದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಷ್ಟ ಸಾಧ್ಯ: ಪ್ರಸಕ್ತ ದಿನಗಳಲ್ಲಿ ಮಳೆಯನ್ನು ನಂಬಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಿ ರೈತರು, ರೈತಾಪಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಕಷ್ಟ ಸಾಧ್ಯವಾಗಿರುವ ಕಾರಣ, ಖಾಸಗಿ ಸಂಘ, ಸಂಸ್ಥೆಗಳು ಗ್ರಾಮಾಂತರ ಪ್ರದೇಶದ ಮಹಿಳೆಯರಿಗಾಗಿ ಹಮ್ಮಿಕೊಂಡಿರುವ ಇಂತಹ ವಿಶೇಷ ತರಬೇತಿ ಶಿಬಿರದ ಸವಲತ್ತುಗಳನ್ನು ಪಡೆದು, ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳಿಂದ ಅಲಂಕಾರಿಕ ವಸ್ತುಗಳು ಸೇರಿದಂತೆ ಗ್ರಾಮೀಣ ಸೊಗಡಿನ ವಸ್ತುಗಳನ್ನು ತಯಾರಿಸಿ, ನಗರ ಪ್ರದೇಶದ ಮಾರುಕಟ್ಟೆಗೆ ಪೂರೈಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದೆಂದರು.
ಸಾಲ ಸೌಲಭ್ಯ: ಸುಜೀವನ ಒಕ್ಕೂಟದ ದತ್ತಿ ಮಂಡಳಿ ಸದಸ್ಯ ಎಚ್.ಇ.ಶಿವಪ್ಪ, ಒಕ್ಕೂಟವು ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಕೃಷಿ ಚಟುವಟಿಕೆ ಜೊತೆಯಲ್ಲಿ ಉಪಕಸುಬುಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ತರಬೇತಿ ಸೇರಿದಂತೆ ಸಾಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಮಹಿಳೆಯರು ತರಬೇತಿ ಶಿಬಿರದಲ್ಲಿ ವಿವಿಧ ಉತ್ಪನ್ನಗಳ ತಯಾರಿಕೆ ಬಗ್ಗೆ ಅರಿತು, ಕಲಿತು, ನಂತರ ಪರಿಣಾಮಕಾರಿಯಾಗಿ ಅವುಗಳನ್ನು ರೂಪಿಸಿ, ಅನುಷ್ಠಾನ ಗೊಳಿಸಿದಾಗ ನೆಮ್ಮದಿ ಜೀವನ ಸಾಧ್ಯದ ಜೊತೆ, ಆರ್ಥಿಕ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಶಿಬಿರದ ಆಯೋಜಕರಾದ ಎಸ್ಆರ್ಡಿಒ ಮುಖ್ಯಸ್ಥ ಲೋಕೇಶ್, ಮಂಡಲ ಅಧಿಕಾರಿ ಬಸ್ತಯ್ಯ, ತರಬೇತುದಾರರಾದ ಮಹಾಲಕ್ಷ್ಮೀ, ಪಂಕಜ, ಮಂಜುಳಾ, ಹೇಮಂತ್ ಕುಮಾರ್, ಗ್ರಾಪಂ ಕಾರ್ಯದರ್ಶಿ ಹುಸೇನ್ಪೀರ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಹುಲಿಯೂರುದುರ್ಗ ಸುತ್ತಮುತ್ತಲ ಐವತ್ತಕ್ಕೂ ಹೆಚ್ಚು ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

