ತುಮಕೂರು

ಕೆ.ಬಿ. ಸಿದ್ದಯ್ಯಗೆ ಬಿಎಸ್ಪಿ ಆಹ್ವಾನ (ಸುದ್ದಿ ಸಂಕ್ಷೇಪ)

Published On :

ತುಮಕೂರು: ದಲಿತ ಚಳವಳಿಯ ಆರಂಭ ಕಾಲದ  ನಾಯಕರಾದ ಕವಿ ಕೆ.ಬಿ. ಸಿದ್ದಯ್ಯ ಅವರು ಬಹುಜನ ಸಮಾಜ ಪಕ್ಷಕ್ಕೆ ಬಂದು ಸ್ವಾಭಿಮಾನಿ ದಲಿತ ಜನಾಂಗದ ಆಶಾಕಿರಣವಾಗಿ ಹೊರಹೊಮ್ಮಲಿ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ರಾಜಸಿಂಹ ಸಲಹೆ ನೀಡಿದ್ದಾರೆ. ಇಡೀ ಶೋಷಿತ ಸಮಾಜಕ್ಕೆ ಮೋಸ ಮಾಡಿರುವ ಪಕ್ಷಗಳ ಬಾಗಿಲು ಕಾಯುವ ಕೆಲಸ ಬಿಟ್ಟು ಕೆ.ಬಿ. ಸಿದ್ದಯ್ಯ ಅವರು ಬಿಎಸ್ಪಿಗೆ ಬರಲಿ ಎಂದಿದ್ದಾರೆ. ಒಂದು ವೇಳೆ ಬಿಎಸ್ಪಿಗೆ ಬಂದರೆ ಅವರಿಗೆ ತುಮಕೂರು ಲೋಕಸಭೆ ಅಥವಾ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲು ಬಿಎಸ್ಪಿ ಸಿದ್ಧವಿದೆ ಎಂದು ರಾಜಸಿಂಹ ತಿಳಿಸಿದ್ದಾರೆ. ಕಾಂಗ್ರೆಸ್ ಆಗಲಿ, ಜನತಾದಳವಾಗಲಿ ಇದುವರೆಗೂ ಶೋಷಿತ ಸಮುದಾಯದ ಒಬ್ಬರನ್ನೂ ಮುಖ್ಯಮಂತ್ರಿ ಮಾಡದೆ ವಂಚಿಸಿರುವ ದೊಡ್ಡ ಇತಿಹಾಸವೇ ಇದೆ. ದಲಿತರ ಸ್ವಾಭಿಮಾನದ ಸಂಕೇತ ಬಿ. ಬಸವಲಿಂಗಪ್ಪನವರನ್ನಾಗಲಿ, ಕೆ.ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ. ರಾಚಯ್ಯ ಅವರನ್ನು ತಮ್ಮ ಪಕ್ಷಗಳ ಬೆಳವಣಿಗೆಗೆ ಮಾತ್ರ ಉಪಯೋಗಿಸಿಕೊಂಡಿದ್ದನ್ನು ದಲಲಿತರ ಮರೆತಿಲ್ಲ ಎಂದಿದ್ದಾರೆ. ಇದೇ ಸಾಲಿಗೆ ಸೇರಲಿರುವ ಡಾ. ಜಿ. ಪರಮೇಶ್ವರ್ ಮೇಲೆ ನಿಮ್ಮ ಸವಾಲು ಇರಬಾರದು ಎಂದು ಕೆ.ಬಿ. ಸಿದ್ದಯ್ಯನವರಿಗೆ ಸಲಹೆ ನೀಡಿರುವ ರಾಜಸಿಂಹ ಅವರು ಈ ಸಮಾಜವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿರುವ ಪಟ್ಟಭದ್ರರು ಮತ್ತು ಸಮಾಜ ದ್ರೋಹಿಗಳ ಮೇಲೆ ಸವಾಲೆಸೆಯೋಣ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
ಪಲ್ಸ್ ಪೋಲಿಯೋ ಲಸಿಕೆ: ಉತ್ತಮ ಪ್ರಗತಿ
ತುಮಕೂರು: ತುಮಕೂರು ಜಿಲ್ಲೆಯಲ್ಲಿ 2 ಲಕ್ಷ 95 ಸಾವಿರದ 418 ಮಕ್ಕಳ ಪೈಕಿ 2 ಲಕ್ಷ 68 ಸಾವಿರದ 962 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಜನವರಿ 20 ರಂದು ನಡೆದ 2012-13 ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತಿನ ತಾಲೂಕುವಾರು ಪ್ರಗತಿ ಈ ಕೆಳಕಂಡಂತಿದೆ. ಚಿ.ನಾ.ಹಳ್ಳಿ ತಾಲೂಕಿನಲ್ಲಿ ಶೇ. 94.90, ಗುಬ್ಬಿ ತಾಲೂಕಿನಲ್ಲಿ ಶೇ. 91.06, ಕೊರಟಗೆರೆ ತಾಲೂಕಿನಲ್ಲಿ 89.27,  ಕುಣಿಗಲ್ ತಾಲೂಕಿನಲ್ಲಿ ಶೇ. 91.19, ಮಧುಗಿರಿ ತಾಲೂಕಿನಲ್ಲಿ ಶೇ. 90.49, ಪಾವಗಡ ತಾಲೂಕಿನಲ್ಲಿ ಶೇ.89.97, ಶಿರಾ ತಾಲೂಕಿನಲ್ಲಿ ಶೇ.94.10, ತಿಪಟೂರು ತಾಲೂಕಿನಲ್ಲಿ ಶೇ.96.08, ತುಮಕೂರು ತಾಲೂಕಿನಲ್ಲಿ  ಶೇ.87.96, ತುರುವೇಕೆರೆ ತಾಲೂಕಿನಲ್ಲಿ ಶೇ.94.06 ರಷ್ಟು ಪ್ರಗತಿ ಸಾಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.