ತುಮಕೂರು

ಯಕ್ಷಗಾನ ಅದ್ಭುತಜನಪದ ಕಲೆ: ಹೆಗಡೆ

Published On :

ತುಮಕೂರು: ನಮ್ಮ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿದ ಯಕ್ಷಗಾನವು ಗೀತ, ನಾಟ್ಯವಾದ್ಯಗಳಿಂದ ಮೇಳೈಸಿದ ಜನಪದ ಕಲೆಯಾಗಿದೆ ಎಂದು ಲೇಖಕ ಗಣಪತಿ ಹೆಗಡೆಯವರು ಹೇಳಿದರು.
ಅವರು ಜ್ಞಾನಬುತ್ತಿ ಸತ್ಸಂಗ ಕೇಂದ್ರ ಆಯೋಜಿಸಿದ್ದ 228ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಯಕ್ಷಗಾನ ಒಂದು ಇಣುಕು ನೋಟ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಕರಾವಳಿಯ ಯಕ್ಷಗಾನದಲ್ಲಿ ಭಾಷೆಯ ತೀವ್ರತೆ ಹಾಗೂ ಅರ್ಥಗಾರಿಕೆ ಅದ್ಭುತವಾಗಿದೆ.
ಶ್ರೇಣಿ, ಕೆರೆಮನೆ ಶಂಭ ಹೆಗಡೆ, ವಾಸುದೇವ ಸಾಮಗ ಮುಂತಾದ ಅದ್ಭುತ ಕಲಾವಿದರು ಶ್ರೀಮಂತಗೊಳಿಸಿದ ಯಕ್ಷಗಾನವು ಮಾತಿನ ಮೋಡಿಯಲ್ಲಿ ಪ್ರಸಂಗ ಬೆಳೆಸುವ ಕಲೆಯಾಗಿದ್ದು ಇಂತಹುದು ಮತ್ತೊಂದಿಲ್ಲ ಎಂದರು.
ಇಲ್ಲಿನ ಹಾಸ್ಯಗಾರರು ಪ್ರಸಂಗದಲ್ಲಿ ಸಮಯೋಚಿತವಾಗಿ ಮಾತು ಬೆಳೆಸುವುದನ್ನು ಕಾಣಬಹುದು. ಕರಾವಳಿ ಪ್ರದೇಶದ ಯಕ್ಷಗಾನಗಳು ವಿರಾಮ ಕಾಲದ ಮನರಂಜನೆ ಹಾಗೂ ಮೆದುಳಿಗೆ ಮೇವಾಗಿದ್ದು ಸಾಮಾಜಿಕ ಕಳಕಳಿ ಹೊಂದಿದ್ದು ಯಕ್ಷಗಾನ ಒಂದು ವಿಶ್ವಕೋಶವಾಗಿದೆ. ಯಕ್ಷಗಾನವು ಕಲಾಚಾತುರ್ಯ ಹಾಗೂ ಮಾತಿನ ಚಾತುರ್ಯದ ನವರಸ ಭರಿತವಾಗಿ ತುಂಬಿ ತುಳುಕುವ ಶ್ರೀಮಂತ ಕಲೆಯಾಗಿದೆ. ಎಂದು ವಿವರಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಿರಾ ಪಟ್ಟಣದ ಎಚ್. ಲೋಕೇಶ್ ಅಗ್ರಹಾರ ಮಾತನಾಡುತ್ತಾ ಜ್ಞಾನಬುತ್ತಿಯು ಆತ್ಮದ ಹಸಿವನ್ನು ತಣಿಸುತ್ತದೆ. ಜೊತೆಗೆ ಆತ್ಮಕ್ಕೆ ಚೈತನ್ಯವನ್ನು ಕೊಡುವುದರೊಂದಿಗೆ ಸತ್ಪಥದೆಡೆಗೆ ಕರೆದೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಈ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ. ಕೆ. ರಾಜಶೇಖರ್ ಅವರು ಮಾತನಾಡುತ್ತಾ ತುಮಕೂರು ಜಿಲ್ಲೆಯಲ್ಲೂ ಮೂಡಲಪಾಯ ಯಕ್ಷಗಾನ ಇದೆ.   ಪ್ರಾಸಬದ್ಧವಾದ ಜಾನಪದ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಶಿರಾದ ಎಚ್. ಲೋಕೇಶ್ ಅಗ್ರಹಾರ ಪ್ರಾರ್ಥಿಸಿದರು. ಈ ಸತ್ಸಂಗ ಕೇಂದ್ರದ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಸಂಚಾಲಕರಾದ ಆರ್. ಬಸವರಾಜಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.