ಸಭೆ ಗಮನಕ್ಕೆ ಬಾರದಂತೆ ಬಿಲ್ ನೀಡಿದ್ದಕ್ಕೆ ಆಕ್ರೋಶ
ಕುಣಿಗಲ್: ಆರೂವರೆ ಲಕ್ಷ ರು. ಮೌಲ್ಯದ ಸಕ್ಕಿಂಗ್ ಯಂತ್ರಕ್ಕೆ10.80 ಲಕ್ಷ ರು.ತಾಪಂ ಸಭೆಯ ಗಮನಕ್ಕೆ ಬಾರದಂತೆ ಬಿಲ್ ನೀಡಿರುವುದು, ಮಾಜಿ ಶಾಸಕರು ಶಾಲೆಯ ರಕ್ಷಣಾಗೋಡೆ ಕಾಮಗಾರಿ ಮುಗಿಯದೆ ಬಿಲ್ ಪಾವತಿಗೆ ಸಹಿ ಹಾಕಿರುವುದು, ಕಳೆದ ಸಭೆಯ ತೀರ್ಮಾನಗಳಿಗೆ, ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು, ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಬುಧವಾರ, ತಾಪಂ ಅಧ್ಯಕ್ಷೆ ತೇಜಸ್ವಿನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಸದಸ್ಯ ಕೆಂಪಗೂಳಿ ಗೌಡ 2011ರಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆ ಪ್ರಸ್ತಾಪಿಸಿದ್ದು, ಅನುಪಾಲನಾವರದಿ ನೀಡದಿರುವ ಬಗ್ಗೆ, ಕೆಲ ತಿಂಗಳ ಹಿಂದೆ ತಾಪಂ ಸದಸ್ಯೆ ಮೋಹನಾಂಬ, ಹೇರೂರು ಗ್ರಾಪಂನಲ್ಲಿ ಅಭಿವೃದ್ಧಿ ವಿಷಯವಾಗಿ ಚರ್ಚಿಸುತ್ತಿದ್ದಾಗ, ಗ್ರಾಪಂ ಸದಸ್ಯನೊಬ್ಬ ಅನುಚಿತವಾಗಿ ನಡೆದುಕೊಂಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಲು ಠರಾವು ಕೈಗೊಂಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ, ತಾಪಂ ಸದಸ್ಯರಿಗೆ ಬೆಲೆ ಇಲ್ಲ ದಂತಾಗಿದೆ. ಕಾಟಾಚಾರಕ್ಕೆ ಸಭೆ ನಡೆಯುವಂತಾಗಿದ್ದು, ಸಭೆಯ ತೀರ್ಮಾನಕ್ಕೆ ಬೆಲೆ ಸಿಗುವವರೆಗೂ ಸಭೆ ಬಹಿಷ್ಕರಿಸಲು ಮುಂದಾದರು. ಸದಸ್ಯ ರಾಮಣ್ಣ, ಮೂರ್ತಿ, ಹನುಮಾನಾಯಕ ಬೆಂಬಲಿಸಿದ್ದು, ಇಒ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ, ಬಹಿಷ್ಕಾರ ಕೈಬಿಟ್ಟರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಜಿಪಂ ಸೂಚನೆಯಂತೆ ಮಲಹೊರುವ ಪದ್ಧತಿ ನಿರ್ಮೂಲನೆಗಾಗಿ ಸಕ್ಕಿಂಗ್ ಯಂತ್ರ ಖರೀದಿಯ ಗೋಲ್ ಮಾಲ್ ಬಗ್ಗೆ ಪ್ರಸ್ತಾಪಿಸಿ, ಸಕ್ಕಿಂಗ್ ಯಂತ್ರ ಮತ್ತು ಟ್ರ್ಯಾಕ್ಟರ್ ಖರೀದಿಗೆ ಹಿಂದಿನ ಸಭೆಯಲ್ಲಿ ತೀರ್ಮಾನಿಸಿ, ತಾಪಂ ವತಿಯಂದ 13ಲಕ್ಷ ಮೀಸಲಿಟ್ಟಿದ್ದು, ಜಿಪಂನ ಹಿರಿಯ ಅಧಿಕಾರಿಗಳ ಅವೈಜ್ಞಾನಿಕ ತಂತ್ರದಿಂದಾಗಿ, ಹಿಂದಿನಇಒ ರಾಮಚಂದ್ರಪ್ಪ 10.80 ಲಕ್ಷ ರು.ಗಳನ್ನು
ತಾಪಂ ಸಭೆ ಗಮನಕ್ಕೆ ತಾರದೆ ನೀಡಿದ್ದಾರೆ. 3000 ಲೀಟರ್ ಸಾಮರ್ಥ್ಯದ ಸಕ್ಕಿಂಗ್ ಯಂತ್ರ, ಪುರಸಭೆ ಆರುವರೆ ಲಕ್ಷಕ್ಕೆ ಖರೀದಿಸಿದ್ದರೆ, ಜಿಪಂ 10.80 ಲಕ್ಷಕ್ಕೆ ಖರೀದಿಸಿರುವುದು ಈ ವ್ಯವಹಾರದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದರು. ಇತರೆ ಸದಸ್ಯರು ಜಿಪಂನ ಮೇಲಾಧಿಕಾರಿಗಳ ಕ್ರಮವನ್ನು ಖಂಡಿಸಿದರು.
