ಜಾನಪದ ಕಲೆಗಳ ಉಳಿವಿಗೆ ಆದ್ಯತೆ ನೀಡಿ: ಕೆ.ಷಡಕ್ಷರಿ
ಕನ್ನಡಪ್ರಭ ವಾರ್ತೆ , ತಿಪಟೂರು , ಜು. 2
ಇಂದಿನ ದಿನಗಳಲ್ಲಿ ಜಾನಪದ, ರಂಗಭೂಮಿ ಮತ್ತು ಸೋಬಾನ ಗೀತೆಗಳು ವಿನಾಶದಂಚಿಗೆ ತಲುಪುತ್ತಿದ್ದು, ಕಲೆ ಜೀವಂತವಾಗಿ ಉಳಿಯಬೇಕಾದರೆ ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಸಂಕಲ್ಪ ಶ್ರೀ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಗೀತೆ, ರಂಗಗೀತೆ ಮತ್ತು ಸೋಬಾನ ಗೀತೆಗಳ ಸ್ಪರ್ಧೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ಅಲ್ಪಸ್ವಲ್ಪ ಈ ಕಲೆಗಳು ಉಳಿದುಕೊಂಡಿದ್ದು, ಇವುಗಳ ಉಳಿವಿಗಾಗಿ ಹೆಚ್ಚು ಆದ್ಯತೆ ನೀಡಬೇಕು. ಕಲಾವಿದರಿಗೆ ಉತ್ತಮ ರೀತಿಯ ಸೇವೆ ದೊರೆಯಬೇಕೆಂದರು.
ಸಂಕಲ್ಪ ಶ್ರೀ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಡಿ.ಆರ್.ಬಸವರಾಜು ಮಾತನಾಡಿ ಕಲಾವಿದರಿಗೆ ಉತ್ತೇಜನ ನೀಡುವಂತಹ ಹಲವು ಕಾರ್ಯಕ್ರಮಗಳು ಸಂಸ್ಥೆಯ ಮುಖಾಂತರ ನಡೆಸುವುದಾಗಿ ತಿಳಿಸಿದರು.
ರಂಗ ಕಲಾವಿದ ಮತ್ತು ಚಲನಚಿತ್ರ ಕಲಾವಿದರಾದ ಕುಣಿಗಲ್ ನಾಗಭೂಷಣ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಸಂಸ್ಥೆಯ ವತಿಯಿಂದ ಯಕ್ಷಗಾನ ಕಲಾವಿದ ಚನ್ನಬಸಪ್ಪ, ಜಾನಪದ ಕಲಾವಿದರಾದ ಮಲ್ಲಮ್ಮ, ವಸಂತಕುಮಾರ ಅವರಿಗೆ ಸನ್ಮಾನಿಸಲಾಯಿತು. ನಂತರ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿಧರಿಗೆ ಬಹುಮಾನ ವಿತರಿಸಲಾಯಿತು.
ಕೆಜೆಪಿ ತಾ.ಅಧ್ಯಕ್ಷ ರಘುಪತಿ, ರಾಮಣ್ಣ, ಬಸವರಾಜು, ರಂಗಕಲಾವಿಧೆ ಹೇಮಲತಾ, ಲಿಂಗಪ್ಪ ಸಂಸ್ಥೆಯ ನಿರ್ದೇಶಕರಾದ ಲಕ್ಷೀದೇವಿ, ಪ್ರೇಮ, ಕಮಲ, ದಯಾನಂದ, ಯೋಗೀಶ್, ಲಕ್ಷ್ಮೀಲತಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

