ಪಟ್ಟಣ ವ್ಯಾಪ್ತಿಯಲ್ಲೂ ಚಿರತೆ ಹಾವಳಿ
ಕುಣಿಗಲ್: ತಾಲೂಕಿನ ಕೊತ್ತಗೆರೆ, ಕಸಬಾ ಹಾಗೂ ಹುತ್ರಿದುರ್ಗ ಹೋಬಳಿಯ ವಿವಿಧ ಗ್ರಾಮದಲ್ಲಿ ಕಾಡುತ್ತಿದ್ದ ಚಿರತೆ ಹಾವಳಿ ಇದೀಗ ಪಟ್ಟಣ ವ್ಯಾಪ್ತಿಯಲ್ಲಿ ಪ್ರಾರಂಭವಾಗಿದ್ದು, ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.
ಕಳೆದ ಕೆಲವಾರು ತಿಂಗಳಲ್ಲಿ ವಿವಿಧ ಹೋಬಳಿಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಚಿರತೆ ರೈತರು ಸಾಕಿದ ಜಾನುವಾರುಗಳ ಮೇಲೆ, ಬೀದಿ ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದು ರೈತರು ಆತಂಕಗೊಂಡು ಅರಣ್ಯ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಚಿರತೆ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿದ್ದರು. ಆದರೂ ಅರಣ್ಯ ಇಲಾಖೆಯ ನಿಯಂತ್ರಣ ಕ್ರಮಗಳ ವೈಫಲ್ಯದಿಂದಾಗಿ ಕೇವಲ ಗ್ರಾಮಾಂತರ ಪ್ರದೇಶಕ್ಕೆ ಸೀಮಿತವಾಗಿದ್ದ ಚಿರತೆ ಹಾವಳಿ, ಕಳೆದ ಕೆಲದಿನಗಳಿಂದ ಪಟ್ಟಣ ವ್ಯಾಪ್ತಿಯ ಐಯ್ಯಪ್ಪದೇವಾಲಯ ಸಮಿಪ, ಹೊರವಲಯದ ಗಂಗೇನಹಳ್ಳಿ ಬಯಲು ಪ್ರದೇಶದಲ್ಲಿ ವ್ಯಾಪಕವಾಗಿತ್ತು.
ಈ ಮಧ್ಯೆ ಕಳೆದ ವಾರ ಖಾಸಗಿ ಬಸ್ ಚಾಲಕನೊಬ್ಬ ರಾತ್ರಿವೇಳೆ ತಾಯಿ ಚಿರತೆಯೊಂದಿಗೆ ಮೂರು ಚಿರತೆಮರಿಗಳು ಕೊತ್ತಗೆರೆ ಹೊರವಲಯದ ರಾಜ್ಯಹೆದ್ದಾರಿ 33ರನ್ನು ಗ್ರಾಮಾಂತರ ಪ್ರದೇಶದ ಕಡೆಯಿಂದ ಗಂಗಾಡಿಹಳ್ಳಿ ಬಯಲು ಪ್ರದೇಶದ ಕಡೆಗೆ ತೆರಳಿದ್ದನ್ನು ನೋಡಿದ್ದಾಗಿ ಹೇಳಿದ್ದರಿಂದ ಪಟ್ಟಣ ಪ್ರದೇಶ ಹಾಗೂ ಹೊಲವಲಯಕ್ಕೆ ಹೊಂದುಕೊಂಡ ದೊಡ್ಡಕೆರೆ ಅಚ್ಚು ಕಟ್ಟು ಪ್ರದೇಶದ ಗಂಗೇನಹಳ್ಳಿ, ಕೆಆರ್‌ಎಸ್ ಅಗ್ರಹಾರ, ಲಕ್ಷ್ಮದೇವಿಹಂತ ಪ್ರದೇಶದ ತೋಟ, ಗದ್ದೆ ಪ್ರದೇಶದ ಸಾರ್ವಜನಿಕರು ಆತಂಕ ಗೊಂಡಿದ್ದಾರೆ.
ದನ-ಕರುಗಳ ಮೇಲೆ ದಾಳಿ: ಭಾನುವಾರ ಬೆಳಗಿನ ಜಾವ ಪುರಸಭೆಯ 12ನೇ ವಾರ್ಡ್ ಪ್ರದೇಶಕ್ಕೆ ಸೇರಿದ ವಾನಂಬಾಡಿ ಕಾಲೋನಿ ಪ್ರದೇಶದ ಪಕ್ಕದಲ್ಲೆ ಇರುವ ಖಾಸಗಿ ಸಮುದಾಯ ಭವನದ ಬಳಿಯ ಗದ್ದೆಬಯಲು ಪ್ರದೇಶದಲ್ಲಿ ಚಿರತೆ, ಗೊವಿಂದರಾಜು ಎಂಬುವವರಿಗೆ ಸೇರಿದ ಎರಡು ಹಸುಕರುಗಳ ಮೇಲೆ ದಾಳಿ ನಡೆಸಿ. ಕರುಗಳನ್ನು ವಸತಿ ಪ್ರದೇಶದಿಂದ ಸಮೀಪದ ಗದ್ದೆ ಪ್ರದೇಶಕ್ಕೆ ಕರೆತಂದು ತಿಂದಿದೆ. 12ನೇ ವಾರ್ಡ್ ಪ್ರದೇಶದ ನಾಗರಿಕರಲ್ಲಿ ಆತಂಕ ಉಂಟುಮಾಡಿದೆ. ಈ ಮಧ್ಯೆ ಸದರಿ ಪ್ರದೇಶದಲ್ಲೆ ಯುವಕನೊಬ್ಬನು ಬಹಿರ್ದೆಸೆಗೆ ತೆರಳಿದ್ದಾಗ ಆತನನ್ನು ಚಿರತೆಗಳು ಅಟ್ಟಾಡಿಸಿವೆ ಎಂಬ ವದಂತಿ ಹರಡಿ, ಮತ್ತಷ್ಟು ಗೊಂದಲಕ್ಕೊಳಗಾಗುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

