ತುಮಕೂರು

23, 24 ರಂದು ಆಂಜನೇಯ ವಿಗ್ರಹ, ಧ್ವಜಸ್ಥಂಭ ಪ್ರತಿಷ್ಠಾಪನಾ ಮಹೋತ್ಸವ

Published On :

ಗೂಲಹಳ್ಳಿ (ಮಧುಗಿರಿ ತಾ): ಗೂಲಹಳ್ಳಿಯಲ್ಲಿ ಆಂಜನೇಯಸ್ವಾಮಿ ವಿಗ್ರಹ ಹಾಗೂ ಧ್ವಜ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದ್ದು, ಇದರ ಅಂಗವಾಗಿ 23 ರಂದು ಕಳಶ ಸ್ಥಾಪನೆ, ಗಂಗಾಪೂಜೆ, ಪುಣ್ಯಾಹ; ದೇವನಾಂದಿ, ನವಗ್ರಹ ಪುರಸ್ಸರ, ಅಷ್ಟದಿಕ್ಪಾಲಕ ಪೂಜೆ, ಆಚಾರ್ಯ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಆಂಜನೇಯಸ್ವಾಮಿ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ವರಣು ಹೋಮ, ವಾಸ್ತು ಮಹಾಲಕ್ಷ್ಮಿ ಹೋಮ, ಪೂರ್ಣಾಹುತಿ ಮಹಾಮಂಗಳಾರತೀ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
24ರಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಬೆಳಿಗ್ಗೆ 10.30ಕ್ಕೆ ಕುಂಭಾಭಿಷೇಕ, ಹೋಮಗಳು, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.  23ರ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸಿದ್ದಗಂಗೆಯ ಡಾ. ಶಿವಕುಮಾರಸ್ವಾಮೀಜಿ ಹಾಗೂ ಕುಂಚಿಟಿಗರ ಮಹಾಸಂಸ್ಥಾನ ಮಠ, ಎಲೆರಾಂಪುರ, ಕೊರಟಗೆರೆ ತಾ.ನ ಹನುಮಂತನಾಥ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ವೀರಭದ್ರಯ್ಯ, ಎ.ಎನ್. ಮೂರ್ತಿ, ತಾಡಿ ನಾಗಭೂಷಣ ಆಗಮಿಸಲಿದ್ದಾರೆ.
24ರಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಬಿ.ಹೆಚ್. ಲಕ್ಷ್ಮೀಪತಿ, ಸೋಮಶೇಖರ್, ಜಿ.ಎ. ಹನುಮಂತರಾಯಪ್ಪ, ಜಿ.ವಿ. ವೆಂಕಟೇಶ್, ನಾಗಭೂಷಣ್, ಚಿಕ್ಕನರಸಿಂಹಗೌಡ, ಕೆ.ಎ. ರಾಜು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.