ತುಮಕೂರು

ಡಿಸಿಸಿ ಬ್ಯಾಂಕ್‌ನಿಂದ ಚಿಕ್ಕ ವ್ಯಾಪಾರಿಗಳಿಗೆ ಸಾಲ ವಿತರಣೆ

Published On :

ತುರುವೇಕೆರೆ: ಯಾವುದೇ ಆಸ್ತಿ ಪಾಸ್ತಿ ಹೊಂದಿಲ್ಲದೇ ಇರುವರಿಗೂ ನಂಬಿಕೆಯ ಸಾಲ ನೀಡುವ ಮೂಲಕ ಸಾಮಾನ್ಯ ಜನರೂ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಳ್ಳಲು ಸ್ಥಳೀಯ ಡಿಸಿಸಿ ಬ್ಯಾಂಕ್ ಸುಮಾರು 10 ಲಕ್ಷ ಗಳ ಸಾಲವನ್ನು ನೀಡುತ್ತಿದೆ ಎಂದು ಡಿ ಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ದೇವರಾಜು ಹೇಳಿದರು.
ಪಟ್ಟಣದಲ್ಲಿರುವ ಡಿ ಸಿ ಸಿ ಬ್ಯಾಂಕ್ ಸಭಾಂಗಣದಲ್ಲಿ ಪ್ರತಿ 5 ಮಂದಿಯ ಜವಾಬ್ದಾರಿಯ ಮೇಲೆ ಪ್ರತಿ ಸಂಘಟನೆಗೆ 1 ಲಕ್ಷ ರು.ಗಳನ್ನು ನೀಡುತ್ತಿದೆ ಎಂದರು. ಅಸಂಘಟಿತರಾಗಿರುವ ಅಲೆಮಾರಿ ಕುಟುಂಬದವರು ಖಾಸಗಿ ಲೇವಾದೇವಿಯವರಿಂದ ಸಾಲದ ರೂಪವಾಗಿ ಹಣ ಪಡೆಯಲಿದ್ದಾರೆ. ಅದಕ್ಕೆ ಪ್ರತಿಯಾಗಿ ಮನಸ್ಸಿಗೆ ಬಂದ ಹಾಗೆ ಬಡ್ಡಿಯನ್ನೂ ವಿಧಿಸಲಾಗುತ್ತಿದೆ. ಇದರಿಂದಾಗಿ ಅಸಂಘಟಿತ ಮಂದಿ ಜೀವನ ನಡೆಸುವುದೇ ಕಷ್ಟ ಎಂಬ ಸ್ಥಿತಿ ಬಂದಿದೆ. ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಕಟ್ಟುತ್ತಿರುವ ಸಂಗತಿಗಳು ಬೆಳಕಿಗೆ ಬಂದಿದ್ದು ಜಿಲ್ಲಾ ಅಧ್ಯಕ್ಷ ಕೆ.ಎನ್. ರಾಜಣ್ಣನವರ ಮಾರ್ಗದರ್ಶನದಲ್ಲಿ ಸಾಲವನ್ನು ನೀಡಲಾಗುತ್ತಿದೆ ಎಂದರು. ಈಗಾಗಲೇ ಚಿಕ್ಕನಾಯಕನಹಳ್ಳಿಯ ತಾಂಡಾಗಳಲ್ಲಿರುವ ವ್ಯಾಪಾರಸ್ಥರಿಗೆ ಸಂಬಿಕೆಯ ಸಾಲ ನೀಡಿ ಯಶಸ್ಸು ಸಿಕ್ಕಿದೆ ಎಂದರು. ಹಾವಾಳದ ಆಂಜನೇಯ ಸ್ವಾಮಿ, ವಿನಾಯಕ, ಕೊಲ್ಲಾಪುರದಮ್ಮ, ದಂಡಿನಶಿವರದ ಸ್ಟಾರ್, ಅಮ್ಮಸಂದ್ರದ ಸೃಷ್ಟಿ, ಹೊನ್ನಾದೇವಿ, ಡಿ.ಹೊಸಹಳ್ಳಿಯ ಮಾರುತಿ, ತೊರೆಮಾವಿನಹಳ್ಳಿಯ  ಹೊನ್ನಾಂಬ, ಬೂವನಹಳ್ಳಿ ಪಾಳ್ಯದ ಕರಿತಿಮ್ಮರಾಯಸ್ವಾಮಿ, ವಿನಾಯಕ, ಹೆಡ್‌ಡನಕಟ್ಟೆಯ ದೊಡ್ಡಮ್ಮದೇವಿ ಸಂಘಕ್ಕೆ ತಲಾ 1 ಲಕ್ಷ ರು.ಗಳನ್ನು ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.