ವಿಫಲ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ
ತುಮಕೂರು: ಖಾಸಗಿ ಜಮೀನುಗಳಲ್ಲಿ ವಿಫಲಗೊಂಡ ತೆರೆದ ಬಾವಿಗಳು, ವಿಫಲಗೊಂಡ ಕೊಳವೆ ಬಾವಿಗಳು ಹಾಗೂ ಉಪಯೋಗಕ್ಕೆ ಬಾರದ ಗುಂಡಿಗಳು ಇದ್ದಲ್ಲಿ ಅವುಗಳನ್ನು ಕೂಡಲೇ ಮುಚ್ಚಿಸುವ ಸಂಬಂಧ ಸಾರ್ವಜನಿಕರು ಸೂಕ್ತ ಕ್ರಮ ಕೈಗೊಳ್ಳುವಂತೆ ತುಮಕೂರು ಉಪವಿಭಾಗಾಧಿಕಾರಿಗಳು ಸೂಚಿಸಿದ್ದಾರೆ. ತುಮಕೂರು ಉಪವಿಭಾಗದ ಎಲ್ಲಾ ತಾಲೂಕುಗಳಲ್ಲಿ ಬಹಳ ಹಿಂದಿನಿಂದಲೂ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ವಿಫಲಗೊಂಡ ಕೊಳವೆ ಬಾವಿಗಳು ಇದ್ದು, ಇವುಗಳಿಗೆ ಸೂಕ್ತ ರಕ್ಷಣೆ ಇರದೆ ಮಕ್ಕಳು, ಜನ, ಜಾನುವಾರುಗಳು ಬಿದ್ದು, ಆಕಸ್ಮಿಕ ಸಾವು ನೋವುಗಳು ಉಂಟಾಗುವ ಸಂಭವವಿದೆ. ಇದೀಗ ಮಳೆಗಾಲವಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಬಾವಿ ಮತ್ತು ಗುಂಡಿಗಳು ತುಂಬುವುದರಿಂದ ಮೇಲೆ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ರಕ್ಷಣಾ ಕಾರ್ಯನವನು ಕೈಗೊಳ್ಳುವುದು ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಉಪವಿಭಾಗದ ಎಲ್ಲಾ ತಹಸೀಲ್ದಾರರಿಗೆ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ಈಗಾಗಲೇ ನಿರ್ದೇಶನ ನೀಡಿ ಕೊಳವೆ ಬಾವಿಗಳು, ಗುಂಡಿಗಳು ಹಾಗೂ ವಿಫಲಗೊಂಡ ಕೊಳವೆ ಬಾವಿಗಳ ಸೂಕ್ತ ಸಮೀಕ್ಷೆ ನಡೆಸಿ, ಸಂಬಂಧಿಸಿದ ಬಾವಿಗಳ ಮಾಲೀಕರಿಗೆ ಸೂಕ್ತ ರಕ್ಷಣಾ ಕಾರ್ಯ ಕೈಗೊಳ್ಳಲು ಸೂಚನೆ ನೀಡುವಂತೆ ಸೂಚಿಸಿದ್ದಾರೆ.
ಉರ್ದು ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ಕೊರತೆ: ಪ್ರತಿಭಟನೆ
ಗುಬ್ಬಿ: ತಾಲೂಕಿನ ವಿವಿಧ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಉರ್ದು ಶಿಕ್ಷಕರ ಮತ್ತು ಮೂಲಭೂತ ಸೌಕರ್ಯ ಇಲ್ಲ ಎಂದು ಸಂಘಟನೆಗಳು ಪ್ರತಿಭಟಿಸಿದವು. ತಾಲೂಕಿನ ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬೀಗ ಜಡಿದ ಮುಸ್ಲಿಂ ವಿದ್ಯಾರ್ಥಿ ಹಾಗೂ ಪೋಷಕರು ಪ್ರತಿಭಟಿಸಿದರು. ತಾಲೂಕಿನ ವಿವಿಧ 26 ಹಿರಿಯ ಮತ್ತು ಕಿರಿಯ ಉರ್ದುಶಾಲೆಗಳಲ್ಲಿ ಕಳೆದ 7 ವರ್ಷಗಳಿಂದ ಶಿಕ್ಷಕರಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕದ ಸರಬರಾಜಿಲ್ಲ. ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಿಲ್ಲ ಎಂದರು. ಇದರಿಂದ ಇತ್ತ ಕನ್ನಡವೂ ಇಲ್ಲ ಅತ್ತ ಉರ್ದುವೂ ಇಲ್ಲದಂತಹ ಅತಂತ್ರ ಸ್ಥಿತಿ ತಾಲೂಕಿನ ಉರ್ದು ಶಾಲೆಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ ಎಂದ ಅವರು ತಾಲೂಕಿನಾದ್ಯಂತ ಸುಮಾರು 7 ಎಲ್.ಎ.ಎಸ್.ಹಾಗೂ 6 ಹೆಚ್.ಎ.ಎಸ್.ಒಟ್ಟು 24 ಹುದ್ದೆಗಳು ಖಾಲಿಯಿಂದ್ದು ತಕ್ಷಣವೇ ಈ ಹುದ್ದೆಗಳನ್ನು ಭರ್ತಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿದರು. ಈ ಪ್ರತಿಭಚನೆಯಲ್ಲಿ ಉರ್ದು ಶಾಲಾ ರಕ್ಷಣಾ ವೇದಿಕೆ ಅಧ್ಯಕ್ಷ ಮಹಮದ್ ಜಾವೇದ್, ಉಪಾಧ್ಯಕ್ಷ ನೂರ್ ಅಹಮದ್, ಪ.ಪಂ.ಸದಸ್ಯ ಮಹಮದ್ ಸಾಧಿಕ್ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

