ತುಮಕೂರು

ಪ್ರಶಸ್ತಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ

Published On :

ಕ.ಪ್ರ.ವಾರ್ತೆ   ಮಧುಗಿರಿ   ಜು.11  
ಪ್ರಶಸ್ತಿಗಳು ಸಾಹಿತ್ಯಿಕ ಹಾಗೂ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಮಧುಗಿರಿ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಎಂ.ಡಿ. ಶ್ರೀನಿವಾಸ್ ನುಡಿದರು. ಸಾಹಿತಿ ವಿಜಯ ಮೋಹನ್ ಅವರು ಬರೆದ ನೀರು ಕಾದಂಬರಿಗೆ ರಾಜ್ಯ ಮಟ್ಟದ ಪುರಸ್ಕಾರ ದೊರೆತ
ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾಹಿತಿಗಳು ಹೆಚ್ಚು ಜನ ಮುಖಿಯಾಗಲು ಪ್ರಶಸ್ತಿಗಳು ಪ್ರೇರೇಪಿಸುವ ಜೊತೆಗೆ ಮನುಷ್ಯತ್ವವನ್ನು ಸದಾ ಎಚ್ಚರಿಸುತ್ತದೆ ಎಂದ ಅವರು, ಸಾಹಿತ್ಯ ಸಾಮಾಜಿಕ ಬದುಕಿನ ನೋವು ನಲಿವುಗಳ ವಾಸ್ತವ ಚಿತ್ರಣ, ಮಾನವೀಯತೆ ಅದರ ಕರ್ತವ್ಯ ಸೂಚಿಸುತ್ತದೆ. ಹಾಗಾಗಿ ಜನ ಮುಖಿ ಸಾಹಿತ್ಯ ಸದಾ ಮನ್ನಣೆಗೆ ಪ್ರಾಪ್ತವಾಗುತ್ತದೆ. ವಿಜಯ ಮೋಹನ್ ಬರೆದಿರುವ ನೀರು ಕಾದಂಬರಿ ಅತ್ಯಂತ ಶ್ರೇಷ್ಠವಾದುದು. ಆ ನಿಟ್ಟಿನಲ್ಲಿ ಅವರ ಬದುಕು ಇನ್ನಷ್ಟು ಉಜ್ವಲವಾಗಲಿ ಎಂದು ಶ್ರೀನಿವಾಸ್ ಹಾರೈಸಿದರು.
ಪ್ರೊ.ಮ.ಲ.ನ.ಮೂರ್ತಿ ಬದುಕಿನಲ್ಲಿ ಮಾನವೀಯ ಮೌಲ್ಯಕ್ಕೆ ಅಧಿಕ ಒತ್ತು ಕೊಡಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ ಸಮಾಜ ವಿದ್ಯಾಮಾನಗಳನ್ನು ಧ್ವನಿಸುತ್ತದೆ. ಇವುಗಳಲ್ಲಿ ತೊಡಗಿಸಿ ಕೊಂಡಾಗ ಅಂತರಂಗದ ಅನಾವರಣವಾಗುತ್ತದೆ ಎಂದರು.



ಅನ್ನ ಯೋಜನೆ ಜಾರಿ
ಪಾವಗಡ: ಚುನಾವಣೆ ಪ್ರಣಾಳಿಕೆಯಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅನ್ನ ಯೋಜನೆ ಜಾರಿಗೆ ತಂದಿದ್ದು ಯೋಜನೆಯಿಂದ ರಾಜ್ಯಾದ್ಯಂತ ಲಕ್ಷಾಂತರ ಬಡ ಜನರ ಹಸಿವು ನೀಗಿಸಲಿದೆ. ಅಲ್ಲದೇ ಇದರ ಜೊತೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನತೆಯ ಆಶೋತ್ತರಗಳಿಗೆ ಸರ್ಕಾರ ಬದ್ಧವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್  ಮುಖಂಡ ಜಂಪಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಡವರ, ರೈತರ ಸೇರಿದಂತೆ  ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಗತಿಗೆ ಸಹಕಾರಿಯಾಗಿದೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಬಡಜನತೆ ಪರ ಕೆಲಸ ಮಾಡುತ್ತಿದ್ದಾರೆ ಎಂದರು. ಗಡಿ ಭಾಗದ ಪಾವಗಡ ತಾ, ನಿರಂತರ ಮಳೆ ಬೆಳೆ ಇಲ್ಲದೇ ಜನತೆ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದು ಜೀವನ ನಡೆಸುವುದು ದುಸ್ತಾರವಾದ ಹಿನ್ನೆಲೆಯಲ್ಲಿ ಅನ್ನ ಯೋಜನೆಯಂತಹ ಮಹತ್ತರ ಯೋಜನೆ ಜಾರಿಯಿಂದ ಇಲ್ಲಿನ ಲಕ್ಷಾಂತರ ಬಡ ಜನರ ಜೀವನ ಸುಧಾರಣೆಗೆ ಅನುಕೂಲವಾಗಿದೆ. ಅರ್ಹರಿಗೆ ಪಡಿತರ ಕಾರ್ಡುಗಳು ದೊರೆಯುವ ಕೆಲಸ ಶೀಘ್ರವಾಗಬೇಕಿದೆ. ಜಿಲ್ಲಾಧಿಕಾರಿಗಳು ಬಡವರ , ನಿರ್ಗತಿಕರ ಬಗ್ಗೆ ಕಾಳಜಿ ವಹಿಸಿ ಅರ್ಹರಿಗೆ ಕಾರ್ಡು ಸುಗಮವಾಗಿ ದೊರೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು.
6 ಮಂದಿ ವಶಕ್ಕೆ
ಕುಣಿಗಲ್: ಪಟ್ಟಣದ ಕೊಲ್ಲಾಪುರದಮ್ಮ ದೇವಾಲಯ ಸಮೀಪದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಂದರ್ ಬಾಹೆರ್ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ತಂಡದ ಮೇಲೆ ಡಿವೈಎಸ್ಪಿ ಉಮಾರಾಣಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಆರು ಮಂದಿಯನ್ನು ವಶಕ್ಕೆ ಪಡೆದು, 15,990 ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರ ರಾತ್ರಿ 1.30ರ ಸಮಯದಲ್ಲಿ ಇಸ್ಪೀಟ್ ಆಟ ನಡೆಯುತ್ತಿದ್ದ ಬಗ್ಗೆ ಸಾರ್ವಜನಿಕರೊಬ್ಬರು ಡಿವೈಎಸ್ಪಿಯವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಸತೀಶ್, ರಾಮಣ್ಣ ಸೇರಿದಂತೆ ನಾಲ್ವರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.