ನಾಚಿಕೆಗೇಡು: ಸದಸ್ಯ ರಾಮಣ್ಣ, ಹೊಲಸು ಬಾಚುವ ಯಂತ್ರದಲ್ಲೂ ಅಧಿಕಾರಿಗಳ ಹೊಲಸುತನ ನಾಚಿಕೆಗೇಡಿನ ಸಂಗತಿಯಾಗಿದ್ದು ಇಡೀ ಪ್ರಕರಣವನ್ನು ಲೋಕಾಯುಕ್ತತನಿಖೆಗೆ ವಹಿಸುವಂತೆ, ಬಿಲ್ ಮಾಡಿರುವ ಹಿಂದಿನ ಇಒ, ಲೆಕ್ಕಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ತೀರ್ಮಾನಿಸಿದರು. ಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣಗೋಡೆ ಪೂರ್ಣಗೊಳ್ಳದೆ, 2.66 ಲಕ್ಷರು.ಗಳನ್ನು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ,ಅಂದಿನ ಶಾಸಕರು, ತಮ್ಮ ಬೆಂಬಲಿಗರಿಗೆ ಅನುಕೂಲಮಾಡಿ ಕೊಡಲು, ಕಾಮಗಾರಿಯಾಗದೆ ಹಣ ಪೂರ್ಣಪಾವತಿಸಿ, ಒಂದೂವರೆ ವರ್ಷ ಕಳೆದರೂ ಕಾಮಗಾರಿಯಾಗದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಬಿಇಒ ಸಿದ್ದಯ್ಯನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಾಮಾನ್ಯರು ತಪ್ಪುಮಾಡಿದರೆ ಪ್ರಕರಣ ದಾಖಲಿಸುತ್ತಿದ್ದು, ಮಾಜಿ ಶಾಸಕರು ನಿಯಮ ಉಲ್ಲಂಘಿಸಿದ್ದರೂ ಸುಮ್ಮನಿರುವ ಬಗ್ಗೆ ಆಕ್ಷೇಪಿಸಿ, ಕೂಡಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿ, ವಿಫಲರಾದರೆ ಬಿಇಒ ವಿರುದ್ಧವೇ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಖಂಡನೆ: ಸಭೆಯಲ್ಲಿ ಎಪಿಎಲ್ ಕಾರ್ಡ್ದಾರರಿಗೂ ಕೇಂದ್ರಸರ್ಕಾರ ಆಹಾರ ಧಾನ್ಯ ನೀಡುತ್ತಿದ್ದರೂ, ರಾಜ್ಯಸರ್ಕಾರ ನೀಡದಿರುವುದನ್ನು ಖಂಡಿಸಿ, ಕೂಜಲೆ ಎಪಿಎಲ್ ಕಾರ್ಡ್ದಾರರಿಗೆ ಆಹಾರ ವಿತರಣೆಗೆ ಸರ್ಕಾರಕ್ಕೆ ಪತ್ರ ಬರೆಯುವುದು, ಮದ್ದೂರು ರಸ್ತೆಯಲ್ಲಿನ ತಾಪಂ ಆಸ್ತಿಯಾದ ಮುಸಾಫೀರ್ ಖಾನ್ನ ಜಾಗದಲ್ಲಿ ಅಕ್ರಮ ಪೆಟ್ಟಿಅಂಗಡಿ, ಜಿಪಂ ಎಂಜಿನಿಯರಿಂಗ್ ಕಚೇರಿ ತೆರವುಗೊಳಿಸಿ ಕಾಂಪ್ಲೆಕ್ಸ್ ನಿರ್ಮಿಸುವುದು, 2013-14ನೇ ಸಾಲಿನಲ್ಲಿ ವಿಕಲಾಂಗರಿಗೆ ತಾಪಂನ ಶೇ.3ರಡಿಯಲ್ಲಿ ಸಹಾಯಧನ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತೀರ್ಮಾನಿಸಲಾಯಿತು. ತಾಪಂ ಉಪಾಧ್ಯಕ್ಷ ಬಲರಾಮೇಗೌಡ, ಇಒ ಶಂಕರಪ್ಪ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

