ತುಮಕೂರು

ನವಜಾತ ಅವಳಿ ಹೆಣ್ಣುಗಳ ರಕ್ಷಣೆ

Published On :

ತುಮಕೂರು: ಬೇರೆಯವರಿಗೆ ಸಾಕಲು ನೀಡಿದ್ದ ನವಜಾತ ಅವಳಿ ಜವಳಿ ಹೆಣ್ಣು ಮಕ್ಕಳನ್ನು ತುಮಕೂರು ಜಿಲ್ಲೆ ಪಾವಗಡ ಪೊಲೀಸರು ಹಾಗೂ ಸಿಡಿಪಿಓ ಜಂಟಿ ಕಾರ್ಯಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ. ಈ ಘಟನೆ ಪಾವಗಡ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ. ತಾಂಡ್ಯಾದ ನಾಗಮಣಿ, ಗಂಗಾಧರ್ ನಾಯ್ಕ ದಂಪತಿಯ ಆರು ಹೆಣ್ಣು ಮಕ್ಕಳ ಪೈಕಿ ಎರಡು ನವಜಾತ ಶಿಶುಗಳಾಗಿದ್ದವು. ನವೆಂಬರ್ 28 ರಂದು ಎರಡು ಮಕ್ಕಳಿಗೆ ನಾಗಮಣಿ ಜನ್ಮನೀಡಿದ್ದರು. ಅಂದೇ ಪಾವಗಡ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಆಂಧ್ರದ ಹಿಂದೂಪುರ ಗಂಗಾರಾಜು ಎ. ಅನ್ನೋರಿಗೆ ಮೊದಲ ಮಗು ಮತ್ತು ಕಿಲ್ಲಾರದಹಳ್ಳಿಯ ಸದ್ಯ ತುಮಕೂರಿನ ವಾಸಿಯಾಗಿರುವ ಆಂಜನೇಯ ನಾಯ್ಕ ಅವರಿಗೆ ಎರಡನೇ ಮಗುವನ್ನು ನೀಡಿದ್ದರು. ವಿಷಯ ಅರಿತ ತಾಲೂಕು ಸಿಡಿಪಿಓ ಉಷಾ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಮೂವರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.