ತುಮಕೂರು

ಹರಿಕಥಾ ಕಾಲಕ್ಷೇಪಗಳಿಗೆ ಪ್ರೋತ್ಸಾಹ ಅಗತ್ಯ: ತು.ರಾ. ಸುಂದರರಾಜ್

Published On :

ಕ.ಪ್ರ.ವಾರ್ತೆ   ತುಮಕೂರು   ಜು.9
ಗ್ರಾಮಾಂತರ ಪ್ರದೇಶಗಳಲ್ಲಿ ಹರಿಕಥಾ ಕಾಲಕ್ಷೇಪಗಳಿಗೆ ಪ್ರೋತ್ಸಾಹ ಅಗತ್ಯ ಎಂದು ನಿವೃತ್ತ ಖಜಾನಾಧಿಕಾರಿ ತು.ರಾ. ಸುಂದರರಾಜ್ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ, ತಾಲೂಕು, ನಗರ ಕಸಾಪ ಆಶ್ರಯದಲ್ಲಿ ವಾರದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ  ಭಾಗಗಳಲ್ಲಿ ಆಶಾಢ, ಶ್ರಾವಣ ಮಾಸಗಳಲ್ಲಿ ಇಂತಹ ಹರಿಕಥಾ ಕಾಲಕ್ಷೇಪಗಳು ನಡೆಯುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು ಎಂದರು.
ಪ್ರಾಚಾರ್ಯ ಎನ್. ನಾಗಪ್ಪ ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವ್ಯಕ್ತಿಗಳೆಲ್ಲರೂ ಸಾಹಿತ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಅವರೆಲ್ಲರೂ ತಮ್ಮ ಬಡಾವಣೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಪ್ರಯತ್ನ ಮಾಡಿದರೆ ಪರಿಷತ್ನ ಸಾಧನೆಗೆ ಗೌರವ ಸಂದಾಯವಾಗುತ್ತದೆ ಎಂದು ತಿಳಿಸಿದರು..
ಅಧ್ಯಕ್ಷತೆ ವಹಿಸಿದ್ದ ನಗರ ಕಸಾಪ ಅಧ್ಯಕ್ಷೆ ಎಂ.ಸಿ. ಲಲಿತಾ ಮಾತನಾಡಿ ಆದಿಕವಿ ಪಂಪ, ಗುಬ್ಬಿ ವೀರಣ್ಣ ಮುಂತಾದ ಮೇರು ಕವಿ, ಕಲಾವಿದರ ಚಿಂತನೆಗಳನ್ನು ಅಳವಡಿಸಿಕೊಂಡು ನಗರದ ಬಡಾವಣೆಗಳವರು
ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಮುಂದಾದರೆ ನಾವು ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ನಿಂತ ನೀರಲ್ಲ: ಪತ್ರಕರ್ತ ಚಿ.ನಿ. ಪುರುಷೋತ್ತಮ ಮಾತನಾಡಿ ಸಾಹಿತ್ಯ ನಿಂತ ನೀರಲ್ಲ. ಹರಿಯುವ ನೀರು. ಅದು ಸಂಸ್ಕಾರ, ಪರಂಪರೆ, ಸಂಸ್ಕೃತಿ, ಕಲೆ ಸಾಹಿತ್ಯ ಇವೆಲ್ಲವನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಸ್ವಾಗತಾರ್ಹ. ತೆರೆಮರೆಯಲ್ಲಿ ಇನ್ನೂ ಅನೇಕ ಕಲಾವಿದರು, ಸಾಹಿತಿಗಳು ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಇಂತಹ ವೇದಿಕೆಗಳ ಮೂಲಕ ಅವರ ಸಾಧನೆ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಹರೀಶ್ ಆಚಾರ್ಯ ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಒಂದು ಕಾಲಮಿತಿಯಿಂದ ಜಿಲ್ಲೆಯ ಕಲಾವಿದರನ್ನು ಈ ಮೂಲಕ ಪರಿಷತ್ ಗುರುತಿಸಿ ವೇದಿಕೆಯಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅಕ್ಕಮ್ಮ ಕ್ರಾಂತಿಗೀತೆ ಹಾಡಿದರು. ಕಂಟಲಗೆರೆ ಸಣ್ಣಹೊನ್ನಯ್ಯ ನಿರೂಪಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು  ಭಾಸ್ಕರಾಚಾರ್, ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ. ರೇಣುಕಯ್ಯ, ನಿವೃತ್ತ ವೈದ್ಯಾಧಿಕಾರಿ ಕುಲಕರ್ಣಿ, ಚೆನ್ನಿಗರಾಮಪ್ಪ, ನರಸಿಂಹಯ್ಯ, ಸುಮ ಪ್ರಸನ್ನ, ಶ್ರೀಹರ್ಷ, ಸುಮ, ಅಬ್ಬಿನಹೊಳೆ ಸುರೇಶ್, ಸತೀಶ್ ಹೆಬ್ಬಾಕ, ಸಿದ್ದರಾಜ್ ಐವಾರ್, ಕುಂ.ಸಿ. ಸದಾಶಿವಯ್ಯ, ತು.ಮ. ಬಸವರಾಜು, ನಾಗರಾಜ ಶೈನಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.