ಕನ್ನಡ ಭಾಷೆ ವಿದ್ಯುನ್ಮಾನಗಳಲ್ಲಿ ದೇಶೀಯ ಸಂಸ್ಕೃತಿ ಕಡೆಗಣನೆ
ಕ.ಪ್ರ.ವಾರ್ತೆ , ಕುಣಿಗಲ್ , ಡಿ. 10
ಕನ್ನಡ ಭಾಷೆ ವಿದ್ಯುನ್ಮಾನಗಳಲ್ಲಿ ದೇಶೀಯ ಸಂಸ್ಕೃತಿ ಕಡೆಗಣಿಸಿ, ಪಾಶ್ಚಿಮಾತ್ಮ ಸ್ಕೃತಿಯನ್ನು ವೈಭವಿಕರಿಸುವ ಮನೋಭಾವ ಹೆಚ್ಚುತ್ತಿದ್ದು, ಇಂತಹ ವಿದ್ಯುನ್ಮಾನ ಮಾಧ್ಯಮಗಳು, ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರಿ ನಮ್ಮ ಸಂಸ್ಕೃತಿಯನ್ನು ಮರೆಯುವಂಥ ವಾತಾವರಣ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಎಂದು ಶಾಸಕ ಡಿ. ನಾಗರಾಜಯ್ಯ ತಿಳಿಸಿದರು.
ಪಟ್ಟಣದ ಸಿದ್ದಾರ್ಥ ಪ.ಪೂ.ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ತಾಲೂಕು ಮಟಟ್ದ ಪ್ರತಿಭಾಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮುಗ್ಧಮನಸ್ಸಿನ ಮಕ್ಕಳು ದೃಶ್ಯಮಾಧ್ಯಮದಲ್ಲಿ ಬರುವುದನ್ನು ಬಹುಬೇಗ ಗ್ರಹಿಸುವ ಹೆಚ್ಚಿನ ಸಾಮರ್ಥ್ಯಹೊಂದಿದ್ದು, ಇಂದಿನ ಬಹುತೇಕ ದೃಶ್ಯ ಮಾಧ್ಯಮಗಳಲ್ಲಿ, ನಮ್ಮ ನಾಡಿನ ಜನಪದಕಲೆ, ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಸಾಕಷ್ಟು ಕಾರ್ಯಕ್ರಮ ಮೂಡಿಬರದೆ, ಪಾಶ್ಮಿಮಾತ್ಯ ಸಂಸ್ಕೃತಿಯ ಕಾರ್ಯಕ್ರಮಕ್ಕೆ ಮಾರುಹೋಗಿದ್ದು, ನಮ್ಮ ಸಂಸ್ಕೃತಿಯಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಪೋಷಕರು ಜಾಗೃತೆವಹಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಂತ ಕಲೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕೆಂದರು.
ಆರೋಗ್ಯಕರ ಸ್ಪರ್ಧೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆಯ ಮನೋಭಾವ ಇರಬೇಕು. ತಮ್ಮಲ್ಲಿರುವ ಕಲೆ, ಕರಕುಶಲ ಸೇರಿದಂತೆ ಪಠ್ಯೇತರ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳನ್ನು ಬಳಿಸಿಕೊಂಡು ಖ್ಯಾತಿಗಳಿಸಬೇಕೆಂದರು. ಬಿಇಒ
ಸಿದ್ದಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಪುರಸಭೆ ಸದಸ್ಯ ಸತೀಶ, ಜಿಪಂ ಸದಸ್ಯರಾದ ವೈ.ಎಚ್ಯಹುಚ್ಚಯ್ಯ, ಅರುಣ ಕುಮಾರ್, ತಾಪಂಅಧ್ಯಕ್ಷೆ ತೇಜಸ್ವಿನಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ನಿರ್ದೇಶಕರಾದ ನಾಗರಾಜ (ಗುರು), ಗೋಪಾಲ, ಬಿಆರಿಸಿ ಗುಲ್ಜಾರ್ ಅಹಮದ್, ಅಕ್ಷರ ದಾಸೋಹ ಯೋಜನಾ ಸಹಾಯಕ ನಿರ್ದೇಶಕ ಡಿ.ಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ದಿನೇಶ್ ಕುಮಾರ್, ಕಾಲೇಜು ಪ್ರಾಚಾರ್ಯ ಗಂಗಯ್ಯ ಇತರರು ಉಪಸ್ಥಿತರಿದ್ದರು. ಹೋಬಳಿಗಳ ಮಟ್ಟದಲ್ಲಿ ವಿಜೇತರಾದ ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮಲ್ಲಿನ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಿದ್ದು, ಬಹುತೇಕ ಶಾಲಾ ಮಕ್ಕಳು ಪೌರಾಣಿಕ ಪ್ರಸಂಗಗಳಿಗೆ ವೇಷ ಭೂಷಣಗಳೊಂದಿಗೆ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.
ಗ್ರಾಮಾಂತರ ಪ್ರದೇಶದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕಾದ ಕೆಲ ಶಿಕ್ಷಕರು, ಶಾಲಾ ಪ್ರಾರಂಭಕ್ಕೆ ತಡವಾಗಿ ಮತ್ತು ಬಿಡುವ ವೇಳೆಯ ಮುಂಚಿತವಾಗಿ, ಹೋಗುತ್ತಿರುವ ಬಗ್ಗೆ ವೇದಿಕೆಯಲ್ಲೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಿ.ನಾಗರಾಜಯ್ಯ, ಇಂತಹ ಶಿಕ್ಷಕರಿಂದ ಗ್ರಾಮಾಂತರ ಶೈಕ್ಷಣಿಕ ಪ್ರಗತಿ ಹೇಗೆ ನಿರೀಕ್ಷಿಸಬಹುದಾಗಿದೆ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಜಾಗೃತೆ ವಹಿಸಿ ಅನಿರೀಕ್ಷಿತ ಭೇಟಿ ನೀಡಿ, ಇಂತಹ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಿ ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

