ತುಮಕೂರು

ಸುದ್ದಿ ಸಂಕ್ಷೇಪ

Published On :

ಸ್ಲಂ ಯುವಕರನ್ನು ಕ್ರಿಮಿನಲ್ಸ್ ಎಂದು ಬಿಂಬಿಸದಿರಿ
ತುಮಕೂರು: ಸ್ಲಂ ಯುವಕರನ್ನು ಕ್ರಿಮಿನಲ್ಸ್ ಎಂದು ಬಿಂಬಿಸುವ ದೃಷ್ಟಿಕೋನ ಬದಲಾಗಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ  ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ತಿಳಿಸಿದರು. ಅವರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ನಗರ ವಂಚಿತ ಯುವ ಜನರ  ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸ್ಲಂ ಯುವಕರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ಅಂಗವಾಗಿ ಕ್ರೀಡಾ ಮತ್ತು ಸಾಂಸ್ಕೃಕ ಸ್ಪರ್ಧೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಲಂ ಯುವಕರನ್ನು ಇಂದು ವ್ಯವಸ್ಥೆ ಕ್ರಿಮಿನಲ್ಸ್ ಗಳೆಂದು ಪ್ರತಿಬಿಂಬಿಸುತ್ತಿದ್ದು, ಯಾರೋ ಒಂದಿಬ್ಬರು ಕಳ್ಳಕಾಕರನೇ ಇಟ್ಟುಕೊಂಡು, ಇಡೀ ಸ್ಲಂನಲ್ಲಿರುವ ಯುವಕರಗಳನ್ನ ಕ್ರಿಮಿನಲ್ಸ್‌ಗಳೆಂದು ಪ್ರತಿಬಿಂಬಿಸುವ ದೃಷ್ಟಿಕೋನ ಬದಲಾಗಬೇಕು. ಸ್ಲಂ ಯುವ ಜನರಲ್ಲಿರುವ ವಿಪುಲವಾದ ಮಾನವ ಶ್ರಮ ಸಂಸ್ಕೃತಿ ಮತ್ತು ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗೆ ಸೂಕ್ತ ವಾತಾವಾರಣಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದರು.
ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಸೀಬಿರಂಗಯ್ಯ ಮಾತನಾಡಿ ಕೊಳಗೇರಿಗಳಲ್ಲಿ ಪ್ರತಿಭಾವಂತ ಕ್ರೀಡಾ ಪಟುಗಳು ಇದ್ದಾರೆ. ಅವರಿಗೆ ಸೂಕ್ತ ಸಹಕಾರ ಪ್ರೋತ್ಸಾಹ ಅಗತ್ಯವಿದ್ದು ಇದನ್ನು ಕ್ರೀಡಾ ಇಲಾಖೆಯಿಂದ ಒದಗಿಸಲಾಗುವುದು ಎಂದರು. ದುಶ್ಚಟಗಳಿಂದ ದೂರವಾಗಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ  ನಗರ ವಂಚಿತ ಯುಜನರಿಗೆ ತಿಳಿಸಿದರು.
ಈ ಕ್ರೀಡಾ ಕೂಟಕ್ಕೆ ಎನ್.ಆರ್.ಕಾಲೋನಿ, ಭಾರತಿನಗರ, ಗಂಗಸಂದ್ರ, ಮಾರಿಯಮ್ಮ ನಗರ, ವಿನಾಯಕ ನಗರ ಮತ್ತು ಅಂಬೇಡ್ಕರ ನಗರದ ತಂಡಗಳು ಕ್ರೀಡಾ ಕೂಟಕ್ಕೆ ಬಂದ್ದಿದರು. ಈ ಕ್ರೀಡಾ ಕೂಟಕ್ಕೆ ತೀರ್ಪುಗಾರರಾಗಿ ದೈಹಿಕ ಶಿಕ್ಷಕ ಟಿ.ಎಚ್. ಕುಮಾರ್ ಆಗಮಿಸಿದ್ದರು. ರಾಜೇಂದ್ರ ಪ್ರಸಾದ್ ಶೆಟ್ಟಾಳಯ್ಯ, ರಾಮಯ್ಯ, ಅರುಣ್, ಗಾಯಿತ್ರಿ, ಕೋಮಲ, ರಘು ಮುತಾಂದವರು ಹಾಜರಿದ್ದರು
ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮ
ತಿಪಟೂರು: ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಛಲವಾದಿ ಮಹಾಸಭಾ ಹಾಗೂ ಜಿಲ್ಲಾ ದಲಿತ ಒಕ್ಕೂಟ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ದಲಿತ ಒಕ್ಕೂಟ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಛಲವಾದಿ ಸಭಾ ಅಧ್ಯಕ್ಷ ಟಿ.ಎಲ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದಲಿತ ಒಕ್ಕೂಟ ಸಮಿತಿ ತಾ. ಅಧ್ಯಕ್ಷ ಬಿದರೆಕೆರೆ ಚನ್ನವೀರಯ್ಯ, ಕರಡಾಳು ವೆಂಕಟೇಶ್, ಬಿ.ಹೆಚ್. ಲೋಕೇಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜಿ.ಕೆಂಪಯ್ಯ, ಮರಿಯಪ್ಪ, ರತ್ನಸ್ವಾಮಿ, ಮಹೇಶ್, ರೇಣುಕಪ್ಪ ಮತ್ತಿತರರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.