ತುಮಕೂರು

ಗಮನ ಸೆಳೆದ ಆರ್ಎಸ್ಎಸ್ ಪಥ ಸಂಚಲನ

Published On :

ಅರಸೀಕೆರೆ: ಆರ್ಎಸ್ಎಸ್ ಕಾರ್ಯಾಲಯದ ಪ್ರಾರಂಭೋತ್ಸವ ಮತ್ತು ತಾಲೂಕು ತರುಣ ಸಮಾವೇಶದ ಅಂಗವಾಗಿ ಭಾನುವಾರ ಸಂಜೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೂರಾರು ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಸಿದರು.
ಪಥ ಸಂಚಲನ: ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ಯಾದವ ಸೇವಾ ಪ್ರತಿಷ್ಠಾನದ ನೂತನ ಕಟ್ಟದಲ್ಲಿ ಆರ್ಎಸ್ಎಸ್ನ ಸಂಘ ನಿವಾಸ ಪ್ರಾರಂಭೋತ್ಸವ ಪೂಜಾ ಕೈಕಂರ್ಯಗಳ ಕಾರ್ಯಕ್ರಮಗಳು ನೆರವೇರಿದವು.
ಮಧ್ಯಾಹ್ನ ಸಮಯದಲ್ಲಿ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿನ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಅಲಂಕೃತವಾದ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆಯೊಂದಿಗೆ ನೂರಾರು ಸಂಖ್ಯೆಯ ಗಣವೇಶಧಾರಿ ಸ್ವಯಂಸೇವಕರು ಘೋಷ ವಾದನಗಳೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು.
ಸಾರ್ವಜನಿಕ ಗ್ರಂಥಾಲಯ ರಸ್ತೆಯ ಮಾರ್ಗವಾಗಿ ಶ್ರೀಕರಿಯಮ್ಮ ದೇವಾಸ್ಥಾನ ರಸ್ತೆ, ಸಾಯಿನಾಥ ರಸ್ತೆ, ಲಕ್ಷ್ಮೀಪುರ ಬಡಾವಣೆ ಮೂಲಕ ಬಿ.ಎಚ್. ರಸ್ತೆ, ಪೇಟೆಬೀದಿ ಹಾಗೂ ಹುಳಿಯಾರ್ ರಸ್ತೆಯ ಮಾರ್ಗವಾಗಿ, ಸರ್ಕಾರಿ ಹಳೇಯ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಸಮಾರಂಭದ ಆವರಣ ಬಂದು ತಲುಪಿತು.  
ಪುಷ್ಪಾರ್ಚನೆಯ ಸ್ವಾಗತ: ಮೆರವಣಿಗೆ ಹಾದು ಬಂದ ಪ್ರತಿಯೊಂದು ಬೀದಿಗಳ ಮನೆಗಳ ಮುಂದೆ ಮಹಿಳೆಯರು ಬಣ್ಣ, ಬಣ್ಣದ ರಂಗೋಲಿ ಬಿಟ್ಟು, ಕೇಸರಿ ಭಗವಾಧ್ವಜಗಳು ಹಾಗೂ ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದು, ಅನೇಕ ಮಹಿಳೆಯರು ಮೆರವಣಿಗೆಯಲ್ಲಿನ ಭಾರತಮಾತೇಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ನೀಡುತ್ತಿದ್ದ ದೃಶ್ಯ ವಿಶೇಷವಾಗಿತ್ತು.

ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು

ಪಟ್ಟಣದಲ್ಲಿ ಮಧ್ಯಾಹ್ನ ನಡೆದ ಆರ್ಎಸ್ಎಸ್ ಪಥಸಂಚಲನ ಕಾರ್ಯಕ್ರಮದ ಪೂರ್ವಭಾವಿಯಾಗಿ ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕ ಗಂಗಾಧರಪ್ಪ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ ಪೇದೆಗಳ ಪಥ ಸಂಚಲನವನ್ನು ಪಟ್ಟಣದ ಪ್ರಮುಖ ರಸ್ತೆಗಳಾದ ಬಿ.ಎಚ್.ರಸ್ತೆ, ಸಾಯಿನಾಥ ರಸ್ತೆ, ಪೇಟೆಬೀದಿ, ಹುಳಿಯಾರ್ ರಸ್ತೆಯ ಮಾರ್ಗದಲ್ಲಿ ನಡೆಸಲಾಯಿತು.
ಚಿಕ್ಕಮಗಳೂರು ನಗರದಲ್ಲಿ ಉಂಟಾಗಿರುವ ಕೋಮು ಗಲಭೆ ಹಿನ್ನೆಲೆಯಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಜೆ.ಕೆ. ರಶ್ಮಿಯವರ ನೇತೃತ್ವದಲ್ಲಿ ಡಿವೈಎಸ್ಪಿ ಮಂಜುನಾಥ್ರವರ ಮಾರ್ಗದರ್ಶನದಲ್ಲಿ ನೇತೃತ್ವದಲ್ಲಿ ಗ್ರಾಮಾಂತರ ಇನ್ಸ್ಪೆಕ್ಟರ್ ಗಂಗಾಧರಪ್ಪ, ನಗರ ಇನ್ಸ್ಪೆಕ್ಟರ್ ನಂದಕುಮಾರ್ ಒಳಗೊಂಡ ವಿಶೇಷ ಪೊಲೀಸ್ ರಕ್ಷಣಾ ವ್ಯವಸ್ಥೆಯಲ್ಲಿ 2 ಕೆಎಸ್ಆರ್ಪಿ ತುಕ್ಕಡಿ, ರಿಸರ್ವ್ ಪೊಲೀಸ್ ತುಕಡಿಗಳೊಂದಿಗೆ ಒಟ್ಟು 310 ಪೊಲೀಸ್ ಸಿಬ್ಬಂದಿ ಮತ್ತು 15 ಮಂದಿ ಅಧಿಕಾರಿಗಳ ತಂಡವು ವಿಶೇಷ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.