ಕನ್ನಡಿಗರು ಭಾಷಾ ನಿರಭಿಮಾನಿಗಳು ಶಾಸಕ ಸಿ.ಬಿ. ಸುರೇಸ್ ಬಾಬು ವಿಷಾದ
ಚಿಕ್ಕನಾಯಕನಹಳ್ಳಿ: ನಮ್ಮ ಭಾಷಾಭಿಮಾನದ ಕೊರತೆಯ ನಡುವೆಯು ಕನ್ನಡ ಭಾಷೆ ಉಳಿದಿರುವುದು ಅದರ ಗಟ್ಟಿತನದಿಂದಾಗಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ನುಡಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಪತ್ರಕರ್ತರ ಸಂಘ ಏರ್ಪಡಿಸಿದ್ದ ಕನ್ನಡದ ಇಂಪು-ನಿತ್ಯನೂತನವೀ ಕಂಪು ಮತ್ತು ರಾಷ್ಟ್ರೀಯ ಪಕರ್ತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡದ ಬಗ್ಗೆ ವರ್ಣಿಸಲು ನಮ್ಮಲ್ಲಿ ಶಬ್ದ ಭಂಡಾರ ಹೇರಳವಾಗಿದೆ. ನಾಡುನುಡಿಯ ಉಳುವಿಗಾಗಿ ನಾವು ಸದಾ ಜಾಗೃತರಾಗಿರಬೇಕು. ಈ ಕಾರ್ಯಕ್ಕೆ ಪತ್ರಕರ್ತರು, ಸಾಹಿತಿಗಳು, ಮಾತ್ರ ಶಕ್ತರಾಗಿದ್ದಾರೆ. ನಮ್ಮಲ್ಲಿ ಅನೇಕ ಪ್ರತಿಭೆಗಳಿವೆ. ಎಲ್ಲಾ ರಂಗಗಳ್ಲಲಿ ಅಸೀಮ ಸಾಧನೆ ಮಾಡಿದ ದಿಗ್ಗಜಗಳಿದ್ದಾರೆ.ತಾಲೂಕಿಗೆ ಅವರಿಂದ ಒಂದು ಕೀರ್ತಿ ಬಂದಿದೆ.ನಾವು ಸುಸಂಕೃತರಾಗಿರವಂತೆ ಅಭಿಮಾನ ಶೂನ್ಯರು ಆಗಿದ್ದವೆ.ತ್ಯಾಗಮಾಡುವಾಗ ನಮ್ಮತನವನ್ನು ಉಳಿಸಿಕೊಂಡು ಬೇರೆಯವರಿಗೆ ನಮ್ಮ ಪ್ರೀತಿಯನ್ನು ನೀಡೋಣ ಎಂದರು.
ಪತ್ರಿಕಾ ರಂಗ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಪತ್ರಕರ್ತ ನಿರಂತರ ಸಾಹಿತಿಯಾಗಿರುತ್ತಾನೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಶಿಕ್ಷಕನಾಗಿಯು ಕೆಲಸ ಮಾಡಬೇಕಾಗಿದೆ. ಕತ್ತಿಗಿಂತ ಲೇಖನಿ ಹರಿತ, ದಾಕ್ಷಿಣ್ಯಕ್ಕೆ ಒಳಗಾಗಬೇಡಿ. ಸತ್ಯವನ್ನು ಹೇಳಲು ಮುಜುಗರ ಮತ್ತು ಭಯಬೇಡ. ಕನ್ನಡಿಗರಿಂದ ಆಯ್ಕೆಯಾದವರು ಇಂದು ಕನ್ನಡದ ವಿರುದ್ಧ ದನಿಯೆತ್ತುವ ಕೀಳು ಮಟ್ಟಕ್ಕಿಳಿದಿದ್ದಾರೆ. ಭಾರತೀಯ ಕಾವ್ಯ ಮೀಮಾಂಸೆಯನ್ನು ರಚಿಸಿದ ತೀನಂಶ್ರೀಯವರು ನಮ್ಮ ನೆಲದವರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.ಅವರ ನೆನಪಿನಲ್ಲಿ ನಿರ್ಮಾಣವಾಗುತ್ತಿರುವ ಭವನ ಸಮಗ್ರ ಸಾಹಿತ್ಯ ಚಟುವಟಿಕೆ ಕೇಂದ್ರವಾಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್, ಚಿ.ನಿ.ಪುರುಷೋತ್ತಮ, ಸೊಗಡು ವೆಂಕಟೇಶ್, ಎಂ.ಎಸ್. ರವಿಕುಮಾರ್, ಕೆ.ಜಿ.ರಾಜೀವ್, ಸಿ.ಎಸ್. ನಟರಾಜ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

