ತುಮಕೂರು

ಜನಪ್ರತಿನಿಧಿಗಳ ಗ್ರಾಮ ಪ್ರದಕ್ಷಿಣೆ ವೇಳೆ ಸಮಸ್ಯೆಗಳ ದರ್ಶನ

Published On :

ತುರುವೇಕೆರೆ: ಎತ್ತ ನೋಡಿದರೂ ತಿಪ್ಪೆಗಳ ರಾಶಿ... ಚರಂಡಿಗಳು ಇಲ್ಲದ ಕಾರಣಕ್ಕೆ ಮನೆ ದಾರಿ ಮೇಲೆಯೇ ಹರಿದು ಬರುತ್ತಿರುವ ಚರಂಡಿ ನೀರು.. ಕುಡಿಯುವ ನೀರಿಗಂತೂ ತೊಂದರೆ ಇಲ್ಲ ಆದರೂ ನೀರು ಬಿಡುವ ನೀರುಗಂಟಿಯ ಸಮಸ್ಯೆ, ಹಾಳಾಗಿ ಹೋಗಿರುವ ಪೈಪುಲೈನ್. ಕಿತ್ತು ಬಂದಿರುವ ಡಾಂಬಾರು ರಸ್ತೆ. ಚರಂಡಿ ನೀರೆಲ್ಲಾ ಮನೆಯ ತಳಹದಿಯೊಳಗೇ ಹೋಗುವ ಸ್ಥಿತಿ. ಜೊತೆಗೆ ಸೊಳ್ಳೆಗಳ ಕಾಟ.
ಇದು ಮಾಯಸಂದ್ರ ಗ್ರಾಮದ ನಿವಾಸಿಗಳು ಪ್ರತಿದಿನವೂ ಅನುಭವಿಸುತ್ತಿರುವ ಸಂಕಷ್ಟ ಗಳ ಸರಮಾಲೆ. ಜಿಪಂ ಸದಸ್ಯ ಶ್ರೀನಿವಾಸ್ ಗ್ರಾಮದ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಪಂಚಾಯ್ತಿ ಅಧ್ಯಕ್ಷೆ ಜಯಂತಿ ಪ್ರಕಾಶ್, ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಶಶಿಕುಮಾರ್, ಪಿಡಿಒ ಮಂಜಮ್ಮ, ಕಾರ್ಯದರ್ಶಿ ಸುರೇಶ್ ಹಾಗೂ ಸದಸ್ಯರನ್ನು ಒಳಗೊಂಡಂತೆ ಮಾಡಿದ ಗ್ರಾಮ ಪ್ರದಕ್ಷಿಣೆ ವೇಳೆ ಕಂಡ ಸಾಕ್ಷಾತ್ ದರ್ಶನ.
 ಗ್ರಾಪಂ ಅಧ್ಯಕ್ಷೆ ಜಯಂತಿ ಪ್ರಕಾಶ್, ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಶಶಿಕುಮಾರ್, ಸದಸ್ಯರಾದ ಕಮಲಮ್ಮ ಕೆಂಪೇಗೌಡ, ಗುರುಪ್ರಸಾದ್, ಗೀತಾ ಶೇಖರ್, ಮುಸ್ತರಿಬಾಬು, ಸವಿತಾ ಶಿವಕುಮಾರ್, ರಂಗನಾಥ್, ಗೀತಾಬಾಲು, ಸುಬ್ರಹ್ಮಣ್ಯ, ಸುನಂದಮ್ಮ ಸುರೇಶ್,   ರವಿಕುಮಾರ್, ಚಂದ್ರಪ್ರಭು, ಟಿ.ನಾಗೇಶ್, ಹಿರಿಯ ಗ್ರಾಮಸ್ಥರು, ಸ್ವಾತಂತ್ರ್ಯ ಹೋರಾಟಗಾರ ಎಂ.ಹೆಚ್.ನರಸಿಂಹಯ್ಯ  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.