ಆಧುನಿಕತೆ ಹೆಸರಿನಲ್ಲಿ ಸಂಸ್ಕೃತಿ ಅದೋಗತಿ: ಲೋಕೇಶ್ ವಿಷಾದ
ಹುಳಿಯಾರು: ಆಧುನಿಕತೆ ಹೆಸರಿನಲ್ಲಿ ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ನಾವು ಮರೆಯುತ್ತಾ,ಪಾಶ್ಚಾತ್ಯ ಸಂಸ್ಕೃತಿಯಡೆಗೆ ವಾಲುತ್ತಿರುವುದು ವಿಷಾದನೀಯವೆಂದು ವಿಪ್ರ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಎ.ಲೋಕೇಶ್ ಕಳವಳ ವ್ಯಕ್ತಪಡಿಸಿದರು.
ಹುಳಿಯಾರಿನ ಶ್ರೀಸೀತಾರಾಮ ಕಲ್ಯಾಣ ಮಂಟಪದಲ್ಲಿ ನಡೆದ ಶಾರದಾಂಬ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ ಹಾಗೂ ಶಂಕರಭಗವತ್ಪಾದರ ಆನಂದಲಹರಿ ಗಾಯನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಧರ್ಮ ಹಾಗೂ ಸಂಸ್ಕೃತಿಯ ಉಳಿವಿಗೆ ಭಜನಾ ಮಂಡಳಿಗಳನ್ನು ಸ್ಥಾಪಿಸಿ ಅದರಲ್ಲಿ ತೊಡಗಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾರದಾಂಬ ಭಜನಾ ಮಂಡಳಿಯ ನಾಮಫಲಕ ಅನಾವರಣ ಮಾಡಿದ ಶಾರದಾಂಬ ಭಜನಾ ಮಂಡಳಿ ಸಂಚಾಲಕ ಎಚ್.ಎಸ್. ಚೇತನ್ ಮಾತನಾಡಿ, ಪುರಾತನ ಧರ್ಮ ಗ್ರಂಥಗಳಲ್ಲಿನ ಉದ್ದೇಶಗಳನ್ನು ತಿಳಿಯುವ ಮೂಲಕ ಮಾನವರು ತಮ್ಮ ಜೀವನದಲ್ಲಿನ ಜವಬ್ದಾರಿಯನ್ನು ಅರಿತು ಬಾಳಬೇಕು ಎಂದರು. ಭಜನಾ ಮಂಡಳಿಯನ್ನು ಸ್ಥಾಪಿಸಿ ನಮ್ಮ ಧರ್ಮದ ಆಚಾರ ವಿಚಾರಗಳನ್ನು, ಸಂಸ್ಕೃತಿಯನ್ನು ಇತರರಿಗೆ ತಿಳಿಸುವ ಕಾರ್ಯ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು. ಶಂಕರಾಚಾರ್ಯರು, ತುಳಿಸಿದಾಸರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ತಿಳಿಸಿದ ತತ್ವ, ಬೋಧನೆಗಳನ್ನು ಅರಿತು ನಡೆದರೆ ಜೀವನದಲ್ಲಿ ಸಾರ್ಥಕತೆ ಲಭಿಸಲಿದೆ ಎಂದು ತಿಳಿಸಿದಲ್ಲದೆ ಶಂಕರಭಗವತ್ಪಾದರ ಆನಂದಲಹರಿಯನ್ನು ಗಾಯನ ಮಾಡಿದರು.
ಕೆ.ಜಯಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದು, ವಿಪ್ರ ಪ್ರತಿಷ್ಠಾನದ ಹು.ಕೃ. ವಿಶ್ವನಾಥ್, ತುರುವೇಕೆರೆಯ ಸಂಸ್ಕೃತ ವಿದ್ವಾಂಸರಾದ ಟಿ.ಎಸ್.ಸರಸ್ವತಿ, ವಿಪ್ರ ಸಮುದಾಯದ ಎಚ್.ಎಸ್.ಲಕ್ಷ್ಮಿನರಸಿಂಹಯ್ಯ, ಗುಂಡಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದು, ಉಮಾರಂಗರಾಜು ಪ್ರಾರ್ಥಿಸಿ, ಪ್ರೇಮಗೋಪಾಲ್ ರಾವ್ ಸ್ವಾಗತಿಸಿ, ಶಾಂತಾಲ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

