ತುಮಕೂರು

ಸಮಾಜ ಹಿತಕ್ಕಾಗಿ ಸದಾ ಮುಂದು

Published On :

ಚಿಕ್ಕನಾಯಕನಹಳ್ಳಿ: ಸಮಾಜದ ಹಿತಕ್ಕೆ ವಿರುದ್ಧವಾದ ಸಂಗತಿಗಳನ್ನು ಗಟ್ಟಿ  ಧ್ವನಿಯಲ್ಲಿ  ಪ್ರತಿಕ್ರಿಯಿಸುವುದು ವೀರಶೈವ ಧರ್ಮದ ಜಾಯಮಾನ ಎಂದು ಬಾಳೆಹೊನ್ನೂರು  ಶ್ರೀಮದ್ ರಂಭಾಪುರಿ ಜಗದ್ಗುರುಗಳು ನುಡಿದರು.
ಅವರು  ತಾಲೂಕಿನ ಕುಪ್ಪೂರು ಗದ್ದಿಗೆ ಮಠದಲ್ಲಿ ಏರ್ಪಡಿಸಿದ್ದ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಗುರು ಶಿಷ್ಯರ ಸಂಬಂಧ ಪರಂಪರೆಯಿಂದಲು ಇದು ನಡೆದು ಬಂದಿದೆ, ಆಸ್ತಿಕರು ಗುರುಕಾಣಿಕೆಯಾಗಿ ರಾಜಮಹಾರಾಜರ ಕಾಲದಿಂದಲೂ ತಮ್ಮ ಭಕ್ತಿಯನ್ನು ವಿವಿಧ ರೀತಿಯಲ್ಲಿ ಗುರುವಿಗೆ ಸಮರ್ಪಿಸುತ್ತಾ ಬಂದಿದ್ದಾರೆ. ಅದರ  ಮುಂದುವರಿದ ಭಾಗವೇ ಅಡ್ಡಪಲ್ಲಕ್ಕಿ ಉತ್ಸವ.ನಾಸ್ತಿಕರಿಗೆ ಬೇಡದ್ದನ್ನು ಆಸ್ತಿಕರು ಮಾಡಬಾರದೆಂದರೆ  ಇದೇನು ಸರ್ವಾಧಿಕಾರಿ ಆಡಳಿತವೆ. ಪ್ರಜಾಪ್ರಭುತ್ವದಲ್ಲಿ ಸಮಾಜಕ್ಕೆ ಅಹಿತವನ್ನುಂಟು ಮಾಡುವ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ತಪ್ಪೇ ಹೊರತು ಅಡ್ಡಪಲ್ಲಕ್ಕಿಯಲ್ಲ. ದೇಶದಲ್ಲಿ ನಡೆಯುವ ಭಯೋತ್ಪಾದಕರ ಕೃತ್ಯವನ್ನು ಖಂಡಿಸಲು ಹೊರಳದ ವಿಚಾರವಾದಿಗಳ ನಾಲಿಗೆ, ಹಿಂದು ಧರ್ಮದ ಆಚರಣೆಗಳ ವಿರುದ್ಧ ಹೊರಳಲು ಮಾತ್ರ ಧೈರ್ಯಮಾಡುತ್ತದೆ ಎಂದರೆ ಅದು ಹಿಂದು ಧರ್ಮದಲ್ಲಿರುವ ಶಾಂತಸ್ವಭಾವವನ್ನು ದೌರ್ಬಲ್ಯವೆಂದು ಭಾವಿಸಿದಂತಿದೆ. ನಾವು ಈ ಹಿಂದೆ ಹೇಳಿರುವಂತೆ  ವೀರಶೈವ ಧರ್ಮ ಧಮನಕಾರಿ ನೀತಿಗಳ  ವಿರುದ್ಧ ಪ್ರತಿಕ್ರಿಯಿಸಲು ಯಾವತ್ತೂಅಂಜುವುದಿಲ್ಲ  ಎಂದರು.
ಅಪಾರ ಕೊಡುಗೆ: ಕರ್ನಾಟಕದಲ್ಲಿ ವೀರಶೈವ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. ಧಾರ್ಮಿಕ ಕಾರ್ಯಗಳ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಿಗೆ ಹತ್ತಿರವಾಗಿವೆ. ಕಲೆಯ ಮೂಲಕ ಸಮಾಜ ತಿದ್ದುವ ಕಾರ್ಯವನ್ನು ಮಾಡುತ್ತಿರುವ ಮಾಸ್ಟರ್ ಹಿರಣ್ಣನಯ್ಯನವರಿಗೆ ಮರುಳಸಿದ್ದಶ್ರೀ ಪ್ರಶಸ್ತಿ ನೀಡಿರುವುದೇ ಇದಕ್ಕೆ ಸಾಕ್ಷಿ.  ವಿನಯಕ್ಕೆ ಮತ್ತೊಂದು ಹೆಸರೇ ಹಿರಣ್ಣಯ್ಯನವರೆಂದರೆ ತಪ್ಪಾಗಲಾರದು. ಮೂಢನಂಬಿಕೆ ವಿರೋಧಿಸುವ ನೆಪದಲ್ಲಿ  ಧಾರ್ಮಿಕ ನಂಬಿಕೆಗಳನ್ನು ಕಲಸುಮೇಲೋಗರ ಮಾಡುವುದು ಖಂಡನೀಯ. ವೈಚಾರಿಕತೆಯ ಹೆಸರಿನಲ್ಲಿ ಧಾರ್ಮಿಕ ನಂಬಿಕೆಯ ಮೇಲೆ ದಬ್ಬಾಳಿಕೆ ನಡೆದರೆ ಮಠಗಳು ಕೈಕಟ್ಟಿ ಕೂರುವುದಿಲ್ಲ. ಅಡ್ಡಪಲ್ಲಕ್ಕಿ ವಿರೋಧದ ಹೆಸರಿನಲ್ಲಿ ನಮ್ಮ ಸಮಾಜದ ಕೆಲವು ಮಠಾಧೀಶರು ರಾಜಕಾರಿಣಿಗಳ  ಸಹಾಯ ಪಡೆದು ಮಾಡಬಾರದ್ದನ್ನು ಮಾಡಲು ಹೊರಟರು. ಆದರೆ ದೈವಪ್ರೇರಣೆಯಿಂದ 21ನೇ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಿಸಿತು ಎಂದರು.   
ಸಾನಿಧ್ಯವನ್ನು ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಶ್ರೀರುದ್ರಮುನಿ ಸ್ವಾಮೀಜಿ, ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ, ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.