ತುಮಕೂರು

ಬೆಳ್ಳೆ ಬೆಡಗು-ಹಳ್ಳಿ ಸೊಗಡು ಕಾರ್ಯಕ್ರಮ ಉದ್ಘಾಟನೆ

Published On :

ತಿಪಟೂರು: ಶ್ರೀ ತರಬಾಳು ಜಗದ್ಗುರು ವಿದ್ಯಾಸಂಸ್ಥೆಯಾದ ತಾಲೂಕಿನ ಹಾಲ್ಕುರಿಕೆಯ ಎಚ್.ಸಿ.ಎಂ.ಜಿ.ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ವತಿಯಿಂದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಳ್ಳಿ ಬೆಡಗು-ಹಳ್ಳಿ ಸೊಗಡು ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಬಸವರಾಜು ವಹಿಸಿದ್ದರು. ಕೆಜೆಪಿ ಮುಖಂಡ ಲೋಕೇಶ್ವರ, ತಾ.ಪಂ. ಅಧ್ಯಕ್ಷ ಭಾನುಪ್ರಕಾಶ್, ಪ್ರೌಢಶಾಲಾ ಮುಖ್ಯಸ್ಥ ಸಿ.ಆನಂದ್, ಸಲಹಾ ಸಮಿತಿ ಅಧ್ಯಕ್ಷ ಸಿ.ಬಿ.ರಾಜಶೇಖರಯ್ಯ, ಗ್ರಾ.ಪಂ ಅಧ್ಯಕ್ಷ ಚಿಕ್ಕಮಲ್ಲಯ್ಯ, ಪತ್ರಕರ್ತ ಎನ್.ಆರ್. ರಂಗನಾಥ್, ಕಿರುತೆರೆ ನಿರ್ದೇಶಕ ಮಳವಳ್ಳಿ ಕೈಲಾಸ್, ತಾ.ಕಾಂಗ್ರೆಸ್ ಅಧ್ಯಕ್ಷ ಪರಮಶಿವಯ್ಯಸ ಗ್ರಾ.ಪಂ.ಸದಸ್ಯ ಎಚ್.ವಿ.ನಾಗರಾಜು, ಯುವ ವೇದಿಕೆ ಅಧ್ಯಕ್ಷ ಎಲ್.ಎಸ್. ಗುರುಪ್ರಸನ್ನ, ಕಲ್ಪತರು ನೆಟ್ವರ್ಕ್ಸ್ನ ಬಿ.ಟಿ. ಕುಮಾರ್ ಮತ್ತಿತರರಿದ್ದರು.
ಶಿಥಿಲವಾಗಿರುವ ಕೆರೆ ದುರಸ್ತಿ ಮಾಡಿಸುವಂತೆ ಶಾಸಕರಿಗೆ ಆಗ್ರಹ
ಕೊರಟಗೆರೆ: ಪಟ್ಟಣದ ಹೊರವಲಯದ ಹನುಮಂತಪುರ ಹೊಸಬಡಾವಣೆ ಗೂಬಲಗುಟ್ಟೆ ಕೆರೆ ಅಚ್ಚುಕಟ್ಟು ರೈತರು ಮತ್ತು ಮೀನುಗಾರರ ಸಂಘ ಶಿಥಿಲವಾಗಿರುವ ಕೆರೆ ದುರಸ್ತಿ ಮಾಡಿಸುವಂತೆ ಶಾಸಕ ಪಿ.ಆರ್. ಸುಧಾಕರಲಾಲ್ಗೆ ಮನವಿ ಸಲ್ಲಿಸಿದರು. ಕಳೆದ ಸುಮಾರು 60 ವರ್ಷಗಳ ಹಿಂದೆ ಮಾಜಿ ಸಚಿವ ದಿವಂಗತ ಆರ್. ಚನ್ನಿಗರಾಮಯ್ಯ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ನಿರ್ಮಾಣ ಮಾಡಿದ್ದ ಗೂಬಲಗುಟ್ಟೆ ಕೆರೆ ಮಣ್ಣಿನ ಏರಿ ಬಿರುಕು ಬಿಟ್ಟಿದೆ ಮತ್ತು ಕೊಡಿ ಕುಸಿದಿರುವ ಕಾರಣ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ ಹಾಗೂ ಕೆರೆಗೆ ನೀರು ಹರಿದು ಹೆಚ್ಚು ಮಣ್ಣು ತುಂಬಿದ್ದು ಕೆರೆಯ ಮಣ್ಣು ತೆಗೆಯದೆ ನೀರು ಕಡಿಮೆ ಸಂಗ್ರಹವಾಗುತ್ತಿದೆ ಎಂದರು. ಕೆರೆಯ ತೊಬಿನ ಮೂಲಕ ಹೊರ ಬಂದು ರೈತರ ಜಮೀನು ಸೇರವ ನೀರು ಹರಿಯುವ ಕಾಲುವೆಗಳು ಶಿಥಿಲವಾಗಿದ್ದು ಬರಗಾಲದ ಪರಿಸ್ಥಿತಿಯಲ್ಲಿ ಅಲ್ಪ ಸ್ವಲ್ಪ ಮಳೆಯಿಂದ ಕೆರೆಯಲ್ಲಿ ನೀರು ಸಂಗ್ರಹವಾಗುವ ನೀರು ನಿಲ್ಲದೆ ಪೋಲಾಗುತ್ತಿದ್ದು ಇದನ್ನು ತಡೆಗಟ್ಟಲು ಕೆರೆ ಸಂಪೂರ್ಣ ದುರಸ್ಥಿ ಮಾಡಬೇಕಾಗಿ ಮನವಿಯಲ್ಲಿ ಕೋರಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಎಲ್. ರಾಜಣ್ಣ, ಕೆರೆ ಅಚ್ಚುಕಟ್ಟು ದಾರರಾದ ನರಸಿಂಹಮೂರ್ತಿ, ಕೆ.ಎಸ್. ವೆಂಕಟಾಚಲಪತಿ, ಮುದ್ದಪ್ಪ, ಭಾಷಾಸಾಬ್, ವೆಂಕಟರವರಣಪ್ಪ, ರಾಮಣ್ಣ ಸೇರಿದಂತೆ ಇನ್ನಿತರ ಈ ಭಾಗದ ರೈತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.