20 ಲಕ್ಷ ಮೌಲ್ಯದ ಡ್ರಗ್ಸ್ ಪೌಡರ್ ವಶ: ನಕಲಿ ವೈದ್ಯ, ಪತ್ನಿ ಬಂಧನ
ಪಾವಗಡ: ಡ್ರಗ್ಸ್ ತಯಾರಿಕೆ ಜಾಲದ ಮನೆ ಮೇಲೆ ದಾಳಿ ನಡೆಸಿದ ಮಧುಗಿರಿ ಡಿವೈಎಸ್ಪಿ ಹಾಗೂ ಪೊಲೀಸ್ ಸಿಬ್ಬಂದಿ ಡ್ರಗ್ಸ್ ತಯಾರಕೆಯಲ್ಲಿ ನಿರತರಾಗಿದ್ದ ನಕಲಿ ವೈದ್ಯ ಹಾಗೂ ಆತನ ಪತ್ನಿಯನ್ನು ಬಂಧಿಸಿ ಅವರಲ್ಲಿದ್ದ ಸುಮಾರು 20 ಲಕ್ಷ ಮೌಲ್ಯದ ಡ್ರಗ್ಸ್ ಪೌಡರ್ ವಶಪಡಿಸಿಕೊಂಡ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ನಕಲಿ ವೈದ್ಯ ಆನಂದ್ (40), ಈತನ ಪತ್ನಿ ಶಾಲಿನಿ (35) ಸೇರಿದಂತೆ ಜಾಲದಲ್ಲಿ ನಿರತರಾದ ಇಬ್ಬರು ಮಹಿಳೆಯರು ಬಂಧಿತ ಆರೋಪಿಗಳು.
ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಆಯುರ್ವೇದ ಕ್ಲಿನಿಕ್ ತೆರೆದು ಎಲ್ಲಾ ರೋಗಗಳಿಗೂ ಔಷಧ ನೀಡುತ್ತಿದ್ದ ಡಾ.ಆನಂದ್ ಎಂಬುವರು ಪಟ್ಟಣದ ಪೆನ್ನಗೊಂಡ ರಸ್ತೆಯ ಅಲಂಕಾರ್ ಚಿತ್ರ ಮಂದಿರ ಬಳಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ಕಳೆದ ಒಂದು ವರ್ಷದಿಂದ ಆಯುರ್ವೇದ ಔಷಧಿ ತಯಾರಿಕೆಯಲ್ಲಿ ನಿರತರಾಗಿದ್ದರು.
ಈತ ಎಲ್ಲಾ ರೋಗಗಳಿಗೂ ಆಯುರ್ವೇದ ಔಷಧ ನೀಡಿ ಗುಣ ಪಡಿಸಲಾಗುತ್ತದೆ ಎಂದು ರೋಗಿಗಳನ್ನು ನಂಬಿಸಿ ಹಣ ಪಡೆಯುತ್ತಿದ್ದು ಹೆಚ್ಚಿನ ಹಣದ ಆಸೆಗೆ ಲೈಂಗಿಕ ಉತ್ತೇಜನದ ಔಷಧ ತಯಾರಿಸಿ ಕೊಡುತ್ತಿದ್ದ.
ಸಾರ್ವಜನಿಕರಿಂದ ಮಾಹಿತಿ ಪಡೆದ ಮಧುಗಿರಿ ಡಿವೈಎಸ್ಪಿ ಡಾ.ಸಿ.ಸೌಮ್ಯಲತಾ ಹಾಗೂ ಪೊಲೀಸ್ ಸಿಬ್ಬಂದಿ ಏಕಾಏಕಿ ದಾಳಿ ಮಾಡಿ ಮನೆಯಲ್ಲಿ ಔಷಧ ತಯಾರಿಕೆಯಲ್ಲಿ ನಿರತರಾಗಿದ್ದ ಡಾ.ರಮೇಶ್ ಹಾಗೂ ಆತನ ಪತ್ನಿ ಶಾಲಿನಿ ಸೇರಿದಂತೆ ಇಬ್ಬರು ಮಹಿಳಾ ಕೆಲಸಗಾರರನ್ನು ವಶಕ್ಕೆ ತೆಗೆದುಕೊಂಡು ಮನೆಯಲ್ಲಿದ್ದ 65 ಲೀಟರ್ Ú ಔಷಧ ಎಣ್ಣೆ, 26 ಲೀಟರ್ನ ಔಷಧ ಡಬ್ಬಗಳು, ಅಂತರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಸಂಪರ್ಕ ಹೊಂದಿದ್ದ 5 ಮೊಬೈಲ್ಗಳು, ಕಂಪ್ಯೂಟರ್ ಸೇರಿದಂತೆ ಸುಮಾರು 20ಲಕ್ಷ ಮೌಲ್ಯದ ಗಿಡಮೂಲಕೆಗಳ ಔಷಧ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆನಂದ್ ಅವರ ಆಯುವೇದ ವೈದ್ಯ ವೃತ್ತಿಗೆ ಸಂಬಂಧಪಟ್ಟಂತೆ ದಾಖಲೆ ಹಾಗೂ ಸರ್ಟಿಫಿಕೆಟ್ ಪರಿಶೀಲಿಸಿದಾಗ ವೃತ್ತಿಗೆ ಸಂಬಂಧಿಸಿದ ಯಾವುದೇ ರೀತಿಯ ಸರ್ಟಿಫಿಕೆಟ್ ದೊರೆತ್ತಿಲ್ಲವೆಂದು ಡಿವೈಎಸ್ಪಿ ಡಾ.ಸೌಮ್ಯಲತಾ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

