ಮಕ್ಕಳೇ ನಿಮ್ಮ ಯಶಸ್ಸು ನಿಮ್ಮ ಕೈಲೇ ಇದೆ
ಕ.ಪ್ರ.ವಾರ್ತೆ ತುರುವೇಕೆರೆ ಡಿ.24
ಮಕ್ಕಳೇ ಯಾರೋ ಪ್ರಥಮ ಸ್ಥಾನಗಳಿಸಿ ಪ್ರಶಸ್ತಿ ಪಡೆಯುತ್ತಾರೆ ಎಂದಾದರೆ ಅದು ನೀವ್ಯಾಕೆ ಆಗಬಾರದು. ಅವರ ಯಶಸ್ಸಿನ ಹಿಂದೆ ಬಹಳ ಶ್ರಮವಿದೆ. ಸಾಧನೆ ಇದೆ. ಆ ಯಶಸ್ಸು ನಿಮ್ಮದೂ ಆಗಬೇಕಾದಲ್ಲಿ ನೀವು ಮೊದಲು ಸಾಧಕರಾಗಿ...
-ಹೀಗೆ ಶಾಲಾ ಕಾಲೇಜಿನ ಮಕ್ಕಳನ್ನು ಜಾಗೃತಗೊಳಿಸಿದವರು, ವ್ಯಕ್ತಿತ್ವ ವಿಕಸನ ಅಂತರರಾಷ್ಟ್ರೀಯ ತರಬೇತುದಾರ ಆರ್.ಎ.ಚೇತನ್ ರಾಮ್.
ಸ್ವಾಮಿ ವಿವೇಕಾನಂದ 150 ನೇ ಜಯಂತಿ ಸಮಿತಿ, ಸುರಭಿ ಸಂಗಮ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಚೇತನ್ ರಾಮ್ ಅವರು ವಿದ್ಯಾರ್ಥಿಗಳು ಪರೀಕ್ಷೆ ಎಂಬ ಭಯವನ್ನು ಮೊದಲು ತೊಡೆದು ಹಾಕಬೇಕು. ಸರಿಯಾದ ಸಮಯದಲ್ಲಿ, ಸರಿಯಾದ ಜ್ಞಾನಾರ್ಜನೆ ಪಡೆದರೆ ಪರೀಕ್ಷೆಯನ್ನು ಹಬ್ಬದಂತೆ ಆಚರಿಸಬಹುದು. ಪರೀಕ್ಷೆಯೆಂಬುದು ಯುದ್ಧವಲ್ಲ. ಅದು ನಿಮ್ಮ ಸಾಮರ್ಥ್ಯತಿಳಿಯುವ ಸಾಧನೆ ಅಷ್ಟೇ ಎಂದರು.
ಕಾರ್ಯಕ್ರಮಕ್ಕೆ 10 ನೇ ತರಗತಿಯಿಂದ ಪಿಯುಸಿವರೆಗಿನ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು. ಲಯನ್ಸ್ ಕ್ಲಬ್ ನ ಅಧ್ಯಕ್ಷ ಜಗರಾಮ್ ಪಟೇಲ್, ಡಾ.ಎ.ನಾಗರಾಜ್, ಪ್ರಾಚಾರ್ಯರಾದ ಗಣೇಶ್ ಮೂರ್ತಿ, ಜುಂಜಯ್ಯ, ಗಂಗಾಧರ್ ಗೌಡ, ಆನಂದ್ ರಾಜು, ಎಂ.ಎನ್. ಚಂದ್ರೇಗೌಡ, ಉಪಪ್ರಾಚಾರ್ಯ ಕೆ.ಎಸ್.ನಾಗರಾಜಪ್ಪ, ಮುಖ್ಯೋಪಾಧ್ಯಾಯ ತುಕಾರಾಂ, ಚಿಕ್ಕಯ್ಯ, ಜಯದೇವಮೂರ್ತಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಿಇಓ ರಂಗಧಾಮಯ್ಯ ವಹಿಸಿದ್ದರು. ಕುಮಾರಸ್ವಾಮಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತ್ಯನಾರಾಯಣ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

