23ರಿಂದ ಚುಂಚಶ್ರೀ ಜಿಲ್ಲಾ ಪ್ರವಾಸ
ತುಮಕೂರು: ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಡಿ. 23 ರಿಂದ 28 ರವರೆಗೆ ನಗರದಲ್ಲಿ ಧರ್ಮ ಪ್ರಚಾರ ಪ್ರವಾಸ ಕೈಗೊಂಡಿದ್ದಾರೆ ಎಂದು ಜಿಲ್ಲಾ ಒಕ್ಕಲಿಗ ಒಕ್ಕೂಟದ ಅಧ್ಯಕ್ಷ ಎನ್. ಕೆಂಪಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಮಂಚಕಲ್ಕುಪ್ಪೆಯಲ್ಲಿ ಶಾಖಾ ಮಠ ಹಾಗೂ ಶೈಕ್ಷಣಿಕ ಸಂಸ್ಥೆಗಳ ಶಂಕುಸ್ಥಾಪನೆ ನೆರವೇರಿಸುವರು ಎಂದು ತಿಳಿಸಿದರು.
ಭಕ್ತರ ಆಹ್ವಾನದ ಮೇರೆಗೆ ಡಿ.23 ರಿಂದ ಐದು ದಿನಗಳ ಕಾಲ ನಗರದಲ್ಲಿ ಧರ್ಮ ಪ್ರಚಾರ ಪ್ರವಾಸ ಹಮ್ಮಿಕೊಂಡಿರುವ ಶ್ರೀಗಳು ವಿವಿಧ ಭಕ್ತರ ಮನೆಗಳಲ್ಲಿ ಸತ್ಸಂಗ, ಸಾರ್ವಜನಿಕ ಸ್ಥಳಗಳಲ್ಲಿ ಧರ್ಮ ಪ್ರವಚನ ನಡೆಸಿಕೊಡುವರು.
ಶಂಕುಸ್ಥಾಪನೆ: ಇದೇ ವೇಳೆ ನಗರ ಹೊರವಲಯದ ಮಂಚಕಲ್ಕುಪ್ಪೆ ಬಳಿ ಮಠದ 40 ಎಕರೆ ಜಾಗದಲ್ಲಿ ಶಾಖಾ ಮಠದ ಕಟ್ಟಡಕ್ಕೆ ಹಾಗೂ ವಸತಿಯುತ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು.
ಕಾರ್ಯಕ್ರಮಗಳು ಮಾಯಸಂದ್ರ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಲಿವೆ ಎಂದು ತಿಳಿಸಿದರು.
ಡಿ.23 ರಂದು ಬೆಳಿಗ್ಗೆ ಪುರ ಪ್ರವೇಶ ಮಾಡಲಿರುವ ಸ್ವಾಮೀಜಿಯವರನ್ನು ಸಾಲಂಕೃತ ಸಾರೋಟಿನಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಹನುಮಂತಪುರದ ಬೈಲಾಂಜನೇಯ ಸ್ವಾಮಿ ದೇವಾಲಯದ ಆವರಣಕ್ಕೆ ಕರೆತರಲಾಗುವುದು.
ಅಲ್ಲಿ 11.30ಕ್ಕೆ ಪ್ರಥಮ ಸಾರ್ವಜನಿಕ ಪ್ರವಚನ ನಡೆಸಿಕೊಡುವ ಶ್ರೀಗಳು, ನಂತರ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.
ಶಾರದಾಶ್ರಮದಲ್ಲಿ ವಾಸ್ತವ್ಯ: ಅದೇ ದಿನ ಮಧ್ಯಾಹ್ನ 1 ರಿಂದ ನಗರದ ವಿವಿಧ ಭಕ್ತರ ಮನೆಗಳಿಗೆ ಭೇಟಿ ಕೊಡುವ ಶ್ರೀಗಳು ರಾತ್ರಿಯ ವೇಳೆ ಶೆಟ್ಟಿಹಳ್ಳಿ ರಿಂಗ್ ರಸ್ತೆಯ ಶಾರದಾಶ್ರಮದಲ್ಲಿ ವಾಸ್ತವ್ಯ ಹೂಡುವರು.
ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಒಕ್ಕೂಟದ ಮುಖಂಡರು ಮನವಿಮಾಡಿದರು. ಒಕ್ಕೂಟದ ಮುಖಂಡರಾದ ಕೆ.ಬಿ.ಬೋರೇಗೌಡ, ಪುಟ್ಟೀರಪ್ಪ, ಆರ್. ಕಾಮರಾಜ್, ಸಿದ್ದಲಿಂಗೇಗೌಡ, ಗಿರೀಶ್, ಭೈರಣ್ಣ, ದೇವೇಗೌಡ, ಬ್ಯಾಟರಂಗೇಗೌಡ, ಕೇಶವಮೂರ್ತಿ, ಲಕ್ಕಣ್ಣ, ಬೆಳ್ಳಿ ಲೋಕೇಶ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

