ಗೋಡೇಕೆರೆಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಲಕ್ಷದೀಪೋತ್ಸವ
ಚಿಕ್ಕನಾಯಕನಹಳ್ಳಿ: 12ನೇ ಶತಮಾನದ ಕ್ರಾಂತಿಪುರುಷ ಜಗದ್ಗುರು ಬಸವಣ್ಣನವರ ಗರುಡಿಯ ಗಾರುಡಿಗ ನಿಜಾನಂದ ಶಿವಯೋಗಿ ಸಿದ್ದರಾಮನ ನಿಜೈಕ್ಯ ಕ್ಷೇತ್ರ ಗೋಡೇಕೆರೆಯಲ್ಲಿ ಲಕ್ಷದೀಪೋತ್ಸವ ವಿಜೃಭಣೆಯಿಂದ ಜರುಗಿತು.
ಕಾರ್ತೀಕ ಮಾಸದ ಕೊನೆಯ ಸೋಮುವಾರದಂದು ಸಹಸ್ರ ಭಕ್ತಾದಿಗಳು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.
12ನೇ ಶತಮಾನದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸಂಚಾರ ಮಾಡುತ್ತಾ ಹಲವು ಕಡೆ ಕೆರೆ-ಕಟ್ಟೆ ಕಟ್ಟಿಸಿ, ಬಾವಿಗಳನ್ನು ತೋಡಿಸಿ ಇಂದಿನ ಲೋಕೋಪಯೋಗಿ ಇಲಾಖೆಯ ಪರಿಕಲ್ಪನೆಯನ್ನು ಅಂದೇ ಹಾಕಿಕೊಟ್ಟ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರು ಮೆಟ್ಟಿದ ಸ್ಥಳಗಳೆಲ್ಲಾ ಅವರ
ಗದ್ದುಗೆಗಳಿವೆ. ಪ್ರಸ್ತುತ ಇದುವರೆಗೂ ಬೆಳಕಿಗೆ ಬಂದಿರುವ 78 ಗದ್ದುಗೆಗಳಿದ್ದು, ಸಿದ್ದರಾಮರು ಗುಬ್ಬಿ
ತಾಲೂಕಿನ ಕಾರೇಕುರ್ಚಿಯಲ್ಲಿಯೂ ತಮ್ಮ ಪವಾಡವನ್ನು ತೋರಿದ್ದರೆಂಬ ಪ್ರತೀತಿಯಿದೆ. ಅಲ್ಲಿಂದ ಈಗಿನ ಗೋಡೇಕೆರೆಗೆ ಬರುವ ಮುಂಚೆ ಮಾರ್ಗ ಮಧ್ಯದಲ್ಲಿ ನಾಸ್ತಿಕರ ಕುಚೋದ್ಯವನ್ನು ಸವಾಲಾಗಿ ಸ್ವೀಕರಿಸಿದ ಅವರು ಗೋಡೆಯನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡು ಬಂದದ್ದರಿಂದ ಗೋಡೇಕೆರೆಯೆಂಬ ಹೆಸರು ಬಂತೆಂಬ ಪ್ರತೀತಿಯಿದೆ.
ರಾತ್ರಿ ನಡೆದ ಲಕ್ಷದೀಪೋತ್ಸವಕ್ಕೆ ರಾತ್ರಿಯಿಡೀ ಜನಜಂಗುಳಿಯೇ ಸೇರಿತ್ತು. ನಾಡಿನ ಅನೇಕ ಗಣ್ಯರು, ರಾಜಕಾರಣಿಗಳು, ಮಾಠಾಧೀಶರು ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ.ನಂದೀಶ್, ತಾಪಂ ಅಧ್ಯಕ್ಷರಾದ ಎಚ್.ಆರ್. ಶಶಿಧರ್, ಮಾಜಿ ಅಧ್ಯಕ್ಷ ಎಂ.ಎಂ.ಜಗದೀಶ್ ಮುಂತಾದ ಮುಖಂಡರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮ ಫಲಿತಾಂಶ
ತಿಪಟೂರು: ನಗರದ ಗಾಂಧಿನಗರದ ಆಲ್ ಅಮೀಲ್ ಉರ್ದು ಪ್ರೌಢಶಾಲೆಯಲ್ಲಿ ನಡೆದ ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ನಾಟಕ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದ್ದು, 10 ವಿದ್ಯಾರ್ಥಿಗಳು ದ್ವಿತೀಯ ಬಹುಮಾನ, 15 ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

