ಸಂದೀಪ್ ಉನ್ನಿಕೃಷ್ಣನ್ ಉದ್ಯಾನವನ ಅಭಿವೃದ್ಧಿಗೆ ಚಾಲನೆ ನೀಡಿ
ತುಮಕೂರು: ಸದಾಶಿವನಗರದ ವೀರ ಸಾವರ್ಕರ್ ಹಾಗೂ ಸಂದೀಪ್ ಉನ್ನಿಕೃಷ್ಣನ್ ಉದ್ಯಾನವನ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡುವಂತೆ ಪರಿಸರ ಸಚಿವ ಸೊಗಡು ಶಿವಣ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸದಾಶಿವನಗರದ ಸಾವರ್ಕರ್ ಯುವ ಕ್ರೀಡಾ ವೃದದ ಮನವಿ ಮೇರೆಗೆ ಸಚಿವರು ಅಲ್ಲಿನ ಸಾವರ್ಕರ್ ಉದ್ಯಾನವನ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಟೂಡಾ ಆಯುಕ್ತ ಆದರ್ಶ ಕುಮಾರ್ಗೆ ಶೀಘ್ರದಲ್ಲಿ ಉದ್ಯಾನವನಕ್ಕೆ ತಂತಿಬೇಲಿ ನಿರ್ಮಿಸಿ, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಸಂದೀಪ್ ಉನ್ನಿಕೃಷ್ಣನ್ ಉದ್ಯಾನವನಕ್ಕೆ ತಂತಿ ಬೇಲಿ ಹಾಕಿ, ಕೊಳವೆ ಬಾವಿ ಕೊರೆಯುವಂತೆ ಕೂಡ ಆದೇಶ ನೀಡಿದ ಸಚಿವರು, ಇ-ಟೆಂಡರ್ ಬದಲು ಮ್ಯಾನುಯೆಲ್ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಿ. ಯಾವುದೇ ಸಬೂಬು ಹೇಳದೆ ನಗರದಲ್ಲಿನ ಉದ್ಯಾನವನಗಳ ಅಭಿವೃದ್ಧಿ ಕೆಲಸವನ್ನು ಆದ್ಯತೆ ಮೇಲೆ ತೆಗೆದುಕೊಳ್ಳಿ ಎಂದು ಹೇಳಿದರು.
ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. 3 ಕೊಳವೆ ಬಾವಿ ಕೊರೆಯಲಾಗಿದ್ದು ಪಂಪು-ಮೋಟಾರ್ ಅಳವಡಿಸಿಲ್ಲ. ಇದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ನೀರಿನ ಬವಣೆ ನೀಗಿಸಿ ಎಂದು ಸಾರ್ವಜನಿಕರು, ಸಚಿವರ ಬಳಿ ಮನವಿ ಮಾಡಿಕೊಂಡರು.
ತತ್ಕ್ಷಣವೇ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಚಿವರು, ನಗರಸಭೆ ಆಯುಕ್ತರನ್ನು ಈಗಲೇ ಕಳುಹಿಸಿಕೊಡುತ್ತೇನೆ. ನೀರಿನ ಸಮಸ್ಯೆ ಬಗೆಹರಿಸಲು ಸೂಚನೆ ನೀಡುತ್ತೇನೆ ಎಂದರು.
ನಗರಸಭೆಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಹೇಳಲು ನಾಚಿಕೆಯಾಗುತ್ತದೆ. 135 ಕೋಟಿ ಅನುದಾನವಿದ್ದರೂ ಸದ್ಬಳಕೆಯಾಗುತ್ತಿಲ್ಲ.
ನಗರಸಭೆ ಸದಸ್ಯರು ಹೊಣೆಗೇಡಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಶಿವಣ್ಣ, ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾವರ್ಕರ್ ಯುವ ಕ್ರೀಡಾ ವೃಂದದ ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಸಾಗರ್, ಸಹ ಕಾರ್ಯದರ್ಶಿ ದಯಾನಂದ್ ಮತ್ತಿತರರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

