ರೈತರ ಸಾಲಾ ಮನ್ನಾ ಮಾಡುವಂತೆ ಆಗ್ರಹ
ಕ,ಪ್ರ,ವಾರ್ತೆ ಮಧುಗಿರಿ ಡಿ. 24
ತಾಲೂಕಿನಲ್ಲಿಸುಮಾರು 10 ವರ್ಷಗಳಿಂದ ಸಕಾಲದಲ್ಲಿ ಮಳೆ ಬಾರದೇ ರೈತರ ಬದುಕು ಮೂರಾಬಟ್ಟೆಯಾಗಿದ್ದು ಪಡೆದ ಸಾಲ ತೀರಿಸಲಾಗದ ಸ್ಥಿತಿ ನಿರ್ಮಾಣವಾಗಿ ರೈತರು ಪಡೆದ ಕೃಷಿ ಹಾಗೂ ಟ್ರ್ಯಾಕ್ಟರ್ ಮೇಲಿನ ಬಡ್ಡಿ ಮತ್ತು ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಕೆಲ ರೈತರು ಪಟ್ಟಣದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಬರ ಪರಿಸ್ಥಿತಿ ಮುಂದುವರಿದಿದೆ. ಕಾಲಕ್ಕೆ ಸರಿಯಾಗಿ ಮಳೆ, ಬೆಳೆ ಇಲ್ಲದೆ ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ರೈತರ ಬದುಕು ಮೂರಾಬಟ್ಟೆಯಾಗಿ ಆರ್ಥಿಕ ಸಂಕಟಕ್ಕೆ ಸಿಕ್ಕಿ ನರಳುತ್ತಿದ್ದಾರೆ. ಅಂತರ್ಜಲ ಪಾತಾಳ ಸೇರಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಭಣಗುಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲ ಮರು ಪಾವತಿ ಮಾಡಲಾಗದೇ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿ ನರಳುವಂತಾಗಿದೆ. ಆದ ಕಾರಣ ಬ್ಯಾಂಕುಗಳು ದೊಡ್ಡ ಮನಸ್ಸು ಮಾಡಿ ರೈತರು ಪಡೆದ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ರೈತ ಮುಖಂಡ ಮೈದನಹಳ್ಳಿ ಕಾಂತರಾಜು ಮಾತನಾಡಿ, ಕಷ್ಟಪಟ್ಟು ಮನೆ ಮಂದಿ ಸೇರಿ ಭೂಮಿ ತಾಯಿ ನಂಬಿ ಇಟ್ಟ ಬೆಳೆ ಸಕಾಲಕ್ಕೆ ಮಳೆ ಬಾರದೇ ಸಂಪೂರ್ಣ ನೆಲ ಕಚ್ಚಿದ್ದು ಇದರಿಂದ ಸಾಲ ಮಾಡಿ ತಂದಿದ್ದ ರಸಗೊಬ್ಬರ, ಬಿತ್ತನ ಬೀಜ ಕೂಡ ಕೈಗೆ ಸಿಗದೇ ನಷ್ಟವಾಗಿವೆ. ಹಾಗಾಗಿ ರೈತರು ಕಂಗಲಾಗಿ ಆತ್ಮಹತ್ಯೆಗೆ ಶರಣಾಗುವ ಹಾದಿಯಲ್ಲಿದ್ದಾರೆ. ಆದಕಾರಣ ಬ್ಯಾಂಕಿನಿಂದ ತಾವು ಪಡೆದ ಸಾಲ ಕಟ್ಟಲಾಗದ ಪರಿಸ್ಥಿತಿ ನಮಗೆ ಬಂದೊದಗಿದೆ. ಹಾಗಾಗಿ ಬ್ಯಾಂಕಿನ ಅಧಿಕಾರಿಗಳು ಈ ಮನವಿ ಪರಿಗಣಿಸಿ ರೈತನಿಗೆ ನೆರವು ನೀಡುವ ನಿಟ್ಟಿನಲ್ಲಿ ಬಡ್ಡಿ ಮತ್ತು ಸಾಲ ಮನ್ನಾ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿ ಮನವಿ ಅರ್ಪಿಸಿದರು.
ರೈತರಾದ ಚಂದ್ರಶೇಖರ್, ರಾಮರೆಡ್ಡಿ, ಪಾರ್ವತಮ್ಮ, ಹನುಮಂತರಾಯಪ್ಪ, ಲಕ್ಷ್ಮೀಪತಿ, ಆಂಜಪ್ಪ, ಕೆ.ನರಸಯ್ಯ ಅನೇಕ ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

