ತುಮಕೂರು

'ಮಾನವ ಸದಾ ಕ್ರಿಯಾಶೀಲನಾಗಿರಬೇಕು'

Published On :

ಶಿರಾ: ಮಾನವ ಕ್ರಿಯಾಶೀಲನಾಗಿರಬೇಕು. ಏನನ್ನಾದರೂ ಉತ್ತಮ ಕೆಲಸ ಮಾಡುವ ತುಡಿತ ಹೊಂದಿರಬೇಕು. ಆಗ ಅವನ ಬದುಕು ಸಾರ್ಥಕವಾಗುತ್ತದೆ ಎಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಚ್.ಮಹೇಂದ್ರಪ್ಪ  ನುಡಿದರು.
ಅವರು ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರುಗಳ ವತಿಯಿಂದ ನಿವೃತ್ತ ಗ್ರಂಥಾಲಯ ಅಧಿಕಾರಿ ಸಂಜೀವಯ್ಯ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮನುಷ್ಯನ ಬದುಕಿನಲ್ಲಿ ಅನೇಕ ಆಯಾಮಗಳನ್ನು ಕಾಣುತ್ತೇವೆ ಅವುಗಳಲ್ಲಿ ಕ್ರೀಯಾಶೀಲನಾಗಿ ಬದುಕಬೇಕು. ನಿವೃತ್ತಿಯಾಗಿರುವ ಗ್ರಂಥಾಲಯ ಅಧಿಕಾರಿ ಸಂಜೀವಯ್ಯ ಅವರು ಸುದೀರ್ಘ 40 ವರ್ಷ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿರುವುದು ಅಭಿನಂದನೀಯ ಎಂದರು.
ಶಿರಾ ನಗರ ಗ್ರಂಥಾಪಾಲಕ ರಾಜಶೇಖರ್, ಸಂತೋಷ್, ಸಿಬ್ಬಂದಿಗಳಾದ ರಾಧಮ್ಮ, ನಟರಾಜು, ಟಿ.ಎ.ಲಕ್ಷ್ಮೀನಾರಾಯಣ, ಚಂದ್ರಕಲಾ, ಕಣುಮಯ್ಯ, ಶಶಿಕಲ ಮತ್ತಿತರರು ಹಾಜರಿದ್ದರು.
ಮದಲೂರು ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕ ರಾಜು ಅವರು ಸಂಜೀವಯ್ಯ ಅವರ ನಡೆದುಬಂದ ಹಾದಿಯನ್ನು ವಿವರಿಸಿದರು. ರೂಪಶ್ರೀ ಪ್ರಾರ್ಥಿಸಿದರು. ದೇವರಾಜು ಸ್ವಾಗತಿಸಿದರು, ನರಸಿಂಹಮೂರ್ತಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.