ಯುವ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಗೆ ಮತದಾನ
ತುರುವೇಕೆರೆ: ಯುವ ಕಾಂಗ್ರೆಸ್ನ ಸಾಂಸ್ಥಿಕ ಚುನಾವಣೆಗೆ ಮತದಾನ ನಡೆಯಿತು. ತುರುವೇಕೆರೆ ವಿಧಾನಸಭಾ ಚುನಾವಣೆಯ ಸುಮಾರು 226 ಬೂತ್ ಮಟ್ಟದ ಕಾರ್ಯಕರ್ತರ ಚುನಾವಣೆಗೆ ಚಾಲನೆ ನೀಡಲಾಯಿತು. ಪ್ರತಿ ಬೂತ್ನಲ್ಲಿ ಕನಿಷ್ಠ 10 ಕಾರ್ಯಕರ್ತರಿಂದ 30 ಕಾರ್ಯಕರ್ತರಿದ್ದಾರೆ. ಇವರಲ್ಲಿ 5 ಮಂದಿಯನ್ನು ಆಯಾ ಬೂತ್ ಮಟ್ಟದ ಕಾರ್ಯಕರ್ತರೇ ಆಯ್ಕೆ ಮಾಡಬೇಕಿದೆ. ಐವರಲ್ಲಿ ಹೆಚ್ಚು ಮತಗಳಿಸಿದರು ಅಧ್ಯಕ್ಷರು, ನಂತರದ ಸ್ಥಾನಗಳು ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಎಂಬ ಸ್ಥಾನಗಳು ಇರುತ್ತವೆ. ಚಲಾವಣೆಯಾದ ಮತದಲ್ಲಿ ಶೇಕಡಾ 20 ರಷ್ಟು ಮತಗಳನ್ನು ಪಡೆದವರು ಮಾತ್ರ ಜಯಶಾಲಿಯಾಗುವರು.
ಚುನಾವಣೆಯಲ್ಲಿ ಕ್ಷೇತ್ರದ 18 ರಿಂದ 35 ವರ್ಷದೊಳಗಿನ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಗುರುಭವನದಲ್ಲಿ ನಡೆದ ಚುನಾವಣೆಯಲ್ಲಿ ಬಹಳ ಉತ್ಸಾಹದಿಂದಲೇ ಮತದಾನ ಮಾಡಲು ಆಗಮಸಿದ್ದರು. ಮಹಿಳೆಯರೂ ಸಹ ಸಕ್ರಿಯವಾಗಿ ಮತ ಚಲಾವಣೆ ಮಾಡಿದರು. ಎರಡು ದಿನಗಳ ಕಾಲ ಬೂತ್ ಬೂತ್ ಮಟ್ಟದ ಚುನಾವಣೆ ನಡೆಯಿತು. ಚುನಾವಣೆಗೆ ರಾಜ್ಯ ಯುವ ಕಾಂಗ್ರೆಸ್ನ ಕಾರ್ಯದರ್ಶಿ ಹಾಗೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಪರಾಜಿತರಾಗಿದ್ದ ಗೀತಾ ರಾಜಣ್ಣನವರೂ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

