ತುಮಕೂರು

ಸರ್ವ ಧರ್ಮ ಸಮನ್ವಯತೆ ಕಾಪಾಡುವುದೇ ನಮ್ಮ ಸರ್ಕಾರದ ಗುರಿ: ಟಿ.ಬಿ. ಜಯಚಂದ್ರ

Published On :

ಶಿರಾ: ಸರ್ವ ಧರ್ಮ ಸಮನ್ವಯತೆ ಕಾಪಾಡುವುದೇ ನಮ್ಮ ಸರ್ಕಾರದ ಗುರಿಯಾಗಿದ್ದು ಜನರಿಗೆ ನಿರಾಸೆ ಆಗದ ರೀತಿಯಲ್ಲಿ ಕೆಲಸ ಮಾಡಿ ಜನರ ಋಣ ತೀರಿಸುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ಪಟ್ಟಣದ ಚಂಗಾವರ ರಸ್ತೆಯಲ್ಲಿರುವ ಸಂತ ಜೋಸೆಫ್ ಚರ್ಚ್‌ನ ವಾರ್ಷೀಕೋತ್ಸವ ಮತ್ತು ಸಚಿವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಶಿರಾ ಕ್ಷೇತ್ರದಲ್ಲಿ ನಾನು ಸತತವಾಗಿ ಎರಡು ಭಾರಿ ಗೆದ್ದು ಕ್ಷೇತ್ರದಲ್ಲಿ ಎರಡನೇ ಬಾರಿ ಯಾರೂ ಗೆಲ್ಲುವುದಿಲ್ಲ ಎಂಬ ಮೂಢ ನಂಭಿಕೆಯನ್ನು ಅಳಿಸಿ ಹಾಕಿದ್ದೇನೆ ಎಂದರು. ತಾಲೂಕಿನಲ್ಲಿ ಕುಡಿಯುವ ನೀರು ದಿನದ 24 ಗಂಟೆಯೂ ದೊರೆಯುವಂತೆ ಮಾಡಬೇಕು ಎಂಬುದು ನನ್ನ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಈ ಕಾರ್ಯ ಮಾಡುತ್ತೇನೆ. ದೇವರು ಒಬ್ಬನೆ, ನಾಮ ಹಲವು. ಎಲ್ಲ ಧರ್ಮಗಳು ಒಂದೇ ಗುರಿಯತ್ತ ಸಾಗುವ ಹಲವು ಮಾರ್ಗಗಳು. ನಾನು ಏಸುವಿನ ಬೋಧನೆಯನ್ನು ಅರ್ಥ ಮಾಡಿಕೊಂಡಿದ್ದೇನೆ.  ಸಮಾಜ ಸೇವೆ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ಚರ್ಚ್‌ನ ಧರ್ಮಗುರುಗಳಾದ ಡೇವಿಡ್ ಜೋಸೆಫ್ ಸಚಿವರನ್ನು ಸನ್ಮಾನಿಸಿ ಆರ್ಶೀವದಿಸಿದರು. ಎಸ್.ಎನ್.ಕೃಷ್ಣಯ್ಯ, ನಗರಸಭಾ ಸದಸ್ಯ ರಾಜಣ್ಣ, ಪಿ.ಆರ್.ರಮೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.