ಶ್ರೀಕಂಠದತ್ತ ಸಕಲಕಲಾ ವಲ್ಲಭರು
ಕ.ಪ್ರ.ವಾರ್ತೆ , ತುಮಕೂರು , ಡಿ. 13
ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದಿಂದ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಅಭಿಪ್ರಾಯಪಟ್ಟರು. ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ನೆಲ್ಸನ್ ಮಂಡೇಲಾ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧ ಹವ್ಯಾಸ ಹೊಂದಿದ್ದವರು: ಮೈಸೂರು ಸಂಸ್ಥಾನವು ಪ್ರಪಂಚದ ಎಲ್ಲಾ ಜನರಿಗೂ ಆಕರ್ಷಣೆಯ ಸ್ಥಳವಾಗಿದ್ದು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದಾನ ಧರ್ಮದ ಮುಖಾಂತರ ಹಾಗೂ ರಾಜಕೀಯ, ಕ್ರೀಡೆ, ಸಂಗೀತದ ಹವ್ಯಾಸ ಬೆಳೆಸಿಕೊಂಡು ಮೈಸೂರು ಸಂಸ್ಥಾನವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದರು ಎಂದರು. ಮೈಸೂರು ದಸರ ಕಾರ್ಯಕ್ರಮಕ್ಕೆ ಸ್ಪೂರ್ತಿ ನೀಡಿ ಲಕ್ಷಾಂತರ ಜನರನ್ನು ಒಂದೇ ಕಡೇ ಸೇರಿಸಿ ದಸರ ಉತ್ಸವವನ್ನು ನೋಡಲು ಅವಕಾಶ ಮಾಡಿಕೊಟ್ಟ ಮಹಾನ್ ನಾಯಕ ಇವರು. ಇಂತಹವರ ನಿಧನದಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದರು.
ನೆಲ್ಸನ್ ನಿಧನಕ್ಕೆ ಸಂತಾಪ
ವಿಶ್ವಮಾನವ ನೆಲ್ಸನ್ ಮಂಡೇಲಾ ವರ್ಣಭೇದ ನೀತಿಯ ಮೂಲಕ ದಬ್ಬಾಳಿಕೆ ನಡೆಸಿದ ಬಿಳಿಯರಿಗೆ ದ್ವೇಷ-ಅಸೂಯೆ ಬಿಟ್ಟು ಶಾಂತಿಯುತ ಸಹಬಾಳ್ವೆಯ ಮುಖೇನ ಎಲ್ಲಾ ಜಾತಿ ಜನಾಂಗಗಳು ಒಗ್ಗೂಡಲು ಸಾಧ್ಯ ಎಂಬುದನ್ನು ತನ್ನ ಬದುಕಿನ ಮೂಲಕ ನಿರೂಪಿಸಿದ ಏಕೈಕ ವ್ಯಕ್ತಿ ಎಂದು ಬಣ್ಣಿಸಿದರು. ಜಿಪಂ ಸದಸ್ಯ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಮಂಡೇಲಾ 27 ವರ್ಷಗಳ ಕಾಲ ಜೈಲು ಬಂಧನದಲ್ಲಿದ್ದವರು. ಈ ನಿಟ್ಟಿನಲ್ಲಿಯೂ ಅವರು ಯಾರ ಬಗ್ಗೆಯೂ ದ್ವೇಷ ಮಾಡಲಿಲ್ಲ. ಕಪ್ಪುಜನರ ಜೊತೆ ಬಿಳಿಯರನ್ನು ಒಗ್ಗೂಡಿಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಿದರು. ಇವರ ನಿಧನದಿಂದ ಇಡೀ ವಿಶ್ವಕ್ಕೆ ತುಂಬಾಲಾರದ ನಷ್ಟವುಂಟಾಗಿದ್ದು ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಅವರ ಆತ್ಮಕ್ಕೆ ಸಂತಾಪ ಸೂಚಿಸಿದರು. ಜೆಡಿಎಸ್ ಮುಖಂಡರಾದ ಟಿ.ಎಚ್. ಜಯರಾಮ್, ಪುಟ್ಟೀರಪ್ಪ, ಇಕ್ಬಾಲ್, ಬೆಳ್ಳಿ ಲೋಕೇಶ್, ಮಲ್ಲಿಕಾರ್ಜುನ್, ಶ್ರೀನಿವಾಸ ಪ್ರಸಾದ್, ತಾಹಿರಾಬಾನ್, ರಾಣಿ ಚಂದ್ರಶೇಖರ್, ಪ್ರಮೀಳಾನಾಗೇಶ್, ಚಂದ್ರಬಾಬು, ಚಂದ್ರಣ್ಣ, ನಜೀರ್ ಬೇಗ್, ವೆಂಕಟೇಶ್, ಚೆಲುವರಾಜು, ಮುಜಾಹೀದ್, ಕಿರಣ್ ಬಾಸ್ಕರಪ್ಪ, ಎಚ್. ಮೂರ್ತಿ , ಮಲ್ಲಿಕ್ ರೆಹಮಾನ್, ಹನೀಸ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಒಡೆಯರ್ಗೆ ಶ್ರದ್ದಾಂಜಲಿ
ತಿಪಟೂರು: ಮೈಸೂರು ಒಡೆಯರ್ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ತಾಲ್ಲೂಕಿನ ಹೊನ್ನವಳ್ಳಿಯ ಅರಸು ಮಂಡಳಿ ಹಾಗೂ ಗ್ರಾಮಸ್ಥರು ಆಚರಿಸಿದರು. ಇದೇಳ ವೇಳೆ ಒಡೆಯರ್ ಭಾವಚಿತ್ರವನ್ನು ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಮಾಜ ಮುಖಂಡರಾದ ಗೋಪಾಲ್ರಾಜೇ ಅರಸು ತ್ಯಾಗರಾಜ ಅರಸ್ ನೇತೃತ್ವ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಹೆಚ್.ಆರ್.ಶ್ರೀಕಂಠಮೂರ್ತಿ ಮಾತನಾಡಿದರು. ಗ್ರಾಪಂ ಸದಸ್ಯರಾದ ನರಸಿಂಹಮೂರ್ತಿ, ಕೃಷ್ಣಮೂರ್ತಿ,ತಿಮ್ಮರಾಜ ಅರಸ್, ಮೈಲಾರರಾಜ ಅರಸ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

