ತುಮಕೂರು

ಬೇಂದ್ರೆ ಕಾವ್ಯದಲ್ಲಿ ಮನುಜ ಕುಲ ಎಚ್ಚರಿಸುವ ಅರ್ಥವಿದೆ

Published On :

ತುಮಕೂರು: ಬೇಂದ್ರೆ ಅವರ ಕಾವ್ಯದಲ್ಲಿ ಮನುಜ ಕುಲವನ್ನು ಎಚ್ಚರಿಸುವ ಮತ್ತು ಪ್ರಕೃತಿಯನ್ನು ವರ್ಣಿಸುವ ಅರ್ಥಗಳಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ತ್ರಿನೇತ್ರ ಶಾಲೆಯಲ್ಲಿ ಜಿಲ್ಲಾ ಕಸಾಪ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಂದ್ರೆ ಗೀತ ಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು. ಬೇಂದ್ರೆಯವರು ಕವಿತೆಗಳನ್ನು ರಚಿಸುವಾಗ ತಮ್ಮ ಜೀವನದ ಘಟನಾವಳಿಗಳನ್ನು ಬಳಸಿಕೊಂಡಿದ್ದರು ಎಂದರು.
ಒಂದು ಸನ್ನಿವೇಶದಲ್ಲಿ ಅವರ ಮಗ ಜ್ವರದಿಂದ ನರಳಿ ನಿಧನರಾಗಿದ್ದಾಗ ಅವರ ಧರ್ಮಪತ್ನಿ ಕೋಪದಿಂದ ದೃಷ್ಟಿ ಬೀರಿದಾಗ ನೀ ಹಿಂಗೆ ನೋಡ ಬೇಡ ನನ್ನ  ಕವನ ರಚಿಸಿದರು ಎಂದರು. ಬೇಂದ್ರೆಯವರ ಚಿಂತನೆ, ನಿಲುವು, ಸಾಹಿತ್ಯ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ ಎಂದು ನುಡಿದರು. ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ನ ಎಚ್.ಆರ್. ನವೀನ್ ಮಾತನಾಡಿ ದ.ರಾ. ಬೇಂದ್ರೆಯವರನ್ನು ಸ್ಮರಿಸುತ್ತಿರುವುದು ನಮ್ಮ  ಅದೃಷ್ಟ. ಇಂತಹ ಶ್ರೇಷ್ಠ ಕವಿ ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮ ಅದೃಷ್ಟ ಎಂದರು. ಅಧ್ಯಕ್ಷತೆ ವಹಿಸಿದ್ದ ಲೇಖಕಿ ಎಂ.ಸಿ. ಲಲಿತಾ ಮಾತನಾಡಿ ಕನ್ನಡದ ಸತ್ವವನ್ನು ಬಿಂಬಿಸುವ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ಕರ್ತವ್ಯ. ಬೇಂದ್ರೆಯವರ ಹೆಸರಿನಲ್ಲಿ ಈ ಸ್ಪರ್ಧೆ ನಡೆಸಲು ಅವರ ವ್ಯಕ್ತಿತ್ವವೇ ಸ್ಫೂರ್ತಿ ಎಂದರು.
ಇ ದೇ ಸಂದರ್ಭದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗರಿ ಸುನಂದಮ್ಮ, ಕೋಕಿಲ ಆಗಮಿಸಿದ್ದರು. ತು.ಮ. ಬಸವರಾಜ್ ದ.ರಾ. ಬೇಂದ್ರೆ ರಚಿಸಿದ ಗೀತೆಯನ್ನು ಹಾಡಿದರು. ಮೋಹನ್ ಜಾದೂಗಾರ್ ಸ್ವಾಗತಿಸಿದರು. ಎಂ. ಸುರೇಶ್ ವಂದಿಸಿದರು. ಸುಮ ಪ್ರಸನ್ನಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.