ಸತ್ಯ ಎತ್ತಿ ಹಿಡಿಯಲು ಸಹಕರಿಸಿ
ತುಮಕೂರು: ಅನ್ನಭಾಗ್ಯ ಯೋಜನೆ ಜಾರಿಯಲ್ಲಿ ಅಡ್ಡಗಾಲು ಹಾಕುವ ಮಾಫಿಯಾಗಳನ್ನು ಹಾಗೂ ಇಲಾಖೆಯ ಮಾಫಿಯಾಗಳನ್ನು ಮಟ್ಟ ಹಾಕಲು, ಸತ್ಯ ಎತ್ತಿ ಹಿಡಿಯಲು ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.
ಸಗಟು ವ್ಯಾಪಾರಿಗಳು, ವರ್ತಕರ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಮೇಲ್ವೀಚಾರಣೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಟಾಸ್ಕ್ ಫೋರ್ಸ್ ರಚಿಸಬೇಕು. ಸಗಟು ಮಾರಾಟ ಮಳಿಗೆಗಳ ಬಳಿ ಮಪ್ತಿ ಪೊಲೀಸರನ್ನು ಹಾಕಬೇಕು. ನ್ಯಾಯಬೆಲೆ ಅಂಗಡಿಗಳು, ಸಗಟು ಆಹಾರ ಮಳಿಗೆಗಳ ಸಂಬಂಧ ಆರೋಪಗಳು ಬಂದಾಗ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವೆ. ದಯಮಾಡಿ ಈ ವಿಚಾರದಲ್ಲಿ ಜನಪ್ರತಿನಿಧಿಗಳು ತಲೆ ಹಾಕಬೇಡಿ. ಅರ್ಥ ಮಾಡಿಕೊಳ್ಳಿ. ಅಕ್ರಮ ಆಹಾರ ಪದಾರ್ಥ ಸಾಗಾಟ ವಾಹನಗಳನ್ನು ತಡೆದಾಗ, ಫೋನ್ ಮಾಡುವುದು ಬೇಡ. ಜನಪ್ರತಿನಿಧಿಗಳು ಸಹಕರಿಸಿ. ಜನಪ್ರತಿನಿಧಿಗಳು ನ್ಯಾಯಬೆಲೆ ಅಂಗಡಿಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಕಾರ್ಡ್ದಾರರಿಗೆ ಸ್ಪಂದಿಸಿ. ಇದನ್ನು ಪ್ರೀತಿಯಿಂದಲೇ ಹೇಳುತ್ತಿದ್ದೇನೆ. ಆಹಾರ ಇಲಾಖೆ ಮಾಫಿಯಾ, ಅನ್ನ ಭಾಗ್ಯ ಯೋಜನೆಗೆ ಅಡ್ಡಗಾಲಾಕುವ ಮಾಫಿಯಾಗಳನ್ನು ಮಟ್ಟ ಹಾಕಲು, ಸತ್ಯ ಎತ್ತಿ ಹಿಡಿಯಲು ಸಹಕರಿಸುವಂತೆ ಸತ್ಯಮೂರ್ತಿ ಮನವಿ ಮಾಡಿದರು. ಯೋಜನೆ ಜಾರಿಗೆ ನಾಗರಿಕರ ಸಹಕಾರ ಕೂಡ ಅಗತ್ಯ ಎಂದ ಡಿಸಿ, ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ 230 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 876 ನ್ಯಾಯಬೆಲೆ ಅಂಗಡಿಗಳಿವೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

