ವರಿಷ್ಠರು ಒಪ್ಪಿದರೆ ತುಮಕೂರು/ಚಿಕ್ಕಬಳ್ಳಾಪುರದಿಂದ ಸ್ಪರ್ಧೆ
ಕ.ಪ್ರ.ವಾರ್ತೆ ಮಧುಗಿರಿ ಡಿ.3
ಮುಂಬರುವ ಲೋಕಸಭಾ ಚುನಾಣೆಯಲ್ಲಿ ವರಿಷ್ಠರು ಒಪ್ಪಿದರೆ ತುಮಕೂರು ಅಥವಾ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಚಿವ ಸಿ.ಚನ್ನಿಗಪ್ಪ ತಿಳಿಸಿದರು.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವಂತೆ ಆದೇಶಿಸಿದರೆ ಈ ಎರಡು ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರಕ್ಕೆ ಸ್ಪರ್ಧಿಸುತ್ತೇನೆ. ಆದರೆ ಎಲ್ಲೋ ಒಂದು ಕಡೆ ಈಗಾಗಲೇ ನನ್ನ ಆರೋಗ್ಯ ಕೈ ಕೊಟ್ಟಿರುವ ಹಿನ್ನಲೆಯಲ್ಲಿ ವಿಶ್ರಾಂತಿ ಜೀವನ ನಡೆಸು ಎಂದು ನನ್ನ ಮನಸ್ಸು ತುಡಿಯುತ್ತಿದ್ದು ಬಡವರ, ವಿಕಲಚೇತನರ ಹಾಗೂ ಅಸಹಾಯಕರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ರಾಜಕೀಯದಿಂದ ದೂರವಿರಬೇಕು ಎಂದು ಬಯಸಿದ್ದೇನೆ. ಹಾಗಾಗಿ ನಾನು ರಾಜಕೀಯದಲ್ಲಿ ಇರಲಿ ಇಲ್ಲದಿರಲಿ ಕ್ಷೇತ್ರದ ಜನರ ಸೇವೆಗೆ ಸದಾ ಸಿದ್ದನಿದ್ದೇನೆ ಎಂದರು.
ಇಲ್ಲಿನ ಶಾಸಕ ಕೆ.ಎನ್.ರಾಜಣ್ಣ ಈಗ್ಗೆ 10 ವರ್ಷ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಸಿಸಿ ಬ್ಯಾಂಕನ್ನು ಸ್ಧ್ಪರ್ ಸೀಡ್ ಮಾಡುವಂತೆ ಮನವಿ ಮಾಡಿದೆವು. ಆದರೆ ಸೊಗಡು ಶಿವಣ್ಣ ತಡೆದು ಸೂಪರ್ ಸೀಡ್ಗೆ ಅವಕಾಶ ನೀಡಲಿಲ್ಲ. ಈಗ ಶಿವಣ್ಣ ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ ಎಂದು ಚನ್ನಿಗಪ್ಪ ಲೇವಡಿ ಮಾಡಿದರು. ನನ್ನ ಸ್ವಂತ ಊರು ಬೈರನಾಯಕನಹಳ್ಳಿ ಕುಗ್ರಾಮದಲ್ಲಿ ತೆರೆದಿರುವ ಶ್ರೀಶಿವಕುಮಾರಸ್ವಾಮೀಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಡವರಿಗೆ, ಅಂಗವಿಕಲರಿಗೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ್ದೇನೆ. ಇದು ಸಮಾಜ ಸೇವೆಯಲ್ಲವೇ, ಇಂತಹ ಸಮಾಜಮುಖಿ ಕಾರ್ಯ ಯಾವ ರಾಜಕಾರಣಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಮುಖಂಡ ರಮೇಶ್ ರೆಡ್ಡಿ, ಕಂಭತ್ತನಹಳ್ಳಿ ರಘು, ಗೋವಿಂದರಾಜು, ಸಿಡದರಗಲ್ಲು ಶ್ರೀನಿವಾಸ,ತಿಮ್ಮೇಗೌಡ, ನರಸೀಯಪ್ಪ, ಲಕ್ಷ್ಮೀನಾರಾಯಣ, ನರಸಪ್ಪ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